UPA ಸರ್ಕಾರ ಮಾಡಿದ ಸಾಲವನ್ನು ನಮ್ಮ ಸರ್ಕಾರ ತೀರಿಸುತ್ತಿದೆ; ಸಂಸದ ಕರಡಿ ಸಂಗಣ್ಣ

UPA ಸರ್ಕಾರ ಮಾಡಿದ ಸಾಲವನ್ನು ನಮ್ಮ ಸರ್ಕಾರ ತೀರಿಸುತ್ತಿದೆ; ಸಂಸದ ಕರಡಿ ಸಂಗಣ್ಣ

ಬೆಂಗಳೂರು : ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಉಡಾಫೆಯಾಗಿ ಉತ್ತರ ನೀಡಿದ ಸಂಸದ ಸಂಗಣ್ಣ ಕರಡಿ, ನಿಮ್ಮಪ್ಪ ಸಾಲ ಮಾಡಿದ್ರೇ ಮಗನಾಗಿ ನೀನು ಸಾಲ ತೀರಸ್ತೀಯಾ ಇಲ್ವಾ, ಅದೇ ರೀತಿಯಲ್ಲಿ ಯುಪಿಎ ಸರ್ಕಾರ ಮಾಡಿರುವ ಸಾಲವನ್ನು ನಾವು ತೀರಿಸ್ತಿದ್ದೇವೆ ಎಂದು ಉಡಾಫೆ ಉತ್ತರ ನೀಡಿದ್ದಾರೆ ಬಿಜೆಪಿ ಸಂಸದ ಕರಡಿ ಸಂಗಣ್ಣ.

ಇದನ್ನೂ ಓದಿ: ಸುಮಲತಾ ಸ್ವಂತ ಮನೆ ನಿರ್ಮಾಣ ಹಿಂದಿದೆಯಾ ಪುತ್ರನ ರಾಜಕೀಯ ಭವಿಷ್ಯ ಲೆಕ್ಕಾಚಾರ?

ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯುಪಿಎ ಸರ್ಕಾರ ಇದ್ದ ಸಮಯದಲ್ಲಿ ಸಾಕಷ್ಟು ಸಾಲ ಮಾಡಿದೆ. ತೈಲ ಕಂಪಗಳಿಗೆ ಸಾಲದ ಬಾಂಡ್ ಕೊಟ್ಟಿದೆ, ಇವರೆಗೆ ನಮ್ಮ ಸರ್ಕಾರ 59 ಸಾವಿರ ಕೋಟಿ, ಹಾಗೂ 35 ಸಾವಿರ ಕೋಟಿ ಸಾಲ ತುಂಬಿದೆ. ಇನ್ನು ಒಂದು ಲಕ್ಷ ಕೋಟಿ ಬಾಕಿ ಇದೆ‌ ಎಂದರು. ಈ ವೇಳೆ ಪತ್ರಕರ್ತರೊಬ್ಬರು ಇದಕ್ಕೆಲ್ಲ ಯುಪಿಎ ಸರ್ಕಾರವೇ ಕಾರಣನಾ ಎಂದು ಪ್ರಶ್ನೆ ಮಾಡಿದಾಗ ಸಿಡಿಮಿಡಿಗೊಂಡ ಸಂಸದರು ನಿಮ್ಮಪ್ಪ ಸಾಲ ಮಾಡಿದ್ರೇ ಮಗನಾಗಿ ನೀನು ಸಾಲ ತೀರಸ್ತೀಯ, ಇಲ್ವಾ ನಾವು ಕೂಡಾ ಹಂಗೆ ಸಾಲ ತೀರಸ್ತಿದ್ದೀವಿ ಎಂದಿದ್ದಾರೆ.

ಇದನ್ನೂ ಓದಿ:  ‘ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಕೇಂದ್ರ ಸರ್ಕಾರದ ದಲ್ಲಾಳಿ’-ಹೆಚ್​ಡಿಕೆ ವಾಗ್ದಾಳಿ

ಹೀಗೆ ಸಿಲಿಂಡರ್​ ರೇಟ್​ ಏರಿಸ್ತಾ ಇದ್ರೆ ಬಡವರು ಸಾಲ ಮಾಡ್ಬೇಕಾ ಎಂದಾಗ ಪ್ರತಿಕ್ರಿಯಿಸಿದ ಅವರು, ಈ ವೇಳೆ ಬಡವರಿಗೆ ಏನ್ ಸಹಾಯ ಮಾಡಬೇಕು ನಾವ ಮಾಡಿದ್ದೀವಿ. ಹಂಗಂತ ದೇಶವನ್ನ ಒತ್ತೆ ಇಡಬೇಕಾ? ಎಂದು ಸಂಸದ ಆಕ್ರೋಶಗೊಂಡಿದ್ದಾರೆ. ನಾವು ಸರ್ಕಾರ ನಡೆಸಬೇಕಲ್ಲ, ಕೋವಿಡ್ ನಿಂದ ಸರ್ಕಾರಕ್ಕೆ ಏನೂ ಆದಾಯ ಇಲ್ಲ ಎಂದಿದ್ದಾರೆ.

Source: newsfirstlive.com Source link