ಜೆಡಿಎಸ್​ಗೆ ಎಲುಬು, ನಾಲಿಗೆ ಸರಿಯಾಗಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ -ಕಟೀಲ್ ವಾಗ್ದಾಳಿ

ಜೆಡಿಎಸ್​ಗೆ ಎಲುಬು, ನಾಲಿಗೆ ಸರಿಯಾಗಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ -ಕಟೀಲ್ ವಾಗ್ದಾಳಿ

ಮೈಸೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರಣ್ ಸಿಂಗ್ ದುಡ್ಡು ವಸೂಲಿಗಾಗಿ ಕರ್ನಾಟಕಕ್ಕೆ ಬರುತ್ತಾರೆಂದು ಮಾಜಿ ಸಿಎಂ ಹೆಚ್.​ಡಿ.ಕುಮಾರಸ್ವಾಮಿ ವಾಗ್ದಾಳಿ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್​ ಪ್ರತಿಕ್ರಿಯಿಸಿದ್ದಾರೆ. ಹಳದಿ ರೋಗದವರಿಗೆ ಕಂಡಿದ್ದೆಲ್ಲಾ ಹಳದಿಯಾಗಿ ಕಾಣಿಸುತ್ತದೆ ಎಂದು ಹೆಚ್​ಡಿಕೆಗೆ ಟಾಂಗ್​ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನವರು ದುಡ್ಡಿಗಾಗಿ ರಾಜಕಾರಣ ಮಾಡುತ್ತಾರೆ. ಅದು ಜೆಡಿಎಸ್ ಸಂಸ್ಕೃತಿ. ಜೆಡಿಎಸ್ ನವರು ದುಡ್ಡಿಗಾಗಿ ರಾಜಕಾರಣ ಮಾಡುತ್ತಾರೆ. ಇವರು ರಾಜ್ಯ, ದೇಶವನ್ನು ಆಳಿದವರು. ಇವರಿಗೆ ಎಲುಬು ನಾಲಿಗೆ ಸರಿಯಾಗಿದ್ದರೇ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಜೆಡಿಎಸ್ ನವರು ಆಡುವಂತಹ ಮಾತುಗಳನ್ನು ಬಿಜೆಪಿಯವರು ಆಡುವುದಿಲ್ಲ. ಜೆಡಿಎಸ್​ನ ಪರಿಸ್ಥಿತಿ ಏನೆಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಬಾಗಿಲು ದೊಡ್ಡದಾಗಿ ತೆರೆದಿದೆ.. ಬರೋರು ಬರಬಹುದು, ಹೋಗೋರು ಹೋಗಬಹುದು- ಹೆಚ್​ಡಿಕೆ

ಮುಂದುವರೆದು ಮಾತನಾಡಿದ ಅವರು ಅಂತಾರಾಷ್ಟ್ರೀಯ ಮಟ್ಟಕ್ಕೆ ಅನುಗುಣವಾಗಿ ಇಂಧನ ಬೆಲೆ ಪರಿಷ್ಕರಣೆ ಆಗುತ್ತದೆ ಎಂದು ಗ್ಯಾಸ್​ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರು. ಬೆಲೆ ಏರಿಕೆಗೆ ಸಂಬಂಧಿಸಿದಂತೆ ಯುಪಿಎ ಸರ್ಕಾರದ ಅವಧಿ ಹಾಗೂ ಈಗಿನ ಪರಿಸ್ಥಿತಿಯನ್ನು ತುಲನಾತ್ಮಕವಾಗಿ ಅವಲೋಕನ ಮಾಡಲಿ. ಅಡುಗೆ ಅನಿಲ ಬೆಲೆ ಏರಿಕೆ ನಿಯಂತ್ರಣ ಮಾಡಲು ಏನೆಲ್ಲಾ ಪ್ರಯತ್ನ ಮಾಡಬೇಕೋ‌ ಅದನ್ನು ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಕೇಂದ್ರ ಸರ್ಕಾರದ ದಲ್ಲಾಳಿ’-ಹೆಚ್​ಡಿಕೆ ವಾಗ್ದಾಳಿ

Source: newsfirstlive.com Source link