ಸಕ್ರೆಬೈಲ್ ಆನೆ ಬಿಡಾರದಲ್ಲಿ ಅಪ್ಪು ಶೂಟಿಂಗ್; ಚಿತ್ರ ಯಾವುದು ಗೊತ್ತಾ..?

ಸಕ್ರೆಬೈಲ್ ಆನೆ ಬಿಡಾರದಲ್ಲಿ ಅಪ್ಪು ಶೂಟಿಂಗ್; ಚಿತ್ರ ಯಾವುದು ಗೊತ್ತಾ..?

ಶಿವಮೊಗ್ಗ: ಶೂಟಿಂಗ್​ಗಾಗಿ ಸಕ್ರೆಬೈಲಿನ ಆನೆ ಬಿಡಾರಕ್ಕೆ ನಟ ಪುನೀತ್ ರಾಜ್​ಕುಮಾರ್ ಭೇಟಿ ನೀಡಿದ್ದರು.
ಸರ್ಕಾರಿ ಡಾಕ್ಯುಮೆಂಟರಿ ಸಂಬಂಧ ಇಂದು ಮಧ್ಯಾಹ್ನ ಪುನೀತ್ ರಾಜ್​ಕುಮಾರ್ ಆಗಮಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಒಪನ್ ಜೀಪ್​​ನಲ್ಲಿ ಬಂದ ನಟ ಆನೆಗಳನ್ನ ಮುದ್ದಾಡುವ ದೃಶ್ಯವನ್ನ ಸೆರೆ ಹಿಡಿಯಲಾಗಿದೆ.

blank

ಕುಂತಿ ಹಾಗೂ ಧನುಷ್ ಆನೆಗೆ ಆಹಾರ ನೀಡುವ ದೃಶ್ಯಗಳು ಕೂಡ ಸೆರೆಯಾಗಿವೆ. ಪುನೀತ್ ರಾಜ್​ಕುಮಾರ್ ಭೇಟಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶವನ್ನ ನಿರ್ಬಂಧಿಸಲಾಗಿತ್ತು. ಆದರೂ ನಟನ ನೋಡಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗ ನಡೆಯಿತು.

blank

ಪರಿಸರದ ಕಾಳಜಿ ಬಗ್ಗೆ ಸಂಬಂಧಿಸಿದ ಡಾಕ್ಯುಮೆಂಟರಿ ಇದಾಗಿದೆ. ಪುನೀತ್ ಅವರು ಇದಕ್ಕೆ ಉಚಿತವಾಗಿ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಅನ್ನೋ ಮಾಹಿತಿ ತಿಳಿದುಬಂದಿದೆ.

Source: newsfirstlive.com Source link