ಸಚಿವ ರಾಮುಲು ಹೆಸರಲ್ಲಿ ವಂಚನೆ; ಆರೋಪಿ ಧರ್ಮತೇಜ್ 3 ದಿನ ಪೊಲೀಸ್ ಕಸ್ಟಡಿಗೆ

ಸಚಿವ ರಾಮುಲು ಹೆಸರಲ್ಲಿ ವಂಚನೆ; ಆರೋಪಿ ಧರ್ಮತೇಜ್ 3 ದಿನ ಪೊಲೀಸ್ ಕಸ್ಟಡಿಗೆ

ಬೆಂಗಳೂರು: ಸಚಿವ ಶ್ರೀರಾಮುಲು ಹೆಸರಲ್ಲಿ ಮತ್ತೆ ವಂಚನೆ ಮಾಡಲು ಯತ್ನಸಿದ್ದ ಆರೋಪಿ ಧರ್ಮತೇಜ್​​ನನ್ನ ಕೊಡಗೇಹಳ್ಳಿ ಪೊಲೀಸರು ಇಂದು ಕೋರ್ಟ್​ಗೆ ಹಾಜರುಪಡಿಸಿದ್ದರು.

ಧರ್ಮತೇಜ್ ವಿರುದ್ಧ ತಾನು ಶ್ರೀರಾಮುಲು ಅವರ ಆಪ್ತನೆಂದು ಹೇಳಿಕೊಂಡು ಜನರಿಗೆ ವಂಚಿಸುತ್ತಿದ್ದ ಆರೋಪ ಕೇಳಿಬಂದಿತ್ತು. ಬಾಗಲೂರು ಮೂಲದ ರಿಯಲ್ ಎಸ್ಟೇಟ್ ಉದ್ಯೋಗಿಯಾಗಿರುವ ಆರೋಪಿ ಧರ್ಮತೇಜ್ ನ ವಿರುದ್ಧ ಪ್ರದೀಪ್​ ಎಂಬಾತ ದೂರು ನೀಡಿದ್ದರು. ಕೊಡಿಗೆಹಳ್ಳಿ ಪೊಲೀಸರು ದೂರಿನನ್ವಯ ಎಫ್ಐಆರ್ ಕೂಡ ದಾಖಲಿಸಿದ್ದರು.

ಇದನ್ನೂ ಓದಿ:  ಆರ್ಡರ್​​ ಡಿಲೇ ಆಯ್ತು ಎಂದು ರೆಸ್ಟೋರೆಂಟ್ ಮಾಲೀಕನನ್ನೇ ಕೊಂದ ಸ್ವಿಗ್ಗಿ ಡಿಲಿವರಿ ಬಾಯ್​

ಸಚಿವ‌ ಶ್ರೀರಾಮುಲು ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಆರೋಪಿ ಧರ್ಮತೇಜ್, ಮತ್ತೆ ಸಚಿವ ಶ್ರೀರಾಮುಲು ಹೆಸರು ಬಳಕೆ ಮಾಡಿಕೊಂಡು ವಂಚನೆಗೆ ಯತ್ನ ಮಾಡಿರುವ ಆರೋಪದ ಮೇಲೆ ಧರ್ಮತೇಜ್ ವಿರುದ್ಧ ಐಪಿಸಿ ಸೆಕ್ಷನ್ 420, 406, 506 ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ‌ ನಡೆಸುತ್ತಿರುವ ಕೊಡಿಗೇಹಳ್ಳಿ ಪೊಲೀಸರು, ಇಂದು ಮಧ್ಯಾಹ್ನ ಕೋರ್ಟ್​ಗೆ ಹಾಜರುಪಡಿಸಿ 3 ದಿನ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.

ಇದನ್ನೂ ಓದಿ: ಉಮಾಪತಿಗೆ ಬೆದರಿಕೆ ಹಾಕಿದ್ದ ಬಾಂಬೆ ರವಿ ಕೊರೊನಾದಿಂದ ಸಾವು.. ಏನಂದ್ರು ರಾಬರ್ಟ್ ಪ್ರೊಡ್ಯೂಸರ್..?

Source: newsfirstlive.com Source link