ಟೆಸ್ಟ್​ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ಹಿಂದಿಕ್ಕಿದ ರೋಹಿತ್ ಶರ್ಮಾ​..!

ಟೆಸ್ಟ್​ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ಹಿಂದಿಕ್ಕಿದ ರೋಹಿತ್ ಶರ್ಮಾ​..!

ಇಂದು ಐಸಿಸಿ ಪುರುಷರ ಟೆಸ್ಟ್ ಱಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ನಾಯಕ ವಿರಾಟ್​ ಕೊಹ್ಲಿ ಅವರನ್ನ ಹಿಂದಿಕ್ಕಿ ರೋಹಿತ್​ ಶರ್ಮಾ ಟಾಪ್ ಸ್ಥಾನಕ್ಕೇರಿದ್ದಾರೆ. ಬರೋಬ್ಬರಿ 773 ಅಂಕಗಳೊಂದಿಗೆ ಹಿಟ್​ ಮ್ಯಾನ್ ರೋಹಿತ್ ಶರ್ಮಾ 5ನೇ ಸ್ಥಾನಕ್ಕೇರಿದ್ದಾರೆ. ಉಳಿದಂತೆ ಟಾಪ್​ನಲ್ಲಿದ್ದ ವಿರಾಟ್ ಕೊಹ್ಲಿ 6ನೇ ಸ್ಥಾನಕ್ಕೆ ಇಳಿದಿದ್ದಾರೆ.

ಅದರಲ್ಲೂ ಟೆಸ್ಟ್​ನಲ್ಲಿ ಶತಕದ ಮೇಲೆ ಶತಕ ಬಾರಿಸ್ತಿರೋ ಇಂಗ್ಲೆಂಡ್ ನಾಯಕ ಜೋ ರೂಟ್​ ಐಸಿಸಿ ಱಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 916 ಅಂಕ ಪಡೆದ ರೂಟ್, 6 ವರ್ಷಗಳ ಬಳಿಕ ಜೋ ರೂಟ್​​ ಅಗ್ರಸ್ಥಾನಕ್ಕೆ ಏರಿದ್ದಾರೆ.

ಇನ್ನು 901 ಅಂಕ ಪಡೆದ ನ್ಯೂಜಿಲೆಂಡ್​​ ನಾಯಕ ಕೇನ್​​ ವಿಲಿಯಮ್ಸನ್ ​2ನೇ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟೀವ್​ ಸ್ಮಿತ್, 4ನೇ ಸ್ಥಾನದಲ್ಲಿ ಮಾರ್ನಸ್​, 5ನೇ ಸ್ಥಾನದಲ್ಲಿ ರೋಹಿತ್ ಹಾಗೂ ವಿರಾಟ್ ಕೊಹ್ಲಿ 6 ನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ 7ನೇ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಅಝಾಮ್​, 8ನೇ ಸ್ಥಾನದಲ್ಲಿ ಡೇವಿಡ್ ವಾರ್ನರ್, 9ನೇ ಸ್ಥಾನದಲ್ಲಿ ಕ್ವಿಂಟನ್ ಡಿ ಕಾಕ್​ ಹಾಗೂ ನ್ಯೂಜಿಲೆಂಡ್​ ಹೆನ್ರಿ ನಿಚ್​​ಲೋಸ್​ 10ನೇ ಸ್ಥಾನ ಪಡೆದಿದ್ದಾರೆ.

Source: newsfirstlive.com Source link