ಹಲವು ತಿಂಗಳ ಬಳಿಕ ಸಮುದ್ರಕ್ಕಿಳಿದ ಮೀನುಗಾರರಿಗೆ ಸಿಕ್ಕಿದ್ದು ₹1.33 ಕೋಟಿಯ ಬಂಪರ್

ಹಲವು ತಿಂಗಳ ಬಳಿಕ ಸಮುದ್ರಕ್ಕಿಳಿದ ಮೀನುಗಾರರಿಗೆ ಸಿಕ್ಕಿದ್ದು ₹1.33 ಕೋಟಿಯ ಬಂಪರ್

ಮಳೆಗಾಲದ ಹಿನ್ನೆಲೆ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರದ ಕಡಲ ತೀರಗಳಲ್ಲಿ ಮೀನುಗಾರಿಕೆಯನ್ನ ನಿಷೇಧಿಸಲಾಗಿತ್ತು. ಇದೀಗ ಮತ್ತೆ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಇದೇ ಖುಷಿಯಲ್ಲಿ ಸಮುದ್ರಕ್ಕಿಳಿದು ಮೀನು ಹಿಡಿಯಲು ಮುಂದಾದ ಮೀನುಗಾರನೋರ್ವನಿಗೆ 1.33 ಕೋಟಿಯ ಬಂಪರ್ ಸಿಕ್ಕಿದೆ.

ಪಲ್ಘರ್ ಜಿಲ್ಲೆಯ ಮೀನುಗಾರ ಚಂದ್ರಕಾಂತ್ ತಾರೆ ಆಗಸ್ಟ್ 28 ರಂದು 8 ಜನರೊಂದಿಗೆ ಮೀನುಗಾರಿಕೆಗೆ ತೆರಳಿದ್ದಾರೆ. ತೀರದಿಂದ ಸುಮಾರು 20 ರಿಂದ 25 ನಾಟಿಕಲ್ ಮೈಲಿ ದೂರದಲ್ಲಿ ಮೀನು ಹಿಡಿಯಲು ಬಲೆ ಬೀಸಿದ್ದಾರೆ. ಆದರೆ ಈ ಬಾರಿ ಮೀನು ಹಿಡಿಯಲು ಎಸೆದ ಬಲೆ ತನ್ನ ಬದುಕನ್ನೇ ಬದಲಿಸಲಿದೆ ಅನ್ನೋದು ಗೊತ್ತಿರಲಿಲ್ಲ.. ತಾರೆ ಮತ್ತು ಟೀಂ ಎಸೆದ ಬಲೆಗೆ 157 ಕೆ.ಜಿ. ಘೋಲ್ ಮೀನುಗಳು ಸಿಕ್ಕಿವೆ. ಈ ಮೀನುಗಳನ್ನ ಸಮುದ್ರದ ಚಿನ್ನ ಅಂತಲೇ ಕರೆಯಲಾಗುತ್ತೆ.

ಘೋಲ್ ಮೀನುಗಳನ್ನ ಮೆಡಿಸಿನಲ್ ಮತ್ತು ಫಾರ್ಮಾಸಿಟಿಕಲ್ ಉತ್ಪಾದನೆಯಲ್ಲಿ ಬಳಸಲಾಗುತ್ತೆ. ಹೀಗಾಗಿ ಹಾಂಗ್ ಕಾಂಗ್, ಮಲೇಶಿಯಾ, ಥೈಲ್ಯಾಂಡ್, ಇಂಡೋನೇಶಿಯಾ, ಸಿಂಗಾಪುರ್ ಮತ್ತು ಜಪಾನ್​ನಲ್ಲಿ ಈ ಮೀನುಗಳಿಗೆ ದೊಡ್ಡಮಟ್ಟದ ಬೇಡಿಕೆ ಇದೆ.

ಇನ್ನು ತಾರೆ ಅಂಡ್ ಟೀಂ ಹಿಡಿದ ಮೀನುಗಳನ್ನ ಪಲ್ಘಾರ್​ನಲ್ಲಿ ಹರಾಜು ಹಾಕಲಾಗಿದ್ದು ಉತ್ತರ ಪ್ರದೇಶ ಮೂಲದ ವ್ಯಾಪಾರಿಗಳು 1.33 ಕೋಟಿ ನೀಡಿ ಈ ಮೀನುಗಳನ್ನ ಖರೀದಿಸಿದ್ದಾರೆ. ಜಲಮಾಲಿನ್ಯದಿಂದಾಗಿ ಈ ಭಾಗದಲ್ಲಿ ಇಂಥ ಮೀನುಗಳ ಸಂಖ್ಯೆ ಕಡಿಮೆಯಾಗಿದ್ದು ಆಳಸಮುದ್ರದಲ್ಲಿ ಮಾತ್ರವೇ ಇಂಥ ಮೀನುಗಳನ್ನು ಹಿಡಿಯಲು ಸಾಧ್ಯ.

Source: newsfirstlive.com Source link