‘ಕಾವೇರಿ ಕೂಗು ಯೋಜನೆ’ ಅಡಿಯಲ್ಲಿ ₹82 ಕೋಟಿ ಹಣ ಸಂಗ್ರಹ -ಹೈಕೋರ್ಟ್​ಗೆ ಈಶಾ ಫೌಂಡೇಶನ್ ಮಾಹಿತಿ

‘ಕಾವೇರಿ ಕೂಗು ಯೋಜನೆ’ ಅಡಿಯಲ್ಲಿ ₹82 ಕೋಟಿ ಹಣ ಸಂಗ್ರಹ -ಹೈಕೋರ್ಟ್​ಗೆ ಈಶಾ ಫೌಂಡೇಶನ್ ಮಾಹಿತಿ

ಬೆಂಗಳೂರು: ಕಾವೇರಿ ಕೂಗು ಯೋಜನೆಯನ್ನ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನ ಹೈಕೋರ್ಟ್​ನ ಮುಖ್ಯ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ ಅಮೈಕಸ್ ಕ್ಯೂರಿ ವಾದ ಮಂಡಿಸಿ.. ಅಭಿಯಾನದಲ್ಲಿ ಪ್ರತಿ ಮರಕ್ಕೆ 42 ರೂ. ಹಣ ಸಂಗ್ರಹಿಸಲಾಗುತ್ತಿದೆ. ಈಶಾ ಫೌಂಡೇಶನ್ ಟ್ರಸ್ಟ್ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದೆ. ಖಾಸಗಿ, ಅರಣ್ಯ ಭೂಮಿಯಲ್ಲೂ ಮರ ಬೆಳಸುವ ಯೋಜನೆ ಇದಾಗಿದೆ. ಸರ್ಕಾರದಿಂದ ಈಗಾಗಲೇ ಮರ ಬೆಳೆಸಲು ಹಣ ನಿಗದಿ ಮಾಡಿದೆ. ಜನರಿಂದ ಸಂಗ್ರಹವಾಗಿರುವ ಹಣ ದುರುಪಯೋಗ ಆಗಬಾರದು. ಸಾವಿರಾರು ಕೋಟಿ ಹಣ ಸಂಗ್ರಹವಾದ್ರೆ ದುರುಪಯೋಗವಾಗಬಹುದು ಅಂತಾ ಹೈಕೋರ್ಟ್​ ವಿಭಾಗೀಯ ಪೀಠಕ್ಕೆ ಅಮೈಕಸ್ ಕ್ಯೂರಿ ಹೇಳಿದರು.

blank

ಈ ಹೇಳಿಕೆಗೆ ಈಶಾ ಫೌಂಡೇಶನ್ ಪರ ವಕೀಲರ ಆಕ್ಷೇಪಣೆ ವ್ಯಕ್ತಪಡಿಸಿದರು. ಇದು ಖಾಸಗಿ ಭೂಮಿಯಲ್ಲಿ ಮರ ಬೆಳೆಸುವ ಯೋಜನೆಯಾಗಿದೆ. ಅರಣ್ಯ ನಾಶದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಇದೆ. ಮರ ಬೆಳೆದರೆ ಮಳೆ ಹೆಚ್ಚುತ್ತದೆಂಬ ಸದುದ್ದೇಶದಿಂದ ಯೋಜನೆ ಮಾಡಲಾಗಿದೆ. ಈವರೆಗೂ ಯೊಜನೆಗೆ 82 ಕೋಟಿ ಹಣ ಸಂಗ್ರಹಿಸಲಾಗಿದೆ. ಪಬ್ಲಿಕ್ ಟ್ರಸ್ಟ್ ಆಗಿರುವುದರಿಂದ ದುರುಪಯೋಗ ಸಾಧ್ಯವಿಲ್ಲ. ಯೋಜನೆ ಶ್ಲಾಘಿಸಿ ಈಶಾ ಫೌಂಡೇಶನ್​ಗೆ ಅನೇಕ ಪ್ರಶಸ್ತಿ ಸಿಕ್ಕಿವೆ. ಈ ಪಿಐಎಲ್ ವಜಾಗೊಳಿಸಲು ಟ್ರಸ್ಟ್ ಪರ ವಕೀಲರ ಮನವಿ ಮಾಡಿಕೊಂಡರು. ವಾದ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ ಆದೇಶವನ್ನ ಕಾಯ್ದಿರಿಸಿತು.

Source: newsfirstlive.com Source link