ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲಿಸಿದ ಅನಿತಾ ಭಟ್

ಬೆಂಗಳೂರು: ಟ್ರೋಲಿಗರ ವಿರುದ್ಧವಾಗಿ ಸ್ಯಾಂಡಲ್‍ವುಡ್ ನಟಿ ಅನಿತಾ ಭಟ್ ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ನಟಿ ಮಾಡುವ ಟ್ವೀಟ್‍ಗೆ ಬ್ಯಾಡ್ ಕಮೆಂಟ್ ಮತ್ತು ಟ್ರೋಲ್ ಮಾಡುವ ಹಲವರ ವಿರುದ್ಧವಾಗಿ ಸೈಬರ್ ಕ್ರೈಂಗೆ ನಟಿ ದೂರು ನೀಡಿದ್ದಾರೆ. ಟ್ರೋಲರ್ಸ್ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡುತ್ತಾರೆ. ಅದ್ರಲ್ಲೂ ನಟಿಯರು ಅಂದ್ರೆ ಟಾರ್ಗೆಟ್ ಮಾಡುತ್ತಾರೆ. ಈ ಬಗ್ಗೆ ಅನಿತಾ ಭಟ್ ಯಲಹಂಕ ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಈ ಕುರಿತಾಗಿ ಕಂಪ್ಲೆಂಟ್ ಕಾಫಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಏನಿದೆ?
ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ anitha bhat ಎಂಬ ಖಾತೆಯನ್ನು ಹೊಂದಿದ್ದು, ಸದರಿ ಖಾತೆಯಿಂದ ಹಲವು ಟ್ವೀಟ್ಟ್‍ಗಳನ್ನು ಮಾಡಲಾಗಿದೆ. ಟ್ವೀಟ್‍ಗಳಿಗೆ ಯಾರೋ ಅಪರಿಚಿತ ಅಸಾಮಿ ಕೆಟ್ಟದಾಗಿ ಟ್ವೀಟ್ ಮಾಡುತ್ತಿದ್ದು, ಈ ರೀತಿಯಾಗಿ ಮಾಡುತ್ತಿರುವ ಸದರ ಆಸಾಮಿಯನ್ನು ಪತ್ತೆ ಮಾಡಿ ಠಾಣೆಗೆ ಕರೆಯಿಸಿ ಸೂಕ್ತ ತಿಳುವಳಿಕೆಯನ್ನು ನೀಡಿ ಇನ್ನೊಮಮ್ಮೆ ಹೀಗೆ ಮಾಡದ ಹಾಗೆ ಬಂದೋಬಸ್ತ್ ಮಾಡಿಕೊಡಬೇಕೆಂದು ದೂರಿನಲ್ಲಿದೆ. ಇದನ್ನೂ ಓದಿ: ಗೋಡ್ಸೆಯ ದೇಶಪ್ರೇಮಕ್ಕೆ ಜೈ, ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಚಿಕೊಂಡು ಕೂತಿದ್ದಾರೆ: ಅನಿತಾ ಭಟ್

ಈ ಹಿಂದೆ ಅನಿತಾ ಭಟ್ ಟ್ವೀಟ್‍ನಲ್ಲಿ, ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಗೊತ್ತಿದ್ರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ ಎಂದು ಪೋಸ್ಟ್ ಮಾಡಿದ್ದು, ಅದಕ್ಕೆ ವೀಕ್ಷಕರು ಗೋಡ್ಸೆ ಜಿಂದಾಬಾದ್ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಶಿರಸಿ ಮಾರಿಕಾಂಬಾ ದೇವಿ ಸೇವೆಗೆ ದುಬಾರಿ ಶುಲ್ಕ-ಭಕ್ತರ ಆಕ್ರೋಶ

ನಟಿ ಮುಂದುವರಿದು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಅವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರೆಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು ಎಂದು ಅನಿತಾ ಭಟ್ ಹೇಳಿದ್ದಾರೆ. ಇದನ್ನೂ ಓದಿ: ಘೋಲ್ ಮೀನು ಹಿಡಿದು ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಮೀನುಗಾರ

ಮುಂದೆ ನೆಗೆಟಿವ್ ಕಾಮೆಂಟ್ ಬರುತ್ತಿರುವುದನ್ನು ಗಮನಿಸಿದ ಅವರು, ನನ್ನ ಟ್ವಿಟ್ಟರ್, ಪೋಸ್ಟ್ ಮಾಡುವುದು ನನ್ನ ಆಯ್ಕೆ. ನನ್ನ ಅಭಿಪ್ರಾಯವನ್ನು ನಿಮ್ಮ ಕೆಟ್ಟ ಕಾಮೆಂಟ್‍ಗಳು ಬದಲಾಯಿಸುವುದಿಲ್ಲ. ಇಷ್ಟಕ್ಕೆಲ್ಲ ಹೆದರೋ ಹಾಗಿದ್ರೆ ಭೂಮಿಯಿಂದಾನೆ ಹೋಗಿ ಬಿಡ್ತಿದ್ದೆ ಇಷ್ಟೊತ್ತಿಗೆ. ಎಷ್ಟು ಬೇಕಾದ್ರೂ ಗಂಟಲು ಹರ್ಕೊಳಿ ಹೋಗಿ ಎಂದು ಗರಂ ಆಗಿ ಉತ್ತರಿಸಿದ್ದರು. ಇದೀಗ ಟ್ರೋಲ್ ಮಾಡುವ ಮತ್ತು ಕೆಟ್ಟದಾಗಿ ಕಮೆಂಟ್ ಮಾಡುವರ ವಿರುದ್ಧ ದೂರು ದಾಖಲಿಸಿದ್ದಾರೆ.

Source: publictv.in Source link