ಗರ್ಭಿಣಿ ಎಂದವರಿಗೆ ಟೀ ಶರ್ಟ್​ ಮೇಲೆತ್ತಿ ಸೋನಮ್​ ಕಪೂರ್ ತೋರಿಸಿದ್ದೇನು?

ಗರ್ಭಿಣಿ ಎಂದವರಿಗೆ ಟೀ ಶರ್ಟ್​ ಮೇಲೆತ್ತಿ ಸೋನಮ್​ ಕಪೂರ್ ತೋರಿಸಿದ್ದೇನು?

ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್​ ನಟಿ ಸೋನಮ್​ ಕಪೂರ್​ ಗರ್ಭಿಣಿಯಾಗಿದ್ದಾರೆ ಎಂಬ ವದಂತಿ ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿತ್ತು. ಪತಿ ಅನಂದ್​ ಅಹೂಜ ಜೊತೆ ಲಂಡನ್​ನಿಂದ ಮುಂಬೈಗೆ ಬಂದಿಳಿದ ನಟಿ ಸೋನಮ್​ ಕಪೂರ್​ ಗರ್ಭಿಯಾಗಿದ್ದಾರೆ ಎಂದು ಹಲವರು ಅನುಮಾನ ಪಟ್ಟಿದರು. ಅದ್ರೆ ಇದೀಗ ಸೋನಮ್​ ತಾವು ಗರ್ಭಿಣಿಯಾದ್ದಾರೆ ಎಂಬ ವದಂತಿಗೆ ತೆರೆ ಎಳೆದಿದ್ದಾರೆ.

ಹೌದು ನಟಿ ಸೋನಮ್​ ಕಪೂರ್​ ತಾವು ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವ ವಿಡಿಯೋವೊಂದನ್ನು ಸ್ಟೋರಿ ಹಾಕಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಸೋನಮ್​ ತಾವು ಧರಿಸಿದ ಟೀ ಶರ್ಟ್​ ಅನ್ನು ಎತ್ತಿ ಹಿಡಿದು ಸೊಂಟ ತೋರಿಸುವ ಮೂಲಕ ತಾವು ಗರ್ಭಿಣಿ ಎಂಬ ವದಂತಿಗೆ ತೆರೆ ಎಳೆದಿದ್ದಾರೆ. ಸದ್ಯ ಸೋನಮ್​ ಕಪೂರ್​ರವರ ಈ ಹೊಸ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

Source: newsfirstlive.com Source link