ಫೈಟರ್ ಸಾವು; ₹10 ಲಕ್ಷ ನೆರವು.. ವಿವೇಕ್ ಸೋದರನ ಓದಿನ ಜವಾಬ್ದಾರಿ ನಂದು ಎಂದ ಗುರು ದೇಶಪಾಂಡೆ

ಫೈಟರ್ ಸಾವು; ₹10 ಲಕ್ಷ ನೆರವು.. ವಿವೇಕ್ ಸೋದರನ ಓದಿನ ಜವಾಬ್ದಾರಿ ನಂದು ಎಂದ ಗುರು ದೇಶಪಾಂಡೆ

ಬೆಂಗಳೂರು: ಲವ್ ಯು ರಚ್ಚು ಶೂಟಿಂಗ್ ವೇಳೆ ಮೃತರಾದ ಫೈಟರ್ ವಿವೇಕ್ ನಿವಾಸಕ್ಕೆ ಇಂದು ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಭೇಟಿ ನೀಡಿ, ಸಾಂತ್ವನ ಹೇಳಿದರು. ಪ್ರಕರಣ ನಡೆದು 24 ದಿನಗಳ ನಂತರ ಮೃತ ಫೈಟರ್ ಮನೆಗೆ ನಿರ್ಮಾಪಕ ಗುರು ದೇಶಪಾಂಡೆ ಭೇಟಿ ನೀಡಿ ₹5 ಲಕ್ಷ ರೂಪಾಯಿ ಚೆಕ್ ನೀಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗುರು ದೇಶಪಾಂಡೆ.. ಅಚನಾಕ್ ಆಗಿ ಘಟನೆ ನಡೆದು ಹೋಗಿದೆ, ನಾನು ಸ್ಥಳದಲ್ಲಿ ಇರಲಿಲ್ಲ. ಯಾರು ಏನೇ ಹೇಳಿದರೂ ವಿವೇಕ್​ರನ್ನ ಅವರ ಕುಟುಂಬಕ್ಕೆ ವಾಪಸ್ ಕೊಡಲು ಸಾಧ್ಯವಿಲ್ಲ. ಆದರೆ ನಾನು ಅವರ ಕುಟುಂಬದ ಜೊತೆ ಇರ್ತೀನಿ ಎಂದರು.

ಇದನ್ನೂ ಓದಿ: ಫೈಟರ್ ಸಾವು ಕೇಸ್​​​; ನಟ ಅಜಯ್ ರಾವ್​ಗೆ ಸಿಕ್ತು ನಿರೀಕ್ಷಣಾ ಜಾಮೀನು

ವಿವೇಕ್ ಕುಟುಂಬಕ್ಕೆ 10 ಲಕ್ಷ ರೂಪಾಯಿ ನೆರವು ನೀಡುವುದಾಗಿ ಹೇಳಿದ್ದೀನಿ. ಅಲ್ಲದೇ ಇಂದು 5 ಲಕ್ಷದ ಚೆಕ್ ನೀಡಿದ್ದೀನಿ, ಸಿನಿಮಾ ರಿಲೀಸ್ ಆದ ಎರಡು ದಿನಕ್ಕೆ ಉಳಿದ ಐದು ಲಕ್ಷ ರೂಪಾಯಿ ನೀಡ್ತೇನೆ ಎಂದು ಅವರ ತಾಯಿಗೆ ಹೇಳಿದ್ದೀನಿ. ಜೊತೆಗೆ ವಿವೇಕ್ ತಮ್ಮನ ವಿಧ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿದ್ದೇನೆ. ಅಲ್ಲದೇ ನಾನು ವಿವೇಕ್ ಕುಟುಂಬದ ಜೊತೆ ಇರ್ತೇನೆ ಅಂತಾ ಭರವಸೆ ನೀಡಿದ್ದೇನೆ ಎಂದರು.

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಗುರು ದೇಶಪಾಂಡೆ ಕೆಲ ದಿನಗಳ ಹಿಂದಷ್ಟೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಆಗಸ್ಟ್​ 9 ರಂದು ‘ಲವ್​ ಯು ರಚ್ಚು’ ಚಿತ್ರೀಕರಣದ ವೇಳೆ ವಿದ್ಯುತ್ ಶಾಕ್ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಯನ್ನ ಪೊಲೀಸ್ ಅಧಿಕಾರಿಗಳು ನಡೆಸುತ್ತಿದ್ದಾರೆ.

ಇದನ್ನೂ ಓದಿ: ನಾನು ಬೇಲ್​​ಗೆ ಅರ್ಜಿ ಹಾಕಿದ್ದು ‘ಈ’ ಕಾರಣಕ್ಕೆ, ಹೆದರಿ ಅಲ್ಲ -ಅಜಯ್ ರಾವ್

Source: newsfirstlive.com Source link