‘ಪುಕ್ಸಟ್ಟೆ ಲೈಫು ಪುರ್​​​ಸೊತ್ತೇ ಇಲ್ಲ’ ಟೀಸರ್​ ಔಟ್​; ಸಂಚಾರಿ ಅಭಿನಯ ಭಯಂಕರ

‘ಪುಕ್ಸಟ್ಟೆ ಲೈಫು ಪುರ್​​​ಸೊತ್ತೇ ಇಲ್ಲ’ ಟೀಸರ್​ ಔಟ್​; ಸಂಚಾರಿ ಅಭಿನಯ ಭಯಂಕರ

ಅಬ್ಬಬಾ ಆ ನಟನೆಯನ್ನ ನೋಡಿದಾಗ, ಆ ಪಾತ್ರಕ್ಕೆ ಅವರನ್ನವರು ಅರ್ಪಿಸಿಕೊಂಡಿರೋದನ್ನ ನೋಡಿದಾಗ; ಛೇ.. ಸಂಚಾರಿ ವಿಜಯ್ ನಮ್ಮ ನಿಮ್ಮನೊಂದಿಗೆ ಇರಬೇಕಿತ್ತು ಅಂತ ಬೇಸರವಾಗುತ್ತೆ. ಸಂಚಾರಿ ವಿಜಯ್ ನಟನೆಯ ಕೊನೆಯ ಸಿನಿಮಾಗಳಲ್ಲೊಂದು ‘‘ಪುಕ್ಸಟ್ಟೆ ಲೈಫು ಪುರ್​​​ಸೊತ್ತೇ ಇಲ್ಲ’’ ಸಿನಿಮಾ.. ಟೈಟಲ್​ನಿಂದ ಗಮನ ಸೇಳೆದಿದ್ದ ಈ ಸಿನಿಮಾ ಈಗ ಟೀಸರ್​​ನಿಂದ ತನ್ನೊಳಗಿದ್ದ ಗಮತ್ತನ್ನ, ಸಂಚಾರಿ ವಿಜಯ್ ಅವರ ಅಭಿನಯದ ಚತುರತೆಯನ್ನ ತೋರುತ್ತಿದೆ.

ಸಂಚಾರಿ ವಿಜಯ್.. ಇದ್ದಷ್ಟು ದಿನ ಕಲೆಗಾಗಿ, ಮಾನವೀಯ ಮೌಲ್ಯವುಳ್ಳ ಸೇವೆಗಳಿಗಾಗಿ ಉಸಿರಾಡಿದ್ದವರು. ಈಗ ಸಂಚಾರಿ ವಿಜಯ್ ಉಸಿರು ಇಲ್ಲದ್ದಿದ್ದರೂ ಅವರ ಹೆಸರು ಕನ್ನಡ ಕಲಾಭಿಮಾನಿಗಳ ಮನಸಿನಲ್ಲಿ ಉಸಿರಾಡುತ್ತಿದೆ.

ರಾಷ್ಟ್ರಪ್ರಶಸ್ತಿ ವಿಜೇತ ನಟ ಅಭಿನಯದ ಕಡೆಯ ಸಿನಿಮಾಗಳು ಬೆಳ್ಳಿತೆರೆಯ ಮೇಲೆ ರಂಜನೆ ಚಿಮ್ಮುವಿಕೆಗಾಗಿ ಕಾದಿವೆ. ಆದ್ರೆ ಪರಿಸ್ಥತಿ ಸದ್ಯಕ್ಕೆ ಸಿನಿಮಾ ರಂಗದ ಪರ ಇಲ್ಲ. ಸಂಚಾರಿ ವಿಜಯ್ ನಟಿಸಿರೋ ಬಿಡುಗಡೆಯಾಗದ ಸಿನಿಮಾಗಳಲ್ಲೊಂದು ‘‘ಪುಕ್ಸಟ್ಟೆ ಲೈಫು ಪುರ್​​ಸೊತ್ತೇ ಇಲ್ಲ’’ ಸಿನಿಮಾ.. ಅಬ್ಬಬಾ ಆ ನಟನೆಯನ್ನ ನೋಡಿದಾಗ, ಆ ಪಾತ್ರಕ್ಕೆ ಅವರನ್ನವರು ಅರ್ಪಿಸಿಕೊಂಡಿರೋದನ್ನ ನೋಡಿದಾಗ; ಛೇ.. ಸಂಚಾರಿ ವಿಜಯ್ ನಮ್ಮ ನಿಮ್ಮನೊಂದಿಗೆ ಇರಬೇಕಿತ್ತು ಅಂತ ಬೇಸರವಾಗುತ್ತೆ..

ಕಳ್ಳ ಪೊಲೀಸ್ ಆಟದಲ್ಲಿ ಸಂಚಾರಿ ವಿಜಯ್
ಈ ಚಿತ್ರದಲ್ಲಿ ಸಂಚಾರಿ ಅಭಿನಯ ಅಮೋಘ

ಪುಕ್ಸಟ್ಟೆ ಲೈಫು ಪುರ್​​ಸೊತ್ತೇ ಇಲ್ಲ.. ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ರಂಗಾಯಣ ರಘು ನಟನೆಯ ಸಿನಿಮಾ.. ರಂಗಭೂಮಿಯ ಘಟ್ಟಿ-ಜಟ್ಟಿ ಕಲಾವಿದರ ಸಮಾಗಮವೇ ಈ ಚಿತ್ರದಲ್ಲಾಗಿದೆ. ಅರವಿಂದ್ ಕುಪ್ಳೀಕರ್ ನಿರ್ದೇಶನದಲ್ಲಿ ಪುಕ್ಸಟ್ಟೆ ಲೈಫು ಪುರ್​ಸೊತ್ತೇ ಇಲ್ಲ ಸಿನಿಮಾ ಮೂಡಿಬಂದಿದೆ. ಬೇಲಿನೇ ಎದ್ದು ಹೊಲ ಮೇಯ್ದಂಗೆ ಅನ್ನೋ ಗಾದೆಯಂತೆ ಪೊಲೀಸರೇ ಕಳ್ಳರ ಜೊತೆ ಸೇರಿ ಕಳ್ಳತನ ಮಾಡಿದ್ರೆ ಹೆಂಗಿರುತ್ತೆ ಅನ್ನೋ ಎಳೆಯನ್ನ ಇಟ್ಕೊಂಡು ಸಿನಿಮಾ ಮಾಡಿದೆ ಚಿತ್ರತಂಡ.

ಅತ್ಯುತ್ತಮ ನಟ ಅನ್ನೋ ರಾಷ್ಟ್ರ ಪ್ರಶಸ್ತಿ ಬಂದ ನಂತರ ಸಂಚಾರಿ ವಿಜಯ್ ಅಭಿನಯದ ತಾಕತ್ತಿಗೆ ಸರಿಯಾದ ಸಿನಿಮಾಗಳು ಬರದೇ ಇದ್ದಾಗ ಪರಿಸ್ಥಿತಿಗಾಗಿ ಸಿಕ್ಕ ಸಿಕ್ಕ ಅವಕಾಶಗಳನ್ನ ಒಪ್ಪಿ ಅಪ್ಪಿಕೊಂಡರು. ಅವುಗಳಲ್ಲಿ ಒಳ್ಳೆ ಸಿನಿಮಾಗಳು ಇದ್ವು ಕೆಟ್ಟ ಸಿನಿಮಾಗಳು ಇದ್ವು.. ಆದ್ರೆ ಈಗ ಟೀಸರ್ ಮೂಲಕ ಹೊರ ಬಂದಿರೋ ಪುಕ್ಸಟ್ಟೆ ಲೈಫು ಪುರ್​​ಸೊತ್ತೇ ಇಲ್ಲ ಭರವಸೆ ಮೂಡಿಸುತ್ತಿದೆ. ಸಂಚಾರಿ ವಿಜಯ್ ನಟನೆ ಅದ್ಭುತವಾಗಿದೆ ಅನ್ನೋ ಸೂಚನೆ ಸಿಕ್ತಿದೆ.

 

Source: newsfirstlive.com Source link