ಮೋದಿ ‘GDP’ ಏರುತ್ತಿದೆ ಅಂತಿದ್ರು, GDP ಅಂದ್ರೆ ಗ್ಯಾಸ್/ಡೀಸೆಲ್/ಪೆಟ್ರೋಲ್ ಅಂತ ಅರ್ಥವಾಯ್ತು- ರಾಹುಲ್ ಗಾಂಧಿ

ಮೋದಿ ‘GDP’ ಏರುತ್ತಿದೆ ಅಂತಿದ್ರು, GDP ಅಂದ್ರೆ ಗ್ಯಾಸ್/ಡೀಸೆಲ್/ಪೆಟ್ರೋಲ್ ಅಂತ ಅರ್ಥವಾಯ್ತು- ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ್ದಾರೆ. ಮೋದಿಜಿ ಯಾವಾಗಲೂ ಜಿಡಿಪಿ ಏರುತ್ತಿದೆ ಅನ್ನುತ್ತಲೇ ಇದ್ದರು.. ಹಣಕಾಸು ಸಚಿವರೂ ಯಾವಾಗಲೂ ಜಿಡಿಪಿ ಮೇಲ್ಮುಖವಾಗುತ್ತಿದೆ ಎನ್ನುತ್ತಿದ್ದರು.. ನನಗೆ ಜಿಡಿಪಿ ಅಂದ್ರೇನು ಅಂತ ನಂತರ ಅರ್ಥವಾಯ್ತು.. ಜಿಡಿಪಿಯ ಅರ್ಥ ಗ್ಯಾಸ್-ಡೀಸೆಲ್-ಪೆಟ್ರೋಲ್. ಕೇಂದ್ರ ಸರ್ಕಾರ ಜಿಡಿಪಿಯಿಂದ 23 ಲಕ್ಷ ಕೋಟಿಯನ್ನ ಸಂಪಾದಿಸಿದೆ.. ಆದ್ರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್​​ನಿಂದ ಅಲ್ಲ.. ಗ್ಯಾಸ್ ಡೀಸೆಲ್ ಮತ್ತು ಪೆಟ್ರೋಲ್​ನಿಂದ. ಹಾಗಾದ್ರೆ ಈ 23 ಲಕ್ಷ ಕೋಟಿ ಹಣ ಎಲ್ಲಿಗೆ ಹೋಗುತ್ತೆ.. ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಹೆಚ್ಚಳವಾಯ್ತು ಎಲ್​​​ಪಿಜಿ ಗ್ಯಾಸ್​​​​ ಸಿಲಿಂಡರ್​​​ ಬೆಲೆ.. ಗ್ರಾಹಕರಿಗೆ ಬಿಗ್​​ ಶಾಕ್

ಯುಪಿಎ ಸರ್ಕಾರ 2014 ರಲ್ಲಿ ಕೆಳಗಿಳಿದಾಗ ಎಲ್​ಪಿಜಿ ಸಿಲಿಂಡರ್ ಬೆಲೆ ₹410 ಇತ್ತು. ಇಂದು ಸಿಲಿಂಡರ್ ಬೆಲೆ 885ಕ್ಕೆ ಏರಿಕೆಯಾಗಿದೆ. 116 ಪರ್ಸೆಂಟ್ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ 71.5 ಪೈಸೆ ಪ್ರತೀ ಲೀಟರ್​ಗೆ ಇತ್ತು. ಇಂದು 101 ರೂಗೆ ಏರಿಕೆಯಾಗಿದೆ. ಇದರಲ್ಲಿ 42 ಪರ್ಸೆಂಟ್ ಏರಿಕೆಯಾಗಿದೆ. ಡೀಸೆಲ್ ಬೆಲೆ 57 ರೂ ಇತ್ತು.. ಈಗ 88 ರೂ ಆಗಿದೆ. ಯುಪಿಎ ಸಮಯದಲ್ಲಿ ಕ್ರೂಡ್ ಆಯಿಲ್ ಬಲೆ 105 ಇತ್ತು.. ಇದು ಅದರ ಬೆಲೆ 71 ಇದೆ. ನಮ್ಮ ಸಮಯದಲ್ಲಿ 72 ಪರ್ಸೆಂಟ್ ಹೆಚ್ಚಿತ್ತು.

ಕಳೆದ ಏಳುವರ್ಷಗಳಿಂದ ದೇಶದಲ್ಲಿ ಹೊಸ ಮಾದರಿಯ ಆರ್ಥಿಕತೆಯನ್ನ ನೋಡಿದ್ದೇವೆ. ಒಂದು ಕಡೆ ಅಪನಗದೀಕರಣವಾಗ್ತಿದ್ದರೆ ಮತ್ತೊಂದು ಕಡೆ ನಗದೀಕರಣವಾಗ್ತಿದೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ರೈತರು, ಕಾರ್ಮಿಕರು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು, ಸೂಕ್ಷ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ವೇತನ ಆಧಾರಿತ ವರ್ಗ, ಸರ್ಕಾರಿ ಉದ್ಯೋಗಿಗಳು ಮತ್ತು ಪ್ರಾಮಾಣಿಕ ಉದ್ಯಮಿಗಳನ್ನು ಅಪನಗದೀಕರಣ ಮಾಡಲಾಗಿದೆ. ನರೇಂದ್ರ ಮೋದಿಯವರ 4-5 ಗೆಳಯರಿಗೆ ಮಾತ್ರ ನಗದೀಕರಣ ಮಾಡಲಾಗಿದೆ ಎಂದು ಇದೇ ವೇಳೆ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.

Source: newsfirstlive.com Source link