ಅದ್ದೂರಿಯಾಗಿ ನಡೆದ ವೀರ ರಾಣಿ ಚನ್ನಮ್ಮ ಮೂರ್ತಿ ಮೆರವಣಿಗೆ

ಅದ್ದೂರಿಯಾಗಿ ನಡೆದ ವೀರ ರಾಣಿ ಚನ್ನಮ್ಮ ಮೂರ್ತಿ ಮೆರವಣಿಗೆ

ಹಾವೇರಿ: ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಕಿತ್ತೂರ ರಾಣಿ ಚನ್ನಮ್ಮ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ಹಿಂದಿನ ಸೋಮವಾರ ನಡೆಯಿತು. ಮೆರವಣಿಗೆ ಬಳಿಕ 13 ಅಡಿ ಎತ್ತರದ ಕಂಚಿನ ಮೂರ್ತಿಯನ್ನ ಶಿಗ್ಗಾಂವಿ ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದವರು ಮತ್ತು ಸಾರ್ವಜನಿಕರು ಭಾಗಿಯಾಗಿದ್ದರು.

ತಾಲೂಕಿನ ಗೊಟಗೋಡಿ ರಾಕ್ ಗಾರ್ಡನ್​​ನಿಂದ ಹೊರಟ ಮೂರ್ತಿ, ಪಟ್ಟಣದ ಗಂಗೇಭಾವಿ ಕ್ರಾಸ್​ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪುಷ್ಪ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿ ರಾಣಿ ಚನ್ನಮ್ಮ ಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದರು.

blank

ಇನ್ನು ಮೆರವಣಿಗೆಯಲ್ಲಿ ಕುಂಭಮೇಳ, ಕುದುರೆ ಕುಣಿತ, ಕೇಸರಿ ಧ್ವಜಗಳು, ಮೇಳೈಸಿದ್ದವು. ಜೊತೆಗೆ ಹರ ಹರ ಮಹಾದೇವ ಎಂಬ ಘೋಷಣೆಗಳು ಮೊಳಗಿದವು. ಕಹಳೆ ತಂಡ, ಫಿರಂಗಿ ದಳದ ವೇಷಧಾರಿಗಳ ಅಣುಕು ಪ್ರದರ್ಶನ ಇತ್ತು. ಇನ್ನು ಕಿತ್ತೂರ ಚನ್ನಮ್ಮನ ಮೂರ್ತಿ ಮೆರವಣಿಗೆಯ ಸ್ವಾಗತಕ್ಕಾಗಿ ಪ್ರತಿ ಬೀದಿಗಳಲ್ಲಿ ಕೇಸರಿ ಧ್ವಜ ಕಟ್ಟಲಾಗಿತ್ತು. ಮಾವಿನ ತೋರಣ ಹಾಗೂ ಬಣ್ಣದ ಹಾಳೆಗಳ ತಳಿರು ತೋರಣಗಳು ರಾರಾಜಿಸುತ್ತಿದ್ದವು.

ದಾವಣಗೆರೆಯ ಬಿಎಸ್​ ಚನ್ನಬಸಪ್ಪ ಜವಳಿ ಮಳಿಗೆಯ ಉಮಾಪತಿ, ಶ್ರೀಕಾಂತ ದುಂಡಿಗೌಡ್ರ, ಚಂದ್ರಶೇಖರ್ ಪೂಜಾರ, ಮಾಜಿ ಸಂಸದ ಮಂಜುನಾಥ್ ಕನ್ನೂರ, ವಿಧಾನಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳಕ್ಕನವರ, ಪಂಚಮಸಾಲಿ ಸಮಾಜದ ತಾಲೂಕಿ ಘಟಕದ ಅಧ್ಯಕ್ಷ ಶಿವಾನಂದ ಬಾಗೂರು ಸೇರಿದಂತೆ ಅನೇಕ ಗಣ್ಯರು ವೀರ ರಾಣಿ ಕಿತ್ತೂ ಚನ್ನಮ್ಮ ಮೂರ್ತಿಗೆ ಹೂಮಾಲೆಗಳನ್ನ ಹಾಕಿ ಗೌರವ ಸಲ್ಲಿಸಿದರು.

Source: newsfirstlive.com Source link