ಟಾಲಿವುಡ್​​ನಲ್ಲಿ ಶ್ರೀಲೀಲಾ ಫುಲ್​​ ಮಿಂಚಿಂಗ್ -ತೆಲುಗು ಸಿನಿಮಾದಲ್ಲಿ ನಟಿಸೋಕೆ ಈ ವ್ಯಕ್ತಿಯೇ ಕಾರಣವಂತೆ

ಟಾಲಿವುಡ್​​ನಲ್ಲಿ ಶ್ರೀಲೀಲಾ ಫುಲ್​​ ಮಿಂಚಿಂಗ್ -ತೆಲುಗು ಸಿನಿಮಾದಲ್ಲಿ ನಟಿಸೋಕೆ ಈ ವ್ಯಕ್ತಿಯೇ ಕಾರಣವಂತೆ

ಶ್ರೀಲೀಲಾ ಕನ್ನಡದ ಭರವಸೆಯ ನಟಿ. ಕನ್ನಡದ ಜೊತೆ ಜೊತೆಗೆ ಪಕ್ಕದ ತೆಲುಗು ಸಿನಿಮಾ ನೆಲದಲ್ಲೂ ತನ್ನ ಬಲಗಾಲಿಟ್ಟಿದ್ದಾರೆ. ಶ್ರೀಲೀಲಾ ನಟನೆಯ ಮೊದಲ ತೆಲುಗು ಸಿನಿಮಾ ಪೆಳ್ಳಿ ಸಂದಡಿ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಅಷ್ಟಕ್ಕೂ ಟಾಲಿವುಡ್​​ ಸಿನಿ ಅಂಗಳಕ್ಕೆ ಕಿಸ್ ಕುವರಿ ಹೋಗಿದೆ ಆ ವ್ಯಕ್ತಿಗಾಗಿ ಅಂತೆ. ಕನ್ನಡದಲ್ಲಿ ಧನ್ವೀರ್ ಗೌಡ ಜೊತೆ ಬೈಟ್ ಲವ್ ಸಿನಿಮಾ ಕೂಡ ಮಾಡ್ತಿದಾರಂತೆ. ಇಂತಹ ಅಂತೆಕಂತೆಗಳಿಗೆ ಸ್ವತಃ ಶ್ರೀಲೀಲಾ ಅವರ ಬ್ಯೂಟಿಫುಲ್ ಉತ್ತರದಾರೆಯನ್ನ ನೀಡಿದ್ದಾರೆ.

ತುಂಟ ತುಟಿಗಳ ಆಟೋಗ್ರಾಫ್ ಕಿಸ್ ಚಿತ್ರದಲ್ಲಿ ಕಂಗೊಳಿಸಿ ಭರಾಟೆ ಚಿತ್ರದಲ್ಲಿ ಸುಂದರಿಯಾಗಿ ಸಂಭ್ರಮಿಸಿ ಈಗ ಧನ್ವೀರ್ ಗೌಡ ಜೊತೆ ಬೈ ಟು ಲವ್ ಅಂತಿದ್ದಾರೆ. ಪಕ್ಕದ ಟಾಲಿವುಡ್​​ನಲ್ಲಿ ಪೆಳ್ಳಿ ಸಂದಡಿ ಸಿನಿಮಾ ಮಾಡಿಯೂ ಬಂದಿದ್ದಾರೆ. ಈ ರೈಟ್ ಟೈಮ್​ನಲ್ಲೇ ಗಣಪತಿ ಹಬ್ಬ ಹತ್ತಿರ ಬರ್ತಿದಂಗೆ ಚಿತ್ರಪ್ರೇಮಿಗಳೇ ತಂಡದ ಮುಂದೆ ಶ್ರೀಲೀಲಾ ಮತ್ತು ಧನ್ವೀರ್ ಗೌಡ ಪ್ರತ್ಯಕ್ಷರಾಗಿದ್ದಾರೆ.

blank

ಬಜಾರ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟಿರೋ ಧನ್ವೀರ್ ಗೌಡ ಜೊತೆ ಶ್ರೀಲಿಲಾ ಬೈ ಟು ವಲ್ ಮೂಲಕ ಒಂದಾಗಿದ್ದಾರೆ. ಕಾಲೇಜು ಕುಮಾರ ಖ್ಯಾತಿಯ ಹರಿ ಸಂತೋಷ್ ನಿರ್ದೇಶನದಲ್ಲಿ ಬೈಟು ಲವ್ ಮೂಡಿ ಬರುತ್ತಿದೆ. ಬೈಟು ಲವ್ ಬಗ್ಗೆ ಯುವ ನಟ ಧನ್ವೀರ್ ಗೌಡ ಹೇಳೋದು ಇಂತಿದೆ.

ಇದು ಧನ್ವೀರ್ ಗೌಡರ ಮಾತಾದ್ರೆ ಇನ್ನು ಬೈಟ್ ಲವ್ ಸಿನಿಮಾ ನಟಿಮಣಿ ಶ್ರೀಲೀಲಾ ತನ್ನ ಸಿನಿಮಾದ ಬಗ್ಗೆ ಹೇಳೋದನ್ನ ಕೇಳೋದೆ ಇಂಟ್ರಸ್ಟಿಂಗ್​​. ಲವ್ಲಿ ಹುಡ್ಗಿಯಾಗಿ ಕಾಣದೆ ಮೆಚ್ಯುರಿಟಿ ಹುಡ್ಗಿಯಾಗಿ ಶ್ರೀಲೀಲಾ ಬೈಟುಲವ್​​ನಲ್ಲಿ ಕಂಗೊಳಿಸಿದ್ದಾರಂತೆ.

blank

ಇದು ಬೈಟುಲವ್ ಸಿನಿಮಾದ ಬಗ್ಗೆ ಶ್ರೀಲೀಲಾ ಹೇಳೋ ಗುಟ್ಟು.. ಇನ್ನೂ ಟಾಲಿವುಡ್ ಅವಕಾಶ ಸಿಕ್ಕ ಬಗ್ಗೆ ಎಲ್ಲಿಯೂ ಮಾತನಾಡದೆ ಇದ್ದ ಶ್ರೀಲೀಲಾ ತನ್ನ ಮೊದಲ ತೆಲುಗು ಸಿನಿಮಾ ಪೆಳ್ಳಿ ಸಂದಡಿ ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ, ತಾನ್ ಪಾತ್ರದ ಅಂದವಿರೋದು ಹೇಗೆ ಅನ್ನೋ ಗುಟ್ಟನ ಫಸ್ಟ್ ಟೈಮ್ ರಿವೀಲ್ ಮಾಡಿದ್ದಾರೆ.. ಅಷ್ಟಕ್ಕೂ ಶ್ರೀಲೀಲಾ ತೆಲುಗಿನಲ್ಲಿ ನಟಿಸೋಕ್ಕೆ ಒಪ್ಪಿಕೊಂಡಿದ್ದು ಆ ವ್ಯಕ್ತಿಗಾಗಿ..

ಟಾಲಿವುಡ್​​ ಪೆಳ್ಳಿ ಸಂದಡಿಯಲ್ಲಿ ಮಿಂಚಿರೋ ಶ್ರೀಲೀಲಾ
ಆ ವ್ಯಕ್ತಿಗಾಗಿ ತೆಲುಗು ಆಫರ್ ಅಪ್ಪಿಕೊಂಡ್ರಾ ಕಿಸ್​ ಕ್ಯೂಟಿ

ಟಾಲಿವುಡ್ ಅಂಗಳದ ಸೆಂಚುರಿ ಡೈರೆಕ್ಟರ್ ಕೆ. ರಾಘವೇಂದ್ರ ರಾವ್ ಮುಂದಾಳತ್ವದಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಪೆಳ್ಳಿ ಸಂದಡಿ’.. ಈ ಸಿನಿಮಾದಲ್ಲಿ ಶ್ರೀಲೀಲಾ ಅವಕಾಶ ಸಿಕ್ಕಿದ್ದೇ ರಾಘವೇಂದ್ರ ರಾವ್ ಅವರಿಂದ ಅಂತೆ. ಶ್ರೀದೇವಿ, ಶಿಲ್ಪಾ ಶೆಟ್ಟಿಯಂತ ದೊಡ್ಡವರನ್ನ ಲಾಂಚ್​ ಮಾಡಿದ ರಾಘವೇಂದ್ರ ರಾವ್ ಅವರು ನನ್ನನ್ನು ಲಾಂಚ್​ ಮಾಡುತ್ತಿರುವು ಖುಷಿ ತಂದಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಶ್ರೀಲೀಲಾ ತನಗೆ ಸಿಗುತ್ತಿರೋ ಸಿನಿಮಾ ಆಫರ್ಸ್​​ಗಳಿಂದ ದಿಲ್ ಖುಷ್ ಆಗಿದ್ದಾರೆ. ಪೆಳ್ಳಿ ಸಂದಡಿ ಸಿನಿಮಾ ಯಶಸ್ಸಿನ ನಿರೀಕ್ಷೆಯಲ್ಲಿಯೂ ಇದ್ದಾರೆ.. ಆಲ್ ದಿ ಬೆಸ್ಟ್ ಶ್ರೀಲೀಲಾ , ಆಲ್​ ದಿ ಬೆಸ್ಟ್ ಧನ್ವೀರ್ ಗೌಡ ಮತ್ತು ಬೈಟುಲವ್ ಫಿಲ್ಮ್ ಟೀಮ್.

blank

Source: newsfirstlive.com Source link