‘ನಾನು ಜೈಲಿಗೆ ಹೋಗಿ ಬಂದವನೇ’ -‘ಆ ದಿನ’ ನೆನೆದ ಗೃಹ ಸಚಿವ ಆರಗ ಜ್ಞಾನೇಂದ್ರ

‘ನಾನು ಜೈಲಿಗೆ ಹೋಗಿ ಬಂದವನೇ’ -‘ಆ ದಿನ’ ನೆನೆದ ಗೃಹ ಸಚಿವ ಆರಗ ಜ್ಞಾನೇಂದ್ರ

ಚಿಕ್ಕಮಗಳೂರು: ನಾನು ಜೈಲಿಗೆ ಹೋಗಿ ಬಂದವನೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ತಮಗೆ ಹಾಕುವ ಅನ್ನದಲ್ಲಿ ಅವ್ಯವಹಾರ ನಡೆಸಿ ಅಧಿಕಾರಿಗಳು ಕಾಸು ಮಾಡುತ್ತಿರುವ ಬಗ್ಗೆ ಕೈದಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಪತ್ರ ಬರೆದಿದ್ದರು. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಆರಗ ಜ್ಞಾನೇಂದ್ರ, ನಾನು ಜೈಲಿಗೆ ಬಂದಿದ್ದೇನೆ. ನನಗೂ ಅಂದು ಕೊಟ್ಟಿದ್ದ ಊಟ ಸರಿ ಇರಲಿಲ್ಲ ಎಂದರು.

ಜೈಲಿನಲ್ಲಿ ಅವ್ಯವಹಾರ ಆಗೋದು ನನ್ನ ಗಮನದಲ್ಲಿದೆ. ಇತ್ತೀಚೆಗೆ ಜೈಲಿಗೆ ಭೇಟಿ ನೀಡಿದ್ದಾಗ ಕೆಲವು ಲೋಪದೋಷಗಳು ನನ್ನ ಕಣ್ಣಿಗೆ ಬಿದ್ದಿವೆ. ಇದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾನು ಕೂಡ ಜೈಲಿಗೆ ಹೋಗಿ ಬಂದವನು, ಅಲ್ಲಿ ಏನು ನಡೆಯುತ್ತೆ ಅನ್ನೋದು ನನಗೆ ಗೊತ್ತು ಎಂದು ಹೇಳುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಇಲಾಖೆಯಲ್ಲಿ ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಒಪ್ಪಿಕೊಂಡರು.

ಇದನ್ನೂ ಓದಿ: ಆರ್ಡರ್​​ ಡಿಲೇ ಆಯ್ತು ಎಂದು ರೆಸ್ಟೋರೆಂಟ್ ಮಾಲೀಕನನ್ನೇ ಕೊಂದ ಸ್ವಿಗ್ಗಿ ಡಿಲಿವರಿ ಬಾಯ್​

ನಾನು ಎಮರ್ಜೆನ್ಸಿ ಟೈಮ್​ನಲ್ಲಿ ಆರು ತಿಂಗಳು ಜೈಲಿನಲ್ಲಿದ್ದೆ. ನಮಗೂ ಕೂಡ ಊಟ ಕೊಟ್ಟಿದ್ದು ಸರಿ ಇರಲಿಲ್ಲ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Source: newsfirstlive.com Source link