ತಾಲಿಬಾನ್​ ಉಗ್ರ ಸಂಘಟನೆ ಅಂದಮೇಲೆ ಮಾತುಕತೆ ನಡೆಸಿದ್ಯಾಕೆ?; ಮೋದಿ ಸರ್ಕಾರಕ್ಕೆ ಓಮರ್​ ಅಬ್ದುಲ್ಲಾ ಪ್ರಶ್ನೆ

ತಾಲಿಬಾನ್​ ಉಗ್ರ ಸಂಘಟನೆ ಅಂದಮೇಲೆ ಮಾತುಕತೆ ನಡೆಸಿದ್ಯಾಕೆ?; ಮೋದಿ ಸರ್ಕಾರಕ್ಕೆ ಓಮರ್​ ಅಬ್ದುಲ್ಲಾ ಪ್ರಶ್ನೆ

ನವದೆಹಲಿ: ತಾಲಿಬಾನಿಗಳ ಜೊತೆ ಭಾರತ ಅಧಿಕೃತವಾಗಿ ಮಾತುಕತೆ ನಡೆಸಿದ್ದಕ್ಕೆ ವಿಪಕ್ಷಗಳು ಕೇಂದ್ರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್​ ಅಬ್ದುಲ್ಲಾ ಈ ಬಗ್ಗೆ ಮೋದಿ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದು, ತಾಲಿಬಾನ್​ ಸಂಘಟನೆಯನ್ನು ನೀವು ಉಗ್ರ ಸಂಘಟನೆ ಅಂತ ಪರಿಗಣಿಸಿದ್ದಿರೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು ಅಂತಾ ಆಗ್ರಹಿಸಿದ್ದಾರೆ.

ಮಂಗಳವಾರ ತಾಲಿಬಾನ್ ನಾಯಕ ಶೇರ್ ಮೊಹಮ್ಮದ್ ಸ್ಟಾನಿಕ್‌ಜೈ, ಕತಾರ್‌ನಲ್ಲಿರುವ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್ ಅವರನ್ನು ಭೇಟಿಯಾಗಿದ್ದಾರೆ. ಭಾರತದ ರಾಯಭಾರಿ ಡಾ. ದೀಪಕ್​​ ಮಿತ್ತಲ್​​ರನ್ನು ಮೊದಲ ಬಾರಿಗೆ ಭೇಟಿಯಾಗಿರುವ ಸ್ವಾನಿಕ್​​ಜೈ, ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ಭದ್ರತೆ ಕುರಿತು ತಾಲಿಬಾನಿಗಳ ಪ್ರತಿನಿಧಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಭಾರತದ ರಾಯಭಾರಿ ಭೇಟಿಯಾದ ತಾಲಿಬಾನ್​​​ ನಾಯಕ; ಸ್ಟಾನಿಕ್‌ಜೈ ಇಲ್ಲಿಗೂ ಏನು ನಂಟು ಗೊತ್ತಾ..?

Source: newsfirstlive.com Source link