ನಿಮ್ಮ ಸ್ನೇಹಿತರನ್ನು ಶ್ರೀಮಂತರನ್ನಾಗಿ ಮಾಡೋದೆ ದೇಶದ ಅಭಿವೃದ್ದಿಯಲ್ಲವೇ?; ಮೋದಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ನಿಮ್ಮ ಸ್ನೇಹಿತರನ್ನು ಶ್ರೀಮಂತರನ್ನಾಗಿ ಮಾಡೋದೆ ದೇಶದ ಅಭಿವೃದ್ದಿಯಲ್ಲವೇ?; ಮೋದಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ನಬದೆಹಲಿ: ಎಲ್​ಪಿಜಿ ದರ ಏರಿಕೆಯನ್ನು ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಖಂಡಿಸಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಪ್ರಿಯಾಂಕಾ ಗಾಂಧಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀವು ಅಧಿಕಾರಕ್ಕೆ ಬಂದ ನಂತರ ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಿರೋದು ನಿಮ್ಮ ಶ್ರೀಮಂತ ಸ್ನೇಹಿತರು. ಇದೇ ನಿಮ್ಮ ಪ್ರಕಾರ ದೇಶದ ಅಭಿವೃದ್ಧಿಯೆಂದರೆ ಅಲ್ಲವೇ ಎಂದು ಪ್ರಧಾನಿ ಮೋದಿಯನ್ನು ಪ್ರಶ್ನೆ ಮಾಡಿ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಮೋದಿ ‘GDP’ ಏರುತ್ತಿದೆ ಅಂತಿದ್ರು, GDP ಅಂದ್ರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಅಂತ ಅರ್ಥವಾಯ್ತು- ರಾಹುಲ್ ಗಾಂಧಿ

ಇದೇ ರೀತಿ ನೀವು ದಿನ ಬಳಕೆ ವಸ್ತುಗಳ ದರವನ್ನು ಏರಿಸುತ್ತಾ ಹೋದ್ರೆ ದೇಶದ ಜನ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸೋದು ಖಂಡಿತ. ಇದರ ವಿರುದ್ಧ ಕಾಂಗ್ರೆಸ್​ ಹೋರಾಟ ರೂಪಿಸಲಿದೆ ಎಂದು ಕೇಂದ್ರಕ್ಕೆ ಪ್ರಿಯಾಂಕಾ ಗಾಂಧಿ ಎಚ್ಚರಿಕೆ ನೀಡಿದ್ದಾರೆ.

Source: newsfirstlive.com Source link