₹5 ಕೋಟಿಗೆ ಏರಿಕೆಯಾದ ನಟಿ ಕಿಯಾರಾ ಅಡ್ವಾಣಿ ರೆಮ್ಯೂನರೇಷನ್..?

₹5 ಕೋಟಿಗೆ ಏರಿಕೆಯಾದ ನಟಿ ಕಿಯಾರಾ ಅಡ್ವಾಣಿ ರೆಮ್ಯೂನರೇಷನ್..?

ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ನಟನೆಯ ‘ಶೇರ್​ಷಾ’ ಸಿನಿಮಾ ಒಟಿಟಿ ಮೂಲಕ ಬಿಡುಗಡೆಗೊಂಡು ದೊಡ್ಡ ಮಟ್ಟದಲ್ಲಿ ಹಿಟ್​ ಆದ ಹಿನ್ನಲೆ ಚಿತ್ರತಂಡ ಇತ್ತೀಚೆಗಷ್ಟೆ ಚಿತ್ರದ ಸಕ್ಸಸ್​ ಪಾರ್ಟಿ ಕೂಡ ಮಾಡಿತ್ತು.

ಇನ್ನು ಈ ಚಿತ್ರ ಸಿದ್ಧಾರ್ಥ್​ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಕರಿಯರ್​ಗೂ ದೊಡ್ಡ ಸಕ್ಸಸ್​ ತಂದುಕೊಟ್ಟಿದೆ. ಹೀಗಾಗಿ ನಟಿ ಕಿಯಾರ ಅಡ್ವಾಣಿ ಅವರ ಸಂಭಾವನೆಯನ್ನು ಕೂಡ ಹೆಚ್ಚಿಸಿದ್ದಾರೆ. ಈ ಹಿಂದೆ ಕಿಯಾರ ಪ್ರತಿ ಚತ್ರಕ್ಕೆ 3 ಕೋಟಿ ಸಂಭಾವನೆಯನ್ನ ಪಡಿಯುತ್ತಿದ್ದರು.. ಆದ್ರೆ ‘ಶೇರ್​ಷಾ’ ಸಿನಿಮಾದ ಸಕ್ಸ್​ಸ್​ ಬಳಿಕ ತಮ್ಮ ಸಂಭಾವನೆಯನ್ನ 5 ಕೋಟಿಗೆ ಏರಿಕೆ ಮಾಡಿದಾರಂತೆ.

blank

ಹೌದು, ಕಿಯಾರ ಸದ್ಯ ರಾಮ್​ಚರಣ್​ ನಟನೆಯ ಮತ್ತು ಶಂಕರ್​ ನಿರ್ದೇಶನದ ‘RC15’ ಚಿತ್ರದಲ್ಲಿ ರಾಮ್​ಚರಣ್​ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರಕೂ ಕಿಯಾರ 5 ಕೋಟಿ ಸಂಭಾವನೆ ಕೇಳಿದ್ರಂತೆ ಆದ್ರೆ ಚಿತ್ರದ ನಿರ್ಮಾಪಕ ದಿಲ್​ರಾಜು ಕಿಯಾರ ಅವರಿಗೆ 3. 5 ಕೋಟಿ ಸಂಭಾವನೆ ನೀಡಿ ಸುಮ್ಮನಾಗಿದ್ದಾರೆ ಎಂಬ ಟಾಕ್​ ಟಾಲಿವುಡ್​​​ ಅಂಗಳದಲ್ಲಿ ಕೇಳಿ ಬಂದಿದೆ.

Source: newsfirstlive.com Source link