ಗ್ಯಾಸ್ ಬೆಲೆ ಮತ್ತೆ ಏರಿಕೆ: ನಮಗೆ ‘ಬೂರೆದಿನ್’ ಕೊಡಿ ಸಾಕು ಎಂದ ಕುಸುಮಾ ಹನುಮಂತರಾಯಪ್ಪ

ಗ್ಯಾಸ್ ಬೆಲೆ ಮತ್ತೆ ಏರಿಕೆ: ನಮಗೆ ‘ಬೂರೆದಿನ್’ ಕೊಡಿ ಸಾಕು ಎಂದ ಕುಸುಮಾ ಹನುಮಂತರಾಯಪ್ಪ

ಬೆಂಗಳೂರು: ಗ್ಯಾಸ್ ಬೆಲೆ ಮತ್ತೆ ಮತ್ತೆ ಏರಿಕೆಯಾಗುತ್ತಲೇ ಇದೆ. ಇದೀಗ ಮತ್ತೆ 25 ರೂ ಏರಿಕೆಯಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಟ್ವೀಟ್ ಮೂಲಕ ಕುಸುಮಾ ಹನುಮಂತರಾಯಪ್ಪ ಆಕ್ರೋಶ ಹೊರಹಾಕಿದ್ದಾರೆ.. ನೀವು ಹೇಳುತ್ತಿದ್ದ ಅಚ್ಚೇದಿನ್ ಇದುವೇ ಆದರೆ ದಯಮಾಡಿ ನಮಗೆ ಹಿಂದೆ ಇದ್ದ ಬೂರೆದಿನ್ ಕೊಡಿ ಸಾಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಹೆಚ್ಚಳವಾಯ್ತು ಎಲ್​​​ಪಿಜಿ ಗ್ಯಾಸ್​​​​ ಸಿಲಿಂಡರ್​​​ ಬೆಲೆ.. ಗ್ರಾಹಕರಿಗೆ ಬಿಗ್​​ ಶಾಕ್​

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋವಿಡ್, ನಿರುದ್ಯೋಗ ಹೀಗೆ ಹಲವು ಸಮಸ್ಯೆಗಳಿಂದ ತತ್ತರಿಸಿರುವ ಜನಸಾಮಾನ್ಯನಿಗೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ₹25 ರಷ್ಟು ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ನೀವು ಹೇಳುತ್ತಿದ್ದ ಅಚ್ಚೇದಿನ ಇದುವೇ ಆದರೆ ದಯಮಾಡಿ ನಮಗೆ ಹಿಂದೆ ಇದ್ದ ಬೂರೆದಿನ್ ಕೊಡಿ ಸಾಕು. ಜನ ನೆಮ್ಮದಿಯಿಂದ ಜೀವನವನ್ನಾದರೂ ಸಾಗಿಸಲಿ ಎಂದು ಹೇಳಿದ್ದಾರೆ.

Source: newsfirstlive.com Source link