ಆರ್ಡರ್​​ ಡಿಲೇ ಆಯ್ತು ಎಂದು ರೆಸ್ಟೋರೆಂಟ್ ಮಾಲೀಕನನ್ನೇ ಕೊಂದ ಸ್ವಿಗ್ಗಿ ಡಿಲಿವರಿ ಬಾಯ್​

ಆರ್ಡರ್​​ ಡಿಲೇ ಆಯ್ತು ಎಂದು ರೆಸ್ಟೋರೆಂಟ್ ಮಾಲೀಕನನ್ನೇ ಕೊಂದ ಸ್ವಿಗ್ಗಿ ಡಿಲಿವರಿ ಬಾಯ್​

ನವದೆಹಲಿ: ಆರ್ಡರ್​​ ಡಿಲೇ ಮಾಡಿದ್ದಕ್ಕೆ ರೆಸ್ಟೋರೆಂಟ್​​​ ಮಾಲೀಕನನ್ನೇ ಸ್ವಿಗ್ಗಿ ಡೆಲಿವರಿ ಬಾಯ್​​ ಕೊಂದ ಘಟನೆ ಗ್ರೇಟರ್​​​ ನೋಡಿಯಾಡದಲ್ಲಿ ನಡೆದಿದೆ. ಆನ್​​ಲೈನ್​​ ಫುಡ್​​ ಡೆಲಿವರಿ ರೆಸ್ಟೋರೆಂಟ್​​ ಮಾಲೀಕ ಸುನೀಲ್​​​​ ಎಂಬುವರು ಕೊಲೆಯಾದ ವ್ಯಕ್ತಿ.

ಮಂಗಳವಾರ ಮಧ್ಯರಾತ್ರಿ ಸ್ವಿಗ್ಗಿ ಡೆಲಿವರಿ ಬಾಯ್​​ ಚಿಕನ್ ಬಿರಿಯಾನಿ ಮತ್ತು ಪೂರಿ ಸಬ್ಜಿ ಆರ್ಡರ್​​ ತೆಗೆದುಕೊಳ್ಳಲು ಬಂದಿದ್ದಾನೆ. ಮಧ್ಯರಾತ್ರಿ 12.15 ವೇಳೆ ಬಂದಿದ್ದ ಡಿಲಿವರಿ ಬಾಯ್​​ ಕೈಗೆ ತಕ್ಷಣವೇ ಚಿಕನ್​​ ಬಿರಿಯಾನಿ ರೆಡಿ ಮಾಡಿಕೊಡಲಾಗಿದೆ. ಇನ್ನೊಂದು ಆರ್ಡರ್ ಪೂರಿ ಸಬ್ಜಿ ಕೊಡಲು ಚೂರ್​​ ಲೇಟ್​​ ಆಗಲಿದೆ ಎಂದು ರೆಸ್ಟೋರೆಂಟ್​​ ಕೆಲಸಗಾರ ಹೇಳಿದ್ದಾನೆ.

ಈ ವಿಚಾರವಾಗಿ ಡೆಲಿವರಿ ಬಾಯ್​ ಮತ್ತು ಕೆಲಸಗಾರನ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇಬ್ಬರ ನಡುವಿನ ಗಲಾಟೆ ತಡೆಯಲು ಮಾಲೀಕ ಸುನೀಲ್​​​ ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ಮೊದಲೇ ಕುಡಿದ ಮತ್ತಿನಲ್ಲಿದ್ದ ಡೆಲಿವರಿ ಬಾಯ್​​​​ ಸುನೀಲ್​​ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೆವ್ವದ ವೇಷ ಧರಿಸಿ ಕೆಲಸ ಮಾಡ್ತಿದ್ದ ಹೋಟೆಲ್​ನಲ್ಲೇ ಕಳ್ಳತನ ಮಾಡಿದ ಸರ್ವರ್

ಇನ್ನು, ಸುನೀಲ್​​ ತಲೆಗೆ ಜೋರಾಗಿ ಹೊಡೆದು ಡೆಲಿವರಿ ಬಾಯ್​ ಎಸ್ಕೇಪ್​​ ಆಗಿದ್ದಾನೆ. ಕೂಡಲೇ ಸುನೀಲ್​​ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಯ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುನೀಲ್​​ ಸಾವನ್ನಪ್ಪಿದ್ದಾನೆ. ಈಗ ಪೊಲೀಸರು ಡೆಲಿವರಿ ಬಾಯ್​ಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ.

Source: newsfirstlive.com Source link