‘ಹೀರೋನಿಂದ ಸಿನಿಮಾ ಓಡಿದ್ರೆ HERO ಅಷ್ಟೇ ಬೆಳಿತಾನೆ’

‘ಹೀರೋನಿಂದ ಸಿನಿಮಾ ಓಡಿದ್ರೆ HERO ಅಷ್ಟೇ ಬೆಳಿತಾನೆ’

ಇತ್ತೀಚೆಗೆ ಕನಸುಗಾರ ರವಿಚಂದ್ರನ್ ಅವರು ‘ಟೆಂಟ್ ಸಿನಿಮಾ’ ನಾಗತಿಹಳ್ಳಿ ಸಿನಿಮಾ ಶಾಲೆಗೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿರುವ ಸಿನಿಮಾ ವಿದ್ಯಾರ್ಥಿಗಳನ್ನ ಉದ್ದೇಶಿಸಿ ರವಿಚಂದ್ರನ್ ಮಾತನಾಡಿದರು..

ನೀವು ಸಿನಿಮಾ ಮಾಡಬೇಕಾದರೆ ಸ್ಟಾರ್​ ಮೇಲೆ ಡಿಫೆಂಡ್ ಆಗಿದ್ದರೆ, ಅದು ಯಾಕೆ ಓಡುತ್ತೆ ಅಂತಾ ಹೇಳೋಕೆ ಆಗಲ್ಲ, ಕೆಲವು ಸಿನಿಮಾಗಳು ವಾರಕ್ಕೆ ಕೋಟಿ ಗಟ್ಟಲೇ ಹಣವನ್ನ ಎತ್ತಿಕೊಟ್ಟು ಬಿಡುತ್ತವೆ. ಅದು ಸ್ಟಾರ್​​ಗಳು ಬಿಲ್ಡ್​ ಮಾಡಿಕೊಂಡಿರೋ ಇಮೇಜ್, ಅದು ಅವರ ಸ್ಟಾರ್ ಡಮ್.

ಆದರೆ ನಾವು ಮಾಡಬೇಕಾಗಿರೋದು, ಸ್ಟೋರಿಯನ್ನ ಹೀರೋ ಮಾಡಬೇಕು, ಸ್ಕ್ರಿಪ್ಟ್​ ಹೀರೋ ಮಾಡಬೇಕು.. ಯಾವತ್ತು ಸ್ಕ್ರೀನ್ ಮೇಲೆ ಡೈರೆಕ್ಟರ್ ಹೀರೋ ಆಗುತ್ತಾರೋ? ಅದು ಇಂಡಸ್ಟ್ರಿಯನ್ನ ಬೆಳೆಸುತ್ತದೆ. ಯಾವತ್ತು ಹೀರೋ ಸಿನಿಮಾ ಓಡಿಸುತ್ತಾರೋ, ಅದು ಅವರು ಬೆಳೆಯುತ್ತಾರೆ.. ಇಂಡಸ್ಟ್ರಿಗಳು ಬೆಳೆಯಬೇಕು, ದೊಡ್ಡದಾಗಬೇಕು ಅಂದರೆ ಅದು ನಿರ್ದೇಶಕರಿಂದ ಮಾತ್ರ ಸಾಧ್ಯ ಅಂತಾ ಹೇಳಿದರು.

Source: newsfirstlive.com Source link