ಅನಂತ್​ನಾಗ್​​ ಅವ್ರನ್ನ ನೋಡ್ತಿದ್ರೆ ಈಗಿನ ಹೀರೋಗಳು ಹಂಗಂಗೆ ಬಿದ್ದೋಗ್ಬೇಕು- ಪದ್ಮಜಾ ರಾವ್

ಅನಂತ್​ನಾಗ್​​ ಅವ್ರನ್ನ ನೋಡ್ತಿದ್ರೆ ಈಗಿನ ಹೀರೋಗಳು ಹಂಗಂಗೆ ಬಿದ್ದೋಗ್ಬೇಕು- ಪದ್ಮಜಾ ರಾವ್

ಮೂಡಲ ಮನೆ ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟ ಪದ್ಮಜಾ ರಾವ್ ತಿರುಗಿ ನೋಡಿದ್ದೇ ಇಲ್ಲ. ಒಂದೆರಡು ಪ್ರಮುಖ ಸೀರಿಯಲ್​ಗಳಲ್ಲಿ ಕಾಣಿಸಿಕೊಂಡ ನಂತರ ನೇರ ಬೆಳ್ಳಿತೆರೆಗೆ ಎಂಟ್ರಿಕೊಟ್ಟ ಪದ್ಮಜಾರಾವ್ ಮುಂದೆ ಪೋಷಕ ಪಾತ್ರಗಳಿಗೆ ರೆಗ್ಯುಲರ್ ನಟಿ ಎಂಬಷ್ಟು ಖ್ಯಾತಿ ಗಳಿಸಿದ್ರು. ಇಂಥ ಪದ್ಮಜಾರಾವ್ ನ್ಯೂಸ್ ಫಸ್ಟ್ ಜೊತೆಗೆ ಮಾತನಾಡುತ್ತಾ ತಮ್ಮ ಸೀರಿಯಲ್ ಎಂಟ್ರಿಯ ಕುರಿತು ಕೆಲವು ನೆನಪುಗಳನ್ನ ಮೆಲುಕು ಹಾಕಿದರು.

ನಾನು ಆ್ಯಕ್ಟಿಂಗ್​ನಲ್ಲಿ ಚಾನ್ಸ್ ಸಿಗಬಹುದು ಎಂದು ವೈಶಾಲಿ ಕಾಸರವಳ್ಳಿ ಅವರಿಗೆ ಅಸಿಸ್ಟೆಂಟ್ ಆಗಿ ಸೇರಿಕೊಂಡೆ. ಐದಾರು ತಿಂಗಳಾದ ಮೇಲೆ ಒನ್ ಫೈನ್ ಡೇ ಮೂಡಲಮನೆಯಲ್ಲಿ ಒಂದು ಪಾತ್ರ ಕೊಟ್ರು.. ಆ ಪಾತ್ರ ಮಾಡಿದ್ಮೇಲೆ ನಾನು ಯಾರಿಗೂ ಕೆಲಸ ಕೊಡಿ ಅಂತ ಕೇಳಿಕೊಂಡು ಹೋಗಲೇ ಇಲ್ಲ. ಈಗಲೂ ಇಂಡಸ್ಟ್ರಿ ನನ್ನ ಜೀವನ ನಡೆಸ್ತಾ ಇದೆ.

ಮೂಡಲ ಮನೆ ಮುಗಿದ್ಮೇಲೆ ಪ್ರೀತಿ ಇಲ್ಲದ ಮೇಲೆ ಸೀರಿಯಲ್​ನಲ್ಲಿ ಕೆಲಸ ಸಿಕ್ಕಿತ್ತು. ಆಗ ಅನಂತ್ ನಾಗ್ ಇದ್ದಾರೆ ಅಂತ ಗೊತ್ತಿದ್ರಿಂದ ನಾನು ಅದನ್ನ ಒಪ್ಪಿಕೊಂಡೆ. ಆಗ ಯಶ್ ಇಷ್ಟು ದೊಡ್ಡ ಸ್ಟಾರ್ ಆಗಿರ್ಲಿಲ್ಲ.. ಈಗ ಸಕ್ಸಸ್ ಫುಲ್, ಐಕಾನ್ ಆಗಿದ್ದಾನೆ. ಆಗ ಯಶ್ ನಾನು ಮತ್ತೆ ಅನಂತ್ ನಾಗ್ ಇದ್ದೀವಿ ಅದಕ್ಕೆ ಒಪ್ಪಿಕೊಂಡೆ ಎಂದ.. ನನಗದು ಪ್ರೌಡ್ ಮೂಮೆಂಟ್.

ಅನಂತ್ ನಾಗ್ ಜೊತೆ ಮೊದಲ ಶೂಟ್ ಇದ್ದ ದಿನ ನಾನು ಅವರಿಗೆ ನನ್ನ ಬಳಿ ಇದ್ದ ಹಳೇ ಆಟೋಗ್ರಾಫ್ ಚೀಟಿ ತೋರಿಸಿದೆ. ನನಗೆ ಆ್ಯಕ್ಟಿಂಗ್ ಮಾಡೋಕೆ ಆಗ್ತಾನೇ ಇರ್ಲಿಲ್ಲ. ಆಗ ಅವನು ನನ್ನ ಕೈ ಹಿಡಿದುಕೊಂಡು ಹಿಂದಿ ಹಾಡೊಂದಕ್ಕೆ ಡ್ಯಾನ್ಸ್ ಮಾಡಿ ನನಗೆ ಕಂಫರ್ಟ್ ಆಗುವಂತೆ ಮಾಡಿದರು.

Source: newsfirstlive.com Source link