ಸರ್ಕಾರ ಮನೆ ಬಾಗಿಲಿಗೆ ಸೌಲಭ್ಯ ಒದಗಿಸುವ ಸಂಕಲ್ಪ ಹೊಂದಿದೆ : ಪ್ರಭು ಚವ್ಹಾಣ್

ಕೊಪ್ಪಳ: ಸರ್ಕಾರದ ವಿವಿಧ ಯೋಜನೆಗಳು, ಸೌಲಭ್ಯಗಳು ಜನರ ಮನೆಬಾಗಿಲಿಗೆ ತಲುಪಿಸಬೇಕು ಎನ್ನುವುದು ನಮ್ಮ ಧ್ಯೇಯ ಮತ್ತು ಸಂಕಲ್ಪವಾಗಿದೆ ಎಂದು ಕರ್ನಾಟಕ ಸರ್ಕಾರದ ಪಶು ಸಂಗೋಪನೆ ಇಲಾಖೆಯ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅನುಗ್ರಹ ಕೊಡುಗೆ ಯೋಜನೆಯಡಿ ಫಲಾನುಭವಿಗಳಿಗೆ ಪರಿಹಾರ ವಿತರಣೆ ಹಾಗೂ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಕ್ಕೆ ಒಂದಾವರ್ತಿ ಪ್ರೋತ್ಸಾಹಧನದ ಚೆಕ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 70 ಸಾವಿರ ಫಲಾನುಭವಿಗಳಿಗೆ ರೂ. 39.18 ಕೋಟಿಗಳನ್ನು ಡಿ.ಬಿ.ಟಿ ಮುಖಾಂತರ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಜನರಿಗೆ ಸವಲತ್ತುಗಳನ್ನು ಒದಗಿಸಿ ಅವರ ಏಳ್ಗೆಗೆ ಸಹಕಾರ ನೀಡುತ್ತೇವೆ. ಕೊಪ್ಪಳ ಜಿಲ್ಲೆಯಲ್ಲಿ 8 ಲಕ್ಷ ಕುರಿ, ಮೇಕೆಗಳಿದ್ದು, ಶೇ. 97ರಷ್ಟು ಕುರಿ, ಮೇಕೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಅವು ಗ್ರಾಮೀಣ ಜನಜೀವನದ ಆಧಾರವಾಗಿದೆ ಎಂದರು. ಇದನ್ನೂ ಓದಿ: ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಗೋಡೆ ಮೇಲೆ ನಿರ್ಮಾಣವಾಯ್ತು ಉಗಿಬಂಡಿ

ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕುರುಬನಾಳ ಗ್ರಾಮದಲ್ಲಿ ಅವಳಿ ಮತ್ತು ತ್ರಿವಳಿ ಮರಿಗಳನ್ನು ನೀಡುವ ನಾರಿ ಸುವರ್ಣ ಕುರಿ ತಳಿಯ ಮರಿಗಳನ್ನು ಉತ್ಪಾದಿಸಿ ಗಂಡು ಮರಿಗಳನ್ನು ಸ್ಥಳೀಯ ಕುರಿಗಾರರಿಗೆ ನೀಡಿ, ಅವುಗಳನ್ನು ಕುರಿಗಳೊಂದಿಗೆ ರಾಶಿ ಮಾಡಿ, ಅದರಿಂದ ಬರುವ ಹೆಣ್ಣು ಕುರಿಗಳು ಹೆಚ್ಚು ಮರಿಗಳನ್ನು ನೀಡುವ ಕುರಿಗಾಯಿಗಳಿಗೆ ಆದಾಯ ಹೆಚ್ಚಿಸುವ ಹೊಸ ತಳಿಯ ಕುರಿಯನ್ನು ಪರಿಚಯಿಸಿದ್ದು, ಇದಕ್ಕಾಗಿ 01 ಕೋಟಿ ಬಜೆಟನ್ನು ಘೋಷಣೆ ಮಾಡಲಾಗಿದೆ ಎಂದು ಹೇಳಿದರು.

blank

ಪಶುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದೇವೆ. ಮುಂದಿನ ದಿನಗಳಲ್ಲಿಯೂ ಪ್ರಾಣಿ ರಕ್ಷಣೆಗಾಗಿ ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಮತ್ತು ಬೇಡವಾದ ಗೋವುಗಳನ್ನು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಗೋಶಾಲೆಗಳಿಗೆ ಕಳುಹಿಸಬೇಕು. ಒಂದುವೇಳೆ ಕಸಾಯಿಖಾನೆಗೆ ಕಳುಹಿಸಿದರೇ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಸರ್ಕಾರವು ವಿವಿಧ ಕ್ಷೇತ್ರಗಳ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಅದಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಹಕಾರ ಅವಶ್ಯಕವಾಗಿವೆ ಎಂದು ಹೇಳಿದರು.

Source: publictv.in Source link