ರಾಜಮೌಳಿ ಕಲ್ಪನೆಯಲ್ಲಿ ಅಲ್ಲು-ಚರಣ್ ಸಮಾಗಮ.. ಮೆಗಾ ಫ್ಯಾಮಿಲಿ ಸ್ಟಾರ್ಸ್​ಗೆ ಮೌಳಿ ಡೈರೆಕ್ಷನ್?

ರಾಜಮೌಳಿ ಕಲ್ಪನೆಯಲ್ಲಿ ಅಲ್ಲು-ಚರಣ್ ಸಮಾಗಮ.. ಮೆಗಾ ಫ್ಯಾಮಿಲಿ ಸ್ಟಾರ್ಸ್​ಗೆ ಮೌಳಿ ಡೈರೆಕ್ಷನ್?

ನಮ್ಮ ಕನ್ನಡದಲ್ಲಿ ವಾಟ್ ನೆಕ್ಟ್ಸ್ ಯಶ್ ಅನ್ನೋ ಪ್ರಶ್ನೆಗೆ ಹೇಗೆ ಇನ್ನೂ ಉತ್ತರ ಸಿಕ್ಕಿಲ್ವೋ ಅದೇ ರೀತಿ ಪಕ್ಕದ ಟಾಲಿವುಡ್​​ನಲ್ಲಿ ವಾಟ್ಸ್ ನೆಕ್ಸ್ಟ್ ರಾಜಮೌಳಿ ಅನ್ನೋದಕ್ಕೆ ಉತ್ತರ ಸಿಕ್ಕಿಲ್ಲ.. ಆದ್ರೆ ಈಗ ಟಾಲಿವುಡ್ ಮಾಯ ನಗರಿಯಿಂದ ರಾಜಮೌಳಿ ಮುಂದಿನ ಸಿನಿಮಾದ ಬಗ್ಗೆ ಒಂದು ಥ್ರಿಲ್ಲಿಂಗ್ ಅಪ್​​ಡೇಟ್ ಸಿಕ್ಕಿದೆ.. ಜಕ್ಕಣ್ಣನ ಮುಂದಿನ ಸಿನಿಮಾ ಕೂಡ ಮಲ್ಟಿ ಸ್ಟಾರರ್ ಸಿನಿಮಾವಂತೆ.

ಟಾಲಿವುಡ್​​ನ ಚಿತ್ರ ಬ್ರಹ್ಮ , ಸೋಲಿಲ್ಲದ ಸಿನಿ ಸೂತ್ರಧಾರ ಎಸ್​.ಎಸ್.ರಾಜಮೌಳಿ ಮೂರೊತ್ತು ಥ್ರಿಬಲ್ ಆರ್, ಥ್ರಿಬಲ್ ಆರ್ ಅಂತ ಕನವರಿಸುತ್ತಿದ್ದಾರೆ. ನಮ್ಮ ದೇಶ ಉಕ್ರೇನ್ ದೇಶಗಳನೆಲ್ಲ ಸುತ್ತಿ ಹಂಗೂ ಹಿಂಗೂ 3 ವರ್ಷ 3 ತಿಂಗಳು 7 ದಿನ RRR ಶೂಟಿಂಗ್ ಮಾಡಿಮುಗಿಸಿದ್ದಾರೆ. ಸದ್ಯಕ್ಕಂತೂ ರೌದ್ರ ರಣ ರುಧಿರ ಸಿನ್ಮಾ ಅಕ್ಟೋಬರ್ 13ನೇ ತಾರೀಖ್ ತೆರೆಕಾಣೋ ಲಕ್ಷಣಗಳು ಕಾಣ್ತಿಲ್ಲ. ಮುಂದಿನ ವರ್ಷಕ್ಕೆ ಸಿನಿಮಾ ರಿಲೀಸ್ ಹೊಗಬಹುದು. ಈ ವಿಚಾರವನ್ನ ನಾವೇ ನಿಮ್ಗೆ ಹೇಳಿ ಮುಗಿಸಾಗಿದೆ. ಈಗ ಹೊಸ ವಿಚಾರವೆನಪ್ಪ ಅಂದ್ರೆ ರಾಜಮೌಳಿ ನೆಕ್ಸ್ಟ್ ಸಿನಿಮಾದ ಬಗ್ಗೆ ಟಾಲಿವುಡ್ ಮಾಯ ನಗರಿಯಲ್ಲಿ ಚರ್ಚೆಯ ಬಗ್ಗೆ.

blank

ಕೆಲ ದಿನಗಳ ಹಿಂದೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆ ಫಸ್ಟ್ ಟೈಮ್ ರಾಜಮೌಳಿ ಸಿನಿಮಾ ಮಾಡ್ತಾರೆ ಅನ್ನೋ ವಿಚಾರಗಳು ಸದ್ದಿಲ್ಲದೆ ಸರ್ಕ್ಯೂಲೆಟ್ ಆಗಿತ್ತು. ಈಗ ರಾಜಮೌಳಿ ನೆಕ್ಸ್ಟ್ ಸಿನಿಮಾದ ಬಗ್ಗೆ ಮತ್ತೊಂದು ಮಹತ್ತರ ಸುದ್ದಿ ಹೈದ್ರಾಬಾದ್​​​ನಲ್ಲಿ ಸ್ಫೋಟವಾಗಿದೆ. ಥ್ರಿಬಲ್ ಆರ್ ಸಿನಿಮಾದ ನಂತರ ಮತ್ತೊಮ್ಮೆ ರಾಜಮೌಳಿ ಮಲ್ಟಿ ಸ್ಟಾರರ್ ಸಿನಿಮಾ ಮಾಡೋ ಸ್ಕೆಚ್ ಹಾಕಿದ್ದಾರಂತೆ.

ಜೂನಿಯರ್ ಎನ್​​.ಟಿ.ಆರ್​ ಮತ್ತು ಮೆಗಾಪವರ್ ಸ್ಟಾರ್ ಇಬ್ಬರನ್ನ ಒಟ್ಟಿಗೆ ಸೇರಿಸಿ ಸಿನಿಮಾ ಮಾಡೋದು ನಿಜಕ್ಕೂ ಸವಾಲು. ಒಬ್ಬ ಹೀರೋನಾ ಹೆಚ್ಚ್ ಮಾಡಿ ಒಬ್ಬ ಹೀರೋನಾ ಕಡಿಮೆ ಮಾಡಿದ್ರೆ ಫ್ಯಾನ್ಸ್ ದಂಗೆ ದಾಂದಲೆ ಮಾಡ್ತಾರೆ. ಜೂನಿಯರ್ ಎನ್​.ಟಿ.ಆರ್ ಫ್ಯಾನ್ಸ್ ಹಾಗೂ ರಾಮ್ ಚರಣ್ ಫ್ಯಾನ್ಸ್ ಈಗಾಗಲೇ ಥ್ರಿಬಲ್ ಆರ್ ಮೇಲೆ ಕಣ್ಣು ಇಟ್ಟಿದ್ದಾರೆ. ಈ ರೀತಿಯ ಹೀಟ್ ನಿರೀಕ್ಷೆಗಳು ಇರೋವಾಗಲೇ ಮತ್ತೊಂದು ಮಲ್ಟಿ ಸ್ಟಾರರ್ ಸಿನಿಮಾವನ್ನ ರಾಜಮೌಳಿ ಮಾಡ್ತಾರಾ..? ಮಾಡಿದ್ರೆ ಯಾಱರು ಹೀರೋ ಆಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್.

blank

ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ಇಬ್ಬರು ಸಂಬಂದಿಕರು ಹೆಚ್ಚಾಗಿ ಚಿಕ್ಕನಿಂದ ಒಟ್ಟಿಗೆ ಬೆಳೆದವರು. ಚಿರಂಜೀವಿ ಫ್ಯಾಮಿಲಿ ಈ ಇಬ್ಬರು ಒಂದೇ ಸಿನಿಮಾದಲ್ಲಿ ಕಂಡ್ರೇ ಅಭಿಮಾನಿಗಳಿಗೆ ನಿಜಕ್ಕೂ ದೀಪಾವಳಿನೇ. ರಾಜಮೌಳಿಯವರ 12 ಸಿನಿಮಾಗಳಲ್ಲಿ ಇದೂವರೆಗೂ ಅಲ್ಲು ಅರ್ಜುನ್ ಅವರಿಗೆ ರಾಜಮೌಳಿ ಡೈರೆಕ್ಷನ್ ಮಾಡಿಲ್ಲ. ಈ ಕಾರಣಕ್ಕೆ ಈ ಸುದ್ದಿ ಈಗ ಟಾಲಿವುಡ್ ಗಗನದ ಗಾಳಿಪಟವಾಗಿದೆ.

ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ನಲ್ಲಿ ರಾಜಮೌಳಿ ನೆಕ್ಸ್ಟ್ ಸಿನಿಮಾ ಮಾಡ್ತಾರೆ. ಈ ಹಿಂದಿನಿಂದಲೂ ಗೀತಾ ಆರ್ಟ್ಸ್ ಗೂ ರಾಜಮೌಳಿಗೂ ಉತ್ತಮ ಬಾಂಧವ್ಯವಿದೆ. ಹೀಗಾಗಿ ರಾಜಮೌಳಿ ಅಲ್ಲು ಅರ್ಜುನ್​​ ಮತ್ತು ರಾಮ್​ ಚರಣ್​​ಗೆ ಹಾಕೊಂಡು ಸಿನಿಮಾ ಮಾಡ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಕ್ಲಿಯರ್ ಕಟ್ ಸುದ್ದಿಗೆ ಜೀವ ಬರಲು ಕೊಂಚ ಕಾಲ ಅಭಿಮಾನಿಗಳು ಕಾಯಲೇ ಬೇಕು.

Source: newsfirstlive.com Source link