ಮತ್ತೊಂದು ಹೈ ಪ್ರೊಫೈಲ್ ಕೇಸ್ ಆಗುತ್ತಾ ಗೋವಿಂದಪುರ ಡ್ರಗ್ ಪ್ರಕರಣ?

– ಕೇರಳದ ಸಿನಿ ಅಂಗಳಕ್ಕೂ ಲಿಂಕ್? ನಿರ್ದೇಶಕನಿಗೆ ನೋಟಿಸ್?

ಬೆಂಗಳೂರು: ಗೋವಿಂದಪುರ ಡ್ರಗ್ಸ್ ಕೇಸ್ ಮತ್ತೊಂದು ಹೈ ಫ್ರೊಫೈಲ್ ಪ್ರಕರಣವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಪೊಲೀಸರ ಬಲೆಯಿಂದ ತಪ್ಪಿಸಿಕೊಂಡೆ ಅಂತಿದ್ದವರಿಗೆ ಮತ್ತೆ ಶಾಕ್ ಎದುರಾಗಿದೆ.

ಎರಡು ದಿನ ವಿಚಾರಣೆ ಎದುರಿಸಿದ್ರೆ ಸಾಕು ಅಂತಿದ್ದವರಿಗೆ ಪೊಲೀಸರು ಶಾಕ್ ನೀಡಲು ತಯಾರಿ ನಡೆಸಿದ್ದಾರೆ. ನಿತ್ಯ ವಿಚಾರಣೆ ಎದುರಿಸುತ್ತಿರುವ ಡಿಜೆ ವಚನ್ ಚಿನ್ನಪ್ಪ ಮತ್ತು ಉದ್ಯಮಿ ಭರತ್ ಗೆ ಪ್ರಾಥಮಿಕ ತನಿಖೆಯಲ್ಲಿ ಇವರು ಡ್ರಗ್ ಸೇವನೆ ಬಗ್ಗೆ ಅಷ್ಟೇ ಪೊಲೀಸರಿಗೆ ಮಾಹಿತಿ ದೊರೆತಿದೆ. ಆದರೆ ಮೆಡಿಕಲ್ ರಿಪೋರ್ಟ್ ನಲ್ಲಿ ಡ್ರಗ್ ಸೇವನೆ ಬಗ್ಗೆ ಸಾಬೀತಾಗಿಲ್ಲ ಎನ್ನಲಾಗುತ್ತಿದೆ.

ಮೆಡಿಕಲ್ ಟೆಸ್ಟ್ ನಂತರ ಮುಂದಿನ ಹಂತದ ವಿಚಾರಣೆಗೆ ಸಿದ್ಧರಾಗಿರುವ ಪೊಲೀಸರು, ಇಂದು ಹೇರ್ ಫಾಲಿಕನ್ ಟೆಸ್ಟ್ ಮಾಡಿಸಲು ಕೋರ್ಟಿಗೆ ಅರ್ಜಿ ಹಾಕಲು ತಯಾರಿ ನಡೆಸಿದ್ದಾರೆ. ಸಿಸಿಬಿ ಕೇಸ್ ನಲ್ಲಿ ಆರೋಪಿಗಳ ಕೂದಲು, ಮೂತ್ರ ಮತ್ತು ರಕ್ತ ಮಾದರಿ ಪರೀಕ್ಷೆ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ವಚನ್ ಮತ್ತು ಭರತ್ ಪರೀಕ್ಷೆ ಮಾಡಿಸಲು ಪೊಲೀಸರ ತಯಾರಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಕೋರ್ಟ್ ನಿಂದ ಅನುಮತಿ ಸಿಕ್ಕರೆ ಸಂಜೆ ಕೂದಲು, ಮೂತ್ರ ಮತ್ತು ರಕ್ತದ ಮಾದರಿಹೈದಾರಬಾದ್ ನ ಕೇಂದ್ರ ವಿಧಿ ವಿಧಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುತ್ತೆ.

blank

ಇತ್ತ ಥಾಮಸ್ ವಿಚಾರಣೆ ವೇಳೆ ಇನ್ನಷ್ಟು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಕೇವಲ ಲೋಕಲ್ ನಲ್ಲಿ ಅಷ್ಟೇ ಅಲ್ಲದೆ ನ್ಯಾಷನಲ್ ಲೆವೆಲ್ ನಲ್ಲೂ ಡ್ರಗ್ ಡೀಲಿಂಗ್ ಶಂಕೆಯಾಗಿದೆ. ಮಾಲಿವುಡ್ ನಿರ್ದೇಶಕನ ಜೊತೆ ರೆಗ್ಯೂಲರ್ ಟಚ್ ನಲ್ಲಿದ್ದ ಆಫ್ರಿಕನ್ ಪೆಡ್ಲರ್ ಥಾಮಸ್, ಮೊಬೈಲ್ ರಿಟ್ರಿವ್ ವೇಳೆ ಡ್ರಗ್ ಕುರಿತ ಚಾಟಿಂಗ್ ಪೊಲೀಸರಿಗೆ ಲಭ್ಯವಾಗಿದೆ. ಇದನ್ನೂ ಓದಿ: ಮೋಸ್ಟ್ ವಾಂಟೆಡ್ ಡ್ರಗ್ ಡೀಲರ್ ಮ್ಯಾಶಿ ಅರೆಸ್ಟ್

ಇದೇ ಪ್ರಕರಣದಲ್ಲಿ ಕೇರಳದ ಸಿನಿ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿರೋ ಹೆಸಾರಂತ ನಿರ್ದೇಶಕ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಇವರ ವಿಚಾರಣೆ ನಂತರ ಮಾಲಿವುಡ್ ನಿರ್ದೇಶಕನಿಗೂ ನೋಟಿಸ್ ನೀಡುವ ಸಾಧ್ಯತೆಗಳಿವೆ. ಸೋನಿಯಾ ಅಗರ್ ವಾಲ್ ಹಾಗು ಆಕೆಯ ಪ್ರಿಯಕರನನ್ನ ಪೊಲೀಸರು ಡ್ರಗ್ ಸಂಬಂಧ ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ದೋಹಾದಲ್ಲಿ ಭಾರತ-ತಾಲಿಬಾನಿಗಳ ಮೊದಲ ಔಪಚಾರಿಕ ಮಾತುಕತೆ

Source: publictv.in Source link