ಕೋವಿಡ್ ಮೂರನೇ ಅಲೆ ಆತಂಕ, ನಿಷೇಧದ ನಡುವೆಯೂ ಅದ್ಧೂರಿಯಾಗಿ ನಡೆದ ಜಾತ್ರೆ

– ಸುರಪುರದ ವೇಣುಗೋಪಾಲಸ್ವಾಮಿ ಜಾತ್ರೆ

ಯಾದಗಿರಿ: ಕೋವಿಡ್ ಮೂರನೇ ಅಲೆ ಆತಂಕ ಮತ್ತು ನಿಷೇಧದ ನಡುವೆಯೂ ಸುರಪುರದ ವೇಣುಗೋಪಾಲಸ್ವಾಮಿ ಜಾತ್ರೆ ಅದ್ಧೂರಿಯಾಗಿ ನಡೆದಿದೆ.

ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿರುವ ವೇಣುಗೋಪಾಲಸ್ವಾಮಿಯ ಪುರಾತನ ದೇವಸ್ಥಾನವಾಗಿದ್ದು, ಸಾವಿರಾರು ಜನ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲಾಡಳಿತದ ಆದೇಶಕ್ಕೆ ಡೋಂಟ್ ಕೇರ್ ಎಂದ ಜನ, ದೇವರ ದರ್ಶನಕ್ಕೆ ಮುಗಿಬಿದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದರು ಸಹ ಯಾವುದೇ ಕ್ರಮವಹಿಸಿದ ಪೊಲೀಸ ಇಲಾಖೆ ಜಾಣ ನಿದ್ದೆಗೆ ಜಾರಿತ್ತು. ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಜಾತ್ರೆ ನಡೆದಿದ್ದು, ಜಿಲ್ಲಾಡಳಿತಕ್ಕೆ ಹೊಸ ತಲೆ ನೋವು ಶುರವಾಗಿದೆ. ಇದನ್ನೂ ಓದಿ: ನೀವು ಹೇಳಿದಂತೆಯೇ ಎಲ್ಲವನ್ನೂ ಮಾಡಿದ್ದೀನಿ, ನೀವು ಏನು ಮಾಡಿದ್ರಿ ಹೇಳಿ?: ಸಚಿವ ಗೋಪಾಲಯ್ಯ

Source: publictv.in Source link