‘ನೀವೆಲ್ಲ ಹಿಂಗ್​ ಮಾಡೋದು ತಪ್ಪು ಅಲ್ವೇನಣ್ಣ?’ -ಅಭಿಷೇಕ್ ನಗೆ ಚಟಾಕಿ

‘ನೀವೆಲ್ಲ ಹಿಂಗ್​ ಮಾಡೋದು ತಪ್ಪು ಅಲ್ವೇನಣ್ಣ?’ -ಅಭಿಷೇಕ್ ನಗೆ ಚಟಾಕಿ

ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಜನರಿಗೆ ಮಾತು ಕೊಟ್ಟಂತೆ ಸಂಸದೆ ಸುಮಲತಾ ಅಂಬರೀಶ್ ಅವರು ಜಿಲ್ಲೆಯಲ್ಲಿ ಸ್ವತಃ ಮನೆ ನಿರ್ಮಾಣ ಮಾಡಲು ಇಂದು ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪುತ್ರ ಅಭಿಷೇಕ್ ಅಂಬರೀಶ್ ಮಾಧ್ಯಮಗಳ ಜೊತೆ ಮಾತನಾಡಿದು.

ಮನೆ ಮಾಡ್ತೀವಿ ಅಂತಾ ಅಮ್ಮಾ ಮಾತು ಕೊಟ್ಟಿದ್ದರು, ಇದೀಗ ಆ ಕೆಲಸ ಆಗಿದೆ ಅಂತಾ ಹೇಳಿದ್ರು. ಈ ವೇಳೆ ಮಾಧ್ಯಮಗಳ ಅವರ ರಾಜಕೀಯ ಭವಿಷ್ಯದ ಬಗ್ಗೆ ಕೇಳಿದಾಗ.. ಸುಮ್ನಿರಣ್ಣ.. ನೀನ್ ಅದೆಲ್ಲಾ ಮಾತಾಡಬೇಡ ಎಂದು ನಕ್ಕರು.. ಈಗಾಗಲೇ ಮೂರು ಸಲ ಕೇಳಿದ್ದೀರಾ.. ಮೂರು ಸಲನೂ ನಿಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿದ್ದೀನಿ..

ರಾಜಕೀಯಕ್ಕೆ ಬರೋದು ನಮ್ಮ ಇಚ್ಛೆ ಅಲ್ಲ, ಅದು ಜನರ ಇಚ್ಛೆ. ಸಮಯ ಸಂದರ್ಭ ಬಂದಾಗ ಗೊತ್ತಾಗುತ್ತೆ. ಏನಣ್ಣ ಪೂಜೆ ಬಗ್ಗೆ ಕೇಳ್ತೀರಿ ಅಂತಾ ಬಂದ್ರೆ, ನೀವೆಲ್ಲ ಹಿಂಗ್​ ಮಾಡೋದು ತಪ್ಪು ಅಲ್ವೇನಣ್ಣ? ಅಂತಾ ತಮಾಷೆ ಮಾಡಿ ಹೋದರು.

Source: newsfirstlive.com Source link