ಕ್ರೈಂ​​​ ಸ್ಪಾಟ್​​ನಲ್ಲಿ ಕಾಂಡೋಮ್​​ ಸಿಕ್ಕ ಮಾತ್ರಕ್ಕೆ ಅದು ಒಪ್ಪಿತ ಲೈಂಗಿಕತೆಯಲ್ಲ; ಕೋರ್ಟ್​

ಕ್ರೈಂ​​​ ಸ್ಪಾಟ್​​ನಲ್ಲಿ ಕಾಂಡೋಮ್​​ ಸಿಕ್ಕ ಮಾತ್ರಕ್ಕೆ ಅದು ಒಪ್ಪಿತ ಲೈಂಗಿಕತೆಯಲ್ಲ; ಕೋರ್ಟ್​

ಮುಂಬೈ: ಅಪರಾಧ ಕೃತ್ಯ ನಡೆದ ಸ್ಥಳದಲ್ಲಿ ಕಾಂಡೋಮ್​​ ಪತ್ತೆಯಾದ ಕೂಡಲೇ ಅದು ಒಪ್ಪಿತ ಲೈಂಗಿಕ ಕ್ರಿಯೆ ಎಂದು ಹೇಳಲಾಗುವದಿಲ್ಲ ಎಂದು ಮುಂಬೈ ಅಡಿಷನಲ್​​ ಸೆಷನ್ಸ್​ ಕೋರ್ಟ್​ನ ಜಡ್ಜ್​​​ ಸಂಜಾಶ್ರೀ ಜೆ ಘಾರಾಟ್​​ ಅಭಿಪ್ರಾಯಪಟ್ಟರು. ಇಂದು ಭಾರತೀಯ ವಾಯುಸೇನೆ ಅಧಿಕಾರಿ ಅತ್ಯಾಚಾರ ಪ್ರಕರಣದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್​ ಹೀಗೆ ಹೇಳಿದೆ.

ಮೂರು ತಿಂಗಳ ಹಿಂದೆ ಮೇ 17ನೇ ತಾರೀಕಿನಂದು ಭಾರತೀಯ ನೌಕಾಪಡೆ ಸಿಬ್ಬಂದಿಯ ಪತ್ನಿ ಮೇಲೆ ವಾಯುಸೇನೆಯ ಅಧಿಕಾರಿ ಅತ್ಯಾಚಾರ ಎಸಗಿದ್ದ ಎಂದು ವರದಿಯಾಗಿತ್ತು. ಹೆಡ್ ಮಸಾಜ್ ಮಾಡುವ ನೆಪದಲ್ಲಿ ಆರೋಪಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಅನ್ನೋ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಂತ್ರಸ್ತೆ ಮತ್ತು ಗಂಡ ನೌಕಾ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಕಫ್ ಪೆರೇಡ್ ಪೊಲೀಸ್ ಆರೋಪಿಯನ್ನು ಬಂಧಿಸಿದ್ದರು.

ಸಂತ್ರಸ್ತ ಮಹಿಳೆ ಗಂಡ ಕೂಡ ನೌಕಾಪಡೆ ಸಿಬ್ಬಂದಿ. ಈತ ಮತ್ತು ಆರೋಪಿ ಇಬ್ಬರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಒಂದು ವರ್ಷದದಿಂದ ಮುಂಬೈನ ಕೊಲಾಬಾ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆ ತೆಗೆದುಕೊಂಡು ನೌಕಾಪಡೆ ಸಿಬ್ಬಂದಿ ಆರೋಪಿಯೊಂದಿಗೆ ವಾಸ ಮಾಡುತ್ತಿದ್ದ. ಒಮ್ಮೆ ಹೆಂಡತಿಯನ್ನು ಅಪಾರ್ಟ್ಮೆಂಟ್​​ನಲ್ಲೇ ಬಿಟ್ಟು ತರಬೇತಿಗೆ ಎಂದು ಕೇರಳಕ್ಕೆ ಹೋಗಿದ್ದ ಸಂದರ್ಭದಲ್ಲಿ ಆರೋಪಿ ಅತ್ಯಾಚಾರ ಎಸಗಿದ್ದಾನೆ ಅನ್ನೋ ಆರೋಪ ಇದೆ.

ನೌಕಾಪಡೆ ಸಿಬ್ಬಂದಿ ಹೆಂಡತಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಯಾವುದೇ ಕಾರಣಕ್ಕೂ ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾನೆ. ಕೇರಳದಿಂದ ಗಂಡ ಬಂದ ಮೇಲೆ ಹೆಂಡತಿ ಘಟನೆ ಬಗ್ಗೆ ವಿವರಿಸಿದ್ದಾಳೆ. ಇದಾದ ಬಳಿಕ ಗಂಡ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ದೆವ್ವದ ವೇಷ ಧರಿಸಿ ಕೆಲಸ ಮಾಡ್ತಿದ್ದ ಹೋಟೆಲ್​ನಲ್ಲೇ ಕಳ್ಳತನ ಮಾಡಿದ ಸರ್ವರ್

ನನಗೆ ಪ್ರಮೋಶನ್​ ಸಿಕ್ಕಿದೆ ಎಂದು ಚಾಕೋಲೆಟ್​​​ ನೀಡಲು ಆರೋಪಿ ರೂಮಿಗೆ ಬಂದರು. ಇದಾದ ಮೇಲೆ ಗ್ಲಾಸ್​​ವೊಂದರಲ್ಲಿ ಪಾನೀ ಮಿಕ್ಸ್ ಮಾಡಿ ಕುಡಿಸಿದರು. ನನಗೆ ತಲೆನೋವು ಶುರುವಾಯ್ತು. ನಾನು ಪೇನ್​​ ಕಿಲ್ಲರ್​​ ಮಾತ್ರೆ ತೆಗೆದುಕೊಂಡು ಮಲಗಿದ್ದಾಗ ಇದನ್ನೇ ಸರಿಯಾದ ಸಮಯ ಎಂದುಕೊಂಡು ಅತ್ಯಾಚಾರ ಎಸಗಿದ್ರು. ಯಾರಿಗಾದ್ರೂ ಹೇಳಿದ್ರೆ ನಿನ್ನ ಮತ್ತು ನಿನ್ನ ಗಂಡನನ್ನು ಕೊಲೆ ಮಾಡುವುದಾಗಿ ಎಂದು ಬೆದರಿಕೆ ಹಾಕಿದರು ಎಂದು ಸಂತ್ರಸ್ತೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ವಾಯುಸೇನೆ ಅಧಿಕಾರಿ ಈಗ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಕೋರ್ಟ್​ ವಿಚಾರಣೆ ನಡೆಸಿದೆ. ಈ ವೇಳೆ ಇದೊಂದು ಒಪ್ಪಿತ ಸೆಕ್ಸ್ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ರೂಮಿನಲ್ಲಿ ಕಾಂಡೋಮ್​ ಸಿಕ್ಕಿದ್ದು ಎಂದಿದ್ದಾರೆ. ಆಗ ಕ್ರೈಮ್​ ಸ್ಟಾಟ್​​ನಲ್ಲಿ ಕಾಂಡೋಮ್ ಪತ್ತೆಯಾದ ಮಾತ್ರ ಒಪ್ಪಿತ ಸೆಕ್ಸ್ ಎಂದು ಹೇಳಲಾಗುವುದಿಲ್ಲ ಎಂದಿರುವ ಕೋರ್ಟ್ ಆರೋಪಿಗೆ ಬೇಲ್​​ ನೀಡಿದೆ.
​​​

Source: newsfirstlive.com Source link