ಗ್ಯಾಂಗ್​ ರೇಪ್​ ನಡೆದ ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ; ಮೈಸೂರು ಪೊಲೀಸರ ವಿರುದ್ಧ ಗರಂ

ಗ್ಯಾಂಗ್​ ರೇಪ್​ ನಡೆದ ಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ; ಮೈಸೂರು ಪೊಲೀಸರ ವಿರುದ್ಧ ಗರಂ

ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ನಿರ್ಜನ ಪ್ರದೇಶಕ್ಕೆ ಭೇಟಿ ನೀಡಿ ಮಾಜಿ ಸಿಎಂ ಸಿದ್ದರಾಮಯ್ಯ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿದ್ದರಾಮಯ್ಯ, ನಿರ್ಭಯಾ ಪ್ರಕರಣ ನಂತರ ಇಂತಹದ್ದೊಂದು ದುರ್ಘಟನೆ ಮೈಸೂರಿನಲ್ಲಿ ನಡೆದಿದೆ. ನಿಜಕ್ಕೂ ಇದೊಂದು ಅಮಾನುಷ ಘಟನೆ ಎಂದರು.

ನಾನು ಜಿಂದಾಲ್​​ ಆಸ್ಪತ್ರೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಘಟನೆ ಸ್ಥಳಕ್ಕೆ ಬರಲು ಆಗಿರಲಿಲ್ಲ. ಆದರೆ, ಈ ದುರ್ಘಟನೆ ನಡೆದ ಕೂಡಲೇ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದಲೇ ಟ್ವೀಟ್​​ ಮಾಡಿದ್ದೇನೆ ಎಂದು ಹೇಳಿದರು.

blank

ಮೈಸೂರು ಸಾಂಸ್ಕೃತಿಕ ಪಾರಂಪರಿಕ ನಗರ. ಅಲ್ಲದೇ ಪ್ರವಾಸಿ ತಾಣ, ಒಳ್ಳೆಯ ಶೈಕ್ಷಣಿಕ ನಗರಿ. ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಇಂತಹ ನಗರದಲ್ಲಿ ಸರ್ಕಾರ ಮತ್ತು ಪೊಲೀಸ್​​ ಬಹಳ ಜಾಗರೂಕತೆಯಿಂದ ಇರಬೇಕು ಎಂದು ಎಚ್ಚರಿಸಿದರು.

ನಾಗರೀಕ ಸಮಾಜ ತಲೆ ತಗ್ಗಿಸುವ ಹೇಯವಾದ ಕೃತ್ಯ. ಇತ್ತೀಚೆಗೆ ಕೊಲೆ, ಸುಲಿಗೆ, ದರೋಡೆ, ಕಳ್ಳತನ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಇದನ್ನು ಸರಿ ಮಾಡಲು ಸರ್ಕಾರವಾಗಲೀ, ಮೈಸೂರು ಪೊಲೀಸರಾಗಲೀ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

blank

ಇದನ್ನೂ ಓದಿ: ಜೆಡಿಎಸ್ ಬಾಗಿಲು ದೊಡ್ಡದಾಗಿ ತೆರೆದಿದೆ.. ಬರೋರು ಬರಬಹುದು, ಹೋಗೋರು ಹೋಗಬಹುದು- ಹೆಚ್​ಡಿಕೆ

ಕೃತ್ಯ ನಡೆದ ಸ್ಥಳ ಆಲನಹಳ್ಳಿ ಠಾಣಾ ವ್ಯಾಪ್ತಿಗೆ ಬರುತ್ತದೆ. ಘಟನೆ ನಡೆದ ಸ್ಥಳಕ್ಕೂ ರಸ್ತೆಗೂ 70-80 ಮೀಟರ್ ಅಂತರ ಇದೆ. ರಿಂಗ್ ರೋಡ್​​ ಕೂಡ ಕೂಗಳತೆ ದೂರದಲ್ಲಿದೆ. ಸಂಜೆ ಬಳಿಕ ದಂಪತಿಗಳು, ವೃದ್ಧರು ಬರುತ್ತಾ ಇರುತ್ತಾರೆ. ಗರುಡ ಪಡೆ ಇದ್ದರೂ ಸರಿಯಾಗಿ ಕೆಲಸ ಮಾಡಿಲ್ಲ. ಅಂತದೊಂದು ಜಾಗ ಇದೆ ಎಂದು ಆಲನಹಳ್ಳಿ ಪೊಲೀಸರಿಗೇ ಗೊತ್ತಿಲ್ಲ ಎಂದರು.

Source: newsfirstlive.com Source link