‘ಈಗಲೇ PhD ಬೇಡ’ ಎಂದ ಪೋಷಕರ ಒಂದೇ ಮಾತಿಗೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

‘ಈಗಲೇ PhD ಬೇಡ’ ಎಂದ ಪೋಷಕರ ಒಂದೇ ಮಾತಿಗೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

ವಿಜಯನಗರ: ಪಿಎಚ್​​ಡಿ ಮಾಡೋದು ಈಗಲೇ ಬೇಡ ಎಂದಿದ್ದಕ್ಕೆ ವಿದ್ಯಾರ್ಥಿನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಟ್ಟೂರು ತಾಲೂಕಿನಲ್ಲಿ ನಡೆದಿದೆ. ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಪೂಜಾ ಎಂದು ಗುರುತಿಸಲಾಗಿದೆ.

ಪೂಜಾ ಇತ್ತೀಚೆಗಷ್ಟೇ ಎಂಎಸ್​​ಸಿ ಮುಗಿಸಿದ್ದಳು. ಈಗ ಪಿಎಚ್​​ಡಿ ವ್ಯಾಸಾಂಗ ಮಾಡಬೇಕು ಎಂದು ಪೂಜಾ ಮಹಾದಾಸೆ ಹೊಂದಿದ್ದಳು. ಆದರೆ, ಪೋಷಕರು ಆರ್ಥಿಕ ಸಂಕಷ್ಟವಿದೆ, ಈಗ ಪಿಎಚ್​​ಡಿ ಮಾಡೋದು ಬೇಡ ಎಂದಿದ್ದೇ ತಡ ಪೂಜಾ ಮನೆಯಲ್ಲೇ ನೇಣು ಬಿಗಿದುಕೊಂಡು ಸೂಸೈಡ್​​ ಮಾಡಿಕೊಂಡಿದ್ದಾಳೆ.

ಇನ್ನು, ಕೊಟ್ಟರು ತಾಲೂಕಿನ ಉಜ್ಜನಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಕೊಟ್ಟೂರು ಪೊಲೀಸ್​​ ಠಾಣೆಯಲ್ಲಿ ಕೇಸ್​​ ದಾಖಲಾಗಿದೆ.

ಇದನ್ನೂ ಓದಿ: ಸಚಿವ ರಾಮುಲು ಹೆಸರಲ್ಲಿ ವಂಚನೆ; ಆರೋಪಿ ಧರ್ಮತೇಜ್ 3 ದಿನ ಪೊಲೀಸ್ ಕಸ್ಟಡಿಗೆ

Source: newsfirstlive.com Source link