ಸಿಎಂ ಬೊಮ್ಮಾಯಿಗೆ ಹೂಗುಚ್ಛ ಕೊಡಲಾಗದೇ ಕಣ್ಣೀರಿಟ್ಟ ಅಜ್ಜಿ..

ಸಿಎಂ ಬೊಮ್ಮಾಯಿಗೆ ಹೂಗುಚ್ಛ ಕೊಡಲಾಗದೇ ಕಣ್ಣೀರಿಟ್ಟ ಅಜ್ಜಿ..

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ಅವಕಾಶ ಸಿಗದ ಹಿನ್ನೆಲೆ ಅಂಗವಿಕಲ ವೃದ್ಧೆಯೊಬ್ಬರು ಕಾದು ಕಾದು ಸುಸ್ತಾಗಿ ವಾಪಸ್ಸಾದ ಘಟನೆ ಸಿಎಂ ಸ್ವಕ್ಷೇತ್ರ ಶಿಗ್ಗಾವಿಯ ಕಲಗಟ್ಟಿ ಗ್ರಾಮದಲ್ಲಿ ನಡೆದಿದೆ.

ಮುಂಚಿನಕೊಪ್ಪ ಗ್ರಾಮದ ಕಮಲಮ್ಮ ಎಂಬ 70 ವರ್ಷದ ವೃದ್ಧೆ ನಾಡದೊರೆಗೆ ಹೂಗುಚ್ಛ ನೀಡಿ ಮನೆಯ ಸಮಸ್ಯೆಯನ್ನು ಬಗೆಹರಿಸುವಂತೆ ಕೇಳಿಕೊಳ್ಳಲು ಬಂದಿದ್ದರು. ಕಾಲು ನೋವಿದ್ದರೂ ಸಾಕಷ್ಟು ಜನರ ನಡುವೆ ಸಿಎಂ ಅವರನ್ನು ಭೇಟಿ ಮಾಡಲು ಪರದಾಡಿದ್ದಾಳೆ.

blank

ಶಿಗ್ಗಾವಿಯ ಕಲಗಟ್ಟಿ ಗ್ರಾಮದಲ್ಲಿ ಚಂದಾಪುರ ಪಂಪ್ ಹೌಸ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ರನ್ನು ಭೇಟಿ ಮಾಡುವ ತವಕದಲ್ಲಿ ವೃದ್ಧೆ ಕೈಯಲ್ಲಿ ಹೂ-ಗುಚ್ಚ ಹಿಡಿದು ಅಂತಿದಿತ್ತ ಓಡಾಡುತ್ತಿರುವುದು ಕಂಡು ಬಂದಿದೆ. ಪಂಪ್​ಹೌಸ್​ ಚಾಲನೆ ಬಳಿಕ ಸಿಎಂ ಬೊಮ್ಮಾಯಿ ವೇದಿಕೆಯೇರಿ ಭಾಷಣಕ್ಕೆ ನಿಂತಾಗ ವೇದಿಕೆ ಬಳಿ ಆಗಮಿಸಿದ ವೃದ್ಧೆ ಸಿಎಂರನ್ನು ಭೇಟಿ ಮಾಡಲು ಹರಸಾಹಸ ಪಟ್ಟಿದ್ದಾರೆ.

blank

ಇದನ್ನೂ ಓದಿ: ಶಾಲೆಗಳು ರೀ ಓಪನ್​​..! ಆದ್ರೆ ಬಸ್​ಗಳೇ ಇಲ್ಲ.. ನಿತ್ಯ ನಡೆಯುತ್ತಲೇ ಹೋಗಬೇಕಾಗಿದೆ ವಿದ್ಯಾರ್ಥಿಗಳು

ಇನ್ನೇನು ಸಿಎಂ ಭಾಷಣ ಮುಗಿಸಿ ಹೊರಡುತ್ತಾರೆ ಎನ್ನುವುದರಲ್ಲಿ, ವೇದಿಕೆಯ ಮುಂಭಾಗ ಹಾಕಲಾಗಿದ್ದ ಬ್ಯಾರಕೇಡ್​ನ್ನ ದಾಟಿ ಒಳಗೆ ನುಗ್ಗಿದ್ರು ಕೊನೆಗೂ ಸಿಎಂ ಭೇಟಿ ಮಾಡುವ ಕನಸು ಕನಸಾಗಿಯೇ ಉಳಿದಿದೆ. ಇನ್ನೇನು ಸಿಎಂ ಬೊಮ್ಮಾಯಿ ನೋಡು ನೋಡುತ್ತಲೇ ಕಾರ್​ ಏರಿ ಹೊರಾಟಾಗ ಕಣ್ಣೀರು ಹಾಕಿ ಬೇಸರ ವ್ಯಕ್ತಪಡಿಸಿದ ವೃದ್ಧೆ ವಾಪಾಸ್ಸಾಗಿದ್ದಾರೆ.

blank

ಇದನ್ನೂ ಓದಿ: ಮತ್ತೆ ಹೆಚ್ಚಳವಾಯ್ತು ಎಲ್​​​ಪಿಜಿ ಗ್ಯಾಸ್​​​​ ಸಿಲಿಂಡರ್​​​ ಬೆಲೆ.. ಗ್ರಾಹಕರಿಗೆ ಬಿಗ್​​ ಶಾಕ್​

Source: newsfirstlive.com Source link