ಉಮಾಪತಿಗೆ ಬೆದರಿಕೆ ಹಾಕಿದ್ದ ಬಾಂಬೆ ರವಿ ಕೊರೊನಾದಿಂದ ಸಾವು.. ಏನಂದ್ರು ರಾಬರ್ಟ್ ಪ್ರೊಡ್ಯೂಸರ್..?

ಉಮಾಪತಿಗೆ ಬೆದರಿಕೆ ಹಾಕಿದ್ದ ಬಾಂಬೆ ರವಿ ಕೊರೊನಾದಿಂದ ಸಾವು.. ಏನಂದ್ರು ರಾಬರ್ಟ್ ಪ್ರೊಡ್ಯೂಸರ್..?

ಬೆಂಗಳೂರು: ನಟೋರಿಯಸ್ ಡಾನ್, ಸುಪಾರಿ ಕಿಲ್ಲರ್, ಸ್ವಯಂಘೋಷಿತ ಡಾನ್ ಬಾಂಬೆರವಿ ಆಂಧ್ರದಲ್ಲಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾನೆ. ಬಾಂಬೆ ರವಿ ಕರ್ನಾಟಕ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಿಗೆ ಬೇಕಾಗಿದ್ದ.. ಈತನಿಗಾಗಿ ಪೊಲೀಸರು ನಿರಂತರ ಹುಡುಕಾಟ ನಡೆಸುತ್ತಿದ್ದರು.

ಉಮಾಪತಿ ಶ್ರೀನಿವಾಸ್ ಮತ್ತು ಸಹೋದರ ದೀಪಕ್ ಕೇಸ್​​ನಲ್ಲಿ ​ಬಾಂಬೆ ರವಿ ವಾಂಟೆಡ್ ಆಗಿದ್ದ.. ಆಸ್ಪತ್ರೆ ಸೇರಿ ನಿರ್ಮಾಪಕ ಉಮಾಪತಿ ಬಳಿ ರವಿ ಕ್ಷಮೆ ಕೋರಿದ್ದ. ನನ್ನಿಂದ‌ ತಪ್ಪಾಗಿದೆ ಬೇರೆಯವರ ಮಾತು ಕೇಳಿ ಈ ಕೆಲಸಕ್ಕೆ ಕೈ ಹಾಕಿದೆ.. ಇದ್ರಲ್ಲಿ ನನ್ನನ್ನ ಕೆಲವರು ಬಳಸಿಕೊಂಡ್ರು ಎಂದು ಕ್ಷಮೆಯಾಚಿಸಿದ್ದ.

ಇದನ್ನೂ ಓದಿ: ರಾಬರ್ಟ್‌ ನಿರ್ಮಾಪಕ ಉಮಾಪತಿ ಹಾಗೂ ಸಹೋದರನ ಕೊಲೆಗೆ ಪ್ಲಾನ್

ಇನ್ನು ಬಾಂಬೆರವಿ ಸಾವಿನ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅನುಕಂಪದ ಮಾತನಾಡಿದ್ದಾರೆ. ಬಾಂಬೆ ರವಿ ಸತ್ತಿದ್ದಾನೋ ಬದುಕಿದ್ದಾನೋ ಗೊತ್ತಿಲ್ಲ. ಅದರೆ ಇವತ್ತು ಬೆಳಗ್ಗೆ ಬಾಂಬೆ ರವಿ ಸತ್ತು ಹೋಗಿದ್ದಾರೆ ಎಂಬ ಮಾಹಿತಿ ಬಂತು. ಆ ಮನುಷ್ಯ ಅವನ ತಪ್ಪನ್ನು ತಿದ್ದಿಕೊಳ್ತಿದ್ದ ಅಂತ ಕಾಣಿಸುತ್ತೆ.. ಯಾಕಂದ್ರೆ ಆತ ನನಗೆ ಕಾಲ್ ಮಾಡಿದ್ದಾಗ ನನ್ನ ತಾಯಿ ನನ್ನ ಪತ್ನಿ ಬಳಿ ಕ್ಷಮೆ ಕೇಳ್ತೀನಿ ಅಂತ ಹೇಳಿದ್ದ. ಅದರೆ ಎಲ್ಲದಕ್ಕಿಂತ ಮುಖ್ಯ ಪ್ರಾಯಶ್ಚಿತ್ತ. ಅತನಿಗೆ ತನ್ನ ತಪ್ಪಿನ ಅರಿವಾಗಿ ನನ್ನ ಬಳಿ ಕ್ಷಮೆ ಕೇಳಿದಾಗ ಅತನ ಬಗ್ಗೆ ಖುಷಿಯಾಗಿತ್ತು. ಆತ ಒಳ್ಳೆಯವನನೋ ಕೆಟ್ಟವನೋ ಗೊತ್ತಿಲ್ಲ.. ಅದ್ರೆ ಒಂದು ಪ್ರಾಣ ಹೋಗಿದೆ ಎಂದಿದ್ದಾರೆ.

ಇದನ್ನೂ ಓದಿ: ಅಂದುಕೊಂಡದನ್ನು ಸಾಧಿಸಿಯೇ ಬಿಟ್ಟರು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ

ಅತನಿಂದ ಯಾರಿಗೆ ಒಳ್ಳೆಯದು ಆಗಿದ್ಯೋ ಕೆಟ್ಟದಾಗಿದ್ಯೋ ಗೊತ್ತಿಲ್ಲ. ಒಂದು ವೇಳೆ ಆತ ಸತ್ತಿದ್ರೆ  ಅವನನ್ನೇ ನಂಬಿಕೊಂಡಿದ್ದ ಅವರ ಕುಟುಂಬಕ್ಕೆ ನಷ್ಟ ಆಗಿರುತ್ತೆ. ಒಳ್ಳೆಯದು ಕೆಟ್ಟದನ್ನ ಕಾನೂನು ನೋಡಿಕೊಳ್ಳುತ್ತೆ. ಆತ ನನ್ನ ಕ್ಷಮೆ ಕೇಳಿದ್ರಿಂದ ನನಗೆ ಅತನ ಬಗ್ಗೆ ಸಾಫ್ಟ್ ಕಾರ್ನರ್ ಇದೆ. ಬಾಂಬೆ ರವಿ ಕಾಲ್ ಮಾಡಿ ಮಾತನಾಡಿದ್ದಾಗ ಯಾರ ಮಾತನ್ನೋ ಕೇಳಿ ನನಗೆ ಬೆದರಿಕೆ ಹಾಕಿದ್ದಾಗಿ ಹೇಳಿದ್ದಾನೆ.

ಸುಮಾರು 20 ನಿಮಿಷಕ್ಕೂ ಹೆಚ್ಚು ಮಾತನಾಡಿದ ಆಡಿಯೋ ನನ್ನ ಬಳಿ ಇದೆ. ಅಲ್ಲದೇ ಇತ್ತೀಚೆಗೆ ನಡೆದ ವಿಷಯವಾಗಿಯೂ ಕೆಲವರು ಅತನಿಗೆ ಕಾಲ್ ಮಾಡಿ ನನಗೆ ಬೆದರಿಕೆ ಹಾಕುವಂತೆ ಹೇಳಿದ್ರಂತೆ. ಅದನ್ನು ಸಹ ಹೇಳಿದ್ದಾರೆ.. ಅತನ‌ ಜೊತೆ ಮಾತನಾಡಿದ ಆಡಿಯೋ ನನ್ನ ಬಳಿ ಇದೆ. ಇದನ್ನು ನನ್ನ ಲಾಯರ್ ಮೂಲಕ ಪೊಲೀಸರಿಗೆ ನೀಡ್ತೇನೆ. ಈ ಎಲ್ಲಾ ಪ್ರಕರಣದ ಬಗ್ಗೆ ನಾನು ಕಾನೂನು ಹೋರಾಟ ಮಾಡ್ತೀನಿ ಎಂದು ನ್ಯೂಸ್ ಫಸ್ಟ್​ಗೆ ಉಮಾಪತಿ ತಿಳಿಸಿದ್ದಾರೆ.

Source: newsfirstlive.com Source link