ಯಾರಿಗೂ ಸುಖವಲ್ಲ ತಾಲಿಬಾನ್ ಗೆಲುವು; ಭಾರತ-ಚೀನಾ-ಪಾಕ್​ ಎಲ್ಲರಿಗೂ ಇದು ಚಾಲೆಂಜ್ ಯಾಕೆ?

ಯಾರಿಗೂ ಸುಖವಲ್ಲ ತಾಲಿಬಾನ್ ಗೆಲುವು; ಭಾರತ-ಚೀನಾ-ಪಾಕ್​ ಎಲ್ಲರಿಗೂ ಇದು ಚಾಲೆಂಜ್ ಯಾಕೆ?

ಅಫ್ಘಾನಿಸ್ತಾನವನ್ನ ಗ್ರೇವ್ ಯಾರ್ಡ್ ಆಫ್ ಎಂಪರರ್ಸ್ ಅಂತ ಸುಮ್ಮನೇ ಹೇಳೋದಿಲ್ಲ.. ಅದೆಷ್ಟೋ ಜನ ಬಂದ್ರು ಅದೆಷ್ಟೋ ಜನ ಹೋದ್ರು.. ಆದರೂ.. ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನ ಗೆಲ್ಲೋಕೆ ಆಗಲಿಲ್ಲ.. ಆದ್ರೆ ಈ ಬಾರಿ ಅಫ್ಘಾನಿಸ್ತಾನದಲ್ಲಿ ಗೆದ್ದಿರೋದು ಅಂತಿಂಥವರಲ್ಲ.. ಪಕ್ಕಾ ಎಕ್ಸ್​ಟ್ರೀಮಿಸ್ಟ್​​​ ಉಗ್ರವಾದಿಗಳು.. ಅವರ ಗೆಲುವು ಭಾರತ, ಪಾಕಿಸ್ತಾನ ಅದೆಷ್ಟು ದೇಶಗಳ ಭದ್ರತೆಗೆ ಚಾಲೆಂಜ್​ ತಂದೊಡ್ಡಿದೆ ಗೊತ್ತಾ?

ಒಂದು ಬುಟ್ಟಿ ಹಣ್ಣುಗಳಲ್ಲಿ ಒಂದು ಹಣ್ಣು ಕೆಟ್ಟಿದ್ದರೂ ಸಾಕು.. ಇಡೀ ಬುಟ್ಟಿಯೇ ಕೆಟ್ಟಹಣ್ಣುಗಳಿಂದ ತುಂಬಿ ಹೋಗಲು ಹೆಚ್ಚು ಸಮಯ ಬೇಡ.. ಒಂದು ಹಂಡೆ ಹಾಲಿದ್ದರೂ ಒಂದೇ ಒಂದು ತೊಟ್ಟು ಹುಳಿ ಸಾಕು ಅದು ಕೆಟ್ಟು ಹೋಗಲು.. ಒಣಗಿದ ಬಣವೆಗೆ ಒಂದು ಕಿಡಿ ಸಾಕು.. ಅದು ಹೊತ್ತು ಉರಿಯಲು.. ಅಂಥದ್ದೊಂದು ಸನ್ನಿವೇಶ ಇಂದು ನಮ್ಮ ಪಕ್ಕದ ರಾಷ್ಟ್ರದಲ್ಲೇ ನಡೆಯಲು ಆರಂಭಿಸಿದೆ.. ನಮ್ಮ ಪಕ್ಕದ ರಾಷ್ಟ್ರ ಎಂದಾಕ್ಷಣ ಪಾಕಿಸ್ತಾನ ಅಂತಲ್ಲ.. ಪಾಕ್ ಆಕ್ರಮಿತ ಕಾಶ್ಮೀರ ನಮ್ಮದೇಶದ ಭಾಗವಾದಾಗ.. ಅದಕ್ಕೆ ಹೊಂದಿಕೊಂಡಿರುವ ಅಫ್ಘಾನಿಸ್ತಾನ ಕೂಡ ನಮ್ಮ ನೆರೆಯ ರಾಷ್ಟ್ರವೇ.. ಹೌದು.. ಅದೇ ರಾಷ್ಟ್ರದಲ್ಲಿ ನಡೆದಿರುವ ಬೆಳವಣಿಗೆಗಳು ಇಂದು ಸಾಕಷ್ಟು ರಾಷ್ಟ್ರಗಳು ತಮ್ಮ ಭದ್ರತಾ ಲೆಕ್ಕಾಚಾರ ಬದಲಿಸಲು ಕಾರಣವಾಗಿದೆ..

blank

ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬಂದಿರೋದ್ರಿಂದ ಭಾರತಕ್ಕೆ ಕೊಂಚ ಆತಂಕವಾದದ ಕಾಟ ಬರಬಹುದು.. ಅದನ್ನು ಬಿಟ್ಟು ಉಳಿದ ಯಾವ ರಾಷ್ಟ್ರಗಳಿಗೆ ಇದು ಚಾಲೆಂಜ್ ಆಗಿದೆ? ಅದ್ಹೇಗೆ ಚಾಲೆಂಜ್ ಆಗಲಿದೆ? ಇದ್ರಿಂದ ಏನು ಬದಲಾವಣೆಗಳು ಆಗಬಹುದು? ಅನ್ನೋ ಪ್ರಶ್ನೆಗಳು ಸಹಜವಾಗಿ ಇಂದು ಮೂಡುತ್ತಿವೆ..

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದಿರೋದ್ರಿಂದ ಭಾರತ ಮಾತ್ರವಲ್ಲ ಮುಖ್ಯವಾಗಿ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ, ಇರಾನ್, ತಜಕಿಸ್ತಾನ, ಉಜ್ಬೇಕಿಸ್ತಾನ್ ಮುಂತಾದ ರಾಷ್ಟ್ರಗಳಿಗೆ ದೊಡ್ಡ ತಲೆನೋವು ಸೃಷ್ಟಿಯಾಗ್ತಿರೋದು ಸುಳ್ಳಲ್ಲ.. ಇದ್ರಲ್ಲಿ ಕೆಲ ಹೆಸರುಗಳನ್ನು ಕೇಳಿದ್ರೆ ನಿಜಕ್ಕೂ ಅಚ್ಚರಿ ಅನಿಸದೇ ಇರದು.. ಅದ್ಹೇಗೆ ಪಾಕಿಸ್ತಾನಕ್ಕೆ ಇದ್ರಿಂದ ತೊಂದರೆಯಾಗಬಹುದು? ಚೀನಾಕ್ಕೆ ಏನು ತೊಂದರೆ..ಚಾನ್ಸೇ ಇಲ್ಲ ಅನ್ನೋ ಉದ್ಘಾರ ಬರಬಹುದು.. ಆದ್ರೆ ವಾಸ್ತವ ಅನ್ನೋದು ಸೂರ್ಯನ ಬೆಳಕಿನಂತೆ.. ಮುಷ್ಠಿಯಲ್ಲಿ ಹಿಡಿದಿಡೋದು ಅಸಾಧ್ಯ.. ಹೌದು ಭಾರತಕ್ಕೆ ತಾಲಿಬಾನ್​​ ಆಡಳಿತದಿಂದ ಏನೆಲ್ಲ ಸಮಸ್ಯೆ ಸೃಷ್ಟಿಯಾಗಬಹುದು? ಅಂತಾ ನೋಡೋದಕ್ಕಿಂತ ಮುಂಚೆ ಪಾಕಿಸ್ತಾನ, ಚೀನಾ ಮುಂತಾದ ರಾಷ್ಟ್ರಗಳಿಗೆ ಇರೋ ಸವಾಲುಗಳೇನು ಅನ್ನೋದನ್ನ ವಿಸ್ತೃತವಾಗಿ ನೋಡೋಣ..

ಮದ್ದಾನೆ ಜೊತೆ ಸರಸಕ್ಕೆ ಮುಂದಾಗಿರೋ ಪಾಕಿಸ್ತಾನ
ರಕ್ತ ಪಿಶಾಚಿಗಳಿಗೆ ರಕ್ತ ಉಣಿಸಿ ಬಲಗೊಳಿಸಿರೋ ನೆರೆ ರಾಷ್ಟ್ರ
ಅವರು ಸಾಕಿದ ಹೆಬ್ಬಾವು ಎಂಥದ್ದಕ್ಕೆಲ್ಲ ಮರಿ ಹಾಕಬಹುದು ಗೊತ್ತಾ?

ಧರ್ಮದ ಅಫೀಮನ್ನು ತಲೆಗೆ ಏರಿಸಿಕೊಂಡಿರೋ ಒಂದು ರಾಷ್ಟ್ರ ಅದ್ಯಾವ ಮಟ್ಟಿಗೆ ರಕ್ತಬೀಜಾಸುರರನ್ನು ಹುಟ್ಟುಹಾಕಬಹುದು.. ಅನ್ನೋದಕ್ಕೆ ಪಾಕಿಸ್ತಾನಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದಿಲ್ಲ. ಅಲ್ಖೈದಾ ಉಗ್ರನಿಗೇ ಅತ್ಯಂತ ಸೆಕ್ಯುರಿಟಿ ಇರೋ ಪ್ರದೇಶದಲ್ಲಿ ಇರಲು ಅವಕಾಶ ಕಲ್ಪಿಸಿದ್ದ ಪಾಕಿಸ್ತಾನದಲ್ಲಿ ಜೈಶ್ ಏ ಮೊಹಮ್ಮದ್, ಇಂಡಿಯನ್ ಮುಜಾಹಿದೀನ್, ಅಲ್​ಖೈದಾ, ತಾಲಿಬಾನ್​​ ಮುಂತಾದ ಅಸಂಖ್ಯೆ ಉಗ್ರ ಸಂಘಟನೆಗಳು ಆಶ್ರಯ ಪಡೆದಿರೋದು.. ಅಂಗೈ ಹುಣ್ಣಿನಂತೆಯೇ ಸತ್ಯ.. Bleed India with a Thousand Cuts ಅನ್ನೋ ಮಿಲಿಟರಲಿ ಸ್ಟ್ರಾಟರ್ಜಿ ಫಾಲೋ ಮಾಡೋ ಪಾಕಿಸ್ತಾನ ಇದೊಂದೇ ಕಾರಣದಿಂದ ಅಸಂಖ್ಯೆ ಉಗ್ರ ಸಂಘಟನೆಗಳಿಗೆ ನೆಲೆಯೂರು ಆಯ್ತು.. ಆದ್ರೆ ಅದರ ಮೂಗಿನ ಕೆಳಗೇ ಹಲವು ಉಗ್ರ ಸಂಘಟನೆಗಳು ಪಾಕಿಸ್ತಾನದ ವಿರುದ್ಧವೇ ಹುಟ್ಟುಕೊಂಡಿದ್ದು, ಅದ್ರಲ್ಲಿ ಒಂದು ಅಂದ್ರೆ ಅದು ತೆಹ್ರಿಕ್ ಏ ತಾಲಿಬಾನ್ ಅಲಿಯಾಸ್ ಟಿಟಿಪಿ ಅನ್ನೋದು..

blank
ಅದು ತೆಹ್ರಿಕ್ ಏ ತಾಲಿಬಾನ್ ಅಂದ್ರೆ ಸಡನ್ ಆಗಿ ಬಹುತೇಕ ಜನರಿಗೆ ನೆನಪಾಗೋದಿಲ್ಲ.. ಆದ್ರೆ, 2014ರಲ್ಲಿ ಪಾಕಿಸ್ತಾನದ ಪೇಶಾವರ ನಗರದ ಬಳಿಯ ಶಾಲೆಯೊಂದರ ಮೇಲೆ ದಾಳಿ ಮಾಡಿದ್ದ ಉಗ್ರರು ಬರೋಬ್ಬರಿ 150ಕ್ಕೂ ಹೆಚ್ಚು ಮಕ್ಕಳ ಹತ್ಯೆ ಮಾಡಿದ್ದರು.. ಹಾಗೆ ದಾಳಿ ಮಾಡಿದ್ದ ಸಂಘಟನೆಯೇ ತೆಹ್ರಿಕ್ ಇ ತಾಲಿಬಾನ್.. ಈ ಸಂಘಟನೆ ಪಾಕಿಸ್ತಾನದಲ್ಲೂ ತಾಲಿಬಾನ್ ರೀತಿ ಶರಿಯಾ ಕಾನೂನು ತರಬೇಕು ಅನ್ನೋ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ.. ಯೆಸ್ ಆ ಸಂಘಟನೆ ಮತ್ತಷ್ಟು ಬಲಗೊಳ್ಳುತ್ತಿದ್ದೆ.. ಈಗಾಗಲೇ ಪಾಕಿಸ್ತಾನದ ಹಲವಾರು ಸೈನಿಕರನ್ನ ಹತ್ಯೆ ಮಾಡಿದೆ.. ಅದು ಹೇಗೆ ಅಂದಿರಾ?

blank

ಪಾಕಿಸ್ತಾನದಲ್ಲಿ ಪೇಶಾವರ ಶಾಲೆ ಮೇಲೆ ದಾಳಿ ನಡೆದ ಬಳಿಕ ಬಹುತೇಕವಾಗಿ ಈ ಸಂಘಟನೆಯನ್ನ ಪಾಕಿಸ್ತಾನ ನಿಯಂತ್ರಣಕ್ಕೆ ತಂದಿತ್ತು.. ಆದ್ರೆ, ಈಗ ತಾಲಿಬಾನ್ ಅಧಿಕಾರಕ್ಕೆ ಬರುತ್ತಲೇ ಪಾಕಿಸ್ತಾನದ ಈ ತಾಲಿಬಾನ್ ಕೂಡ ಸ್ಟ್ರಾಂಗ್ ಆಗಲು ಆರಂಭಿಸಿದೆ.. ಹಲವು ಮೂಲಗಳ ಮಾಹಿತಿ ಪ್ರಕಾರ, ಅಫ್ಘಾನ್ ತಾಲೀಬಾನ್​​ಗೂ ಪಾಕಿಸ್ತಾನದ ತಾಲಿಬಾನ್​ಗೂ ನೇರ ಸಂಭಂಧವಿದೆ ಎನ್ನಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ, ಆಗಸ್ಟ್ 15ಕ್ಕೆ ಕಾಬುಲ್​ ವಶಪಡಿಸಿಕೊಳ್ಳುವ ಮುನ್ನ ತಾಲಿಬಾನ್​, ಅಫ್ಘಾನ್​ ಜೈಲಿನಲ್ಲಿರೋ ಸುಮಾರು 5000 ಉಗ್ರರನ್ನು ಬಿಡುಗಡೆ ಮಾಡಿತ್ತು.. ಇದ್ರಲ್ಲಿ ಐಎಸಿಸ್​​-ಕೆ ಮಾತ್ರವಲ್ಲ, ತಹ್ರಿಕ್ ಏ ತಾಲಿಬಾನ್​​​ಗೆ ಸೇರಿದ ಉಗ್ರರೂ ಸೇರಿದ್ದರು. ಅದ್ರಲ್ಲೂ, ಟಿಟಿಪಿ ಉಪಾಧ್ಯಕ್ಷನಾಗಿದ್ದ Maulvi Fakir Mohammad ಕೂಡ ಸೇರಿದ್ದ ಅನ್ನೋದು ಗಮನಾರ್ಹ..
ಅಷ್ಟೇ ಅಲ್ಲ ತಾಲಿಬಾನ್​​ನಿಂದ ಬಿಡುಗಡೆಯಾಗಿ ಹೊರ ಬರ್ತಿದ್ದಂತೆಯೇ ಮೊದಲು ಅವರಿಗೆ ಅಭಿನಂದನೆ ಸಲ್ಲಿಸಿದ Maulvi Fakir Mohammad, ನಾವು ಪಾಕಿಸ್ತಾನದಲ್ಲೂ ಖುಲಾಫತ್ ವ್ಯವಸ್ಥೆ ಜಾರಿಗೆ ತರ್ತೀವಿ ಅಂತಾ ಘೋಷಿಸಿಬಿಟ್ಟ..

ಇದಿಷ್ಟೇ ಅಲ್ಲ.. ಪಾಕಿಸ್ತಾನದ ಬೆಂಬಲದಿಂದಲೇ ಅಧಿಕಾರಕ್ಕೆ ಬಂದಿರೋ ತಾಲಿಬಾನ್ ಸಹ, ಟಿಟಿಪಿ ನಮ್ಮ ಸಮಸ್ಯೆಯಲ್ಲ ಅದು ಪಾಕಿಸ್ತಾನದ ಸಮಸ್ಯೆ.. ಅವರೇ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲಿ ಅಂತಾ ಹೇಳಿದೆ.. ಜೊತೆಗೆ, ಅಫ್ಘಾನ್-ಪಾಕ್​ ಗಡಿಯ ಡುರಾಂಟ್​​ ಲೈನ್​ ಅನ್ನ ಕೂಡ ನಾವು ಒಪ್ಪಲ್ಲ..ಅಲ್ಲಿ ಪಾಕಿಸ್ತಾನ ಬೇಲಿ ಹಾಕುವುದಕ್ಕೆ ನಾವು ಸಮ್ಮತಿಸಲ್ಲ ಎಂದೂ ತಾಲಿಬಾನ್ ಹೇಳಿದೆ.. ಈ ಮೂಲಕ ಹೊಸ ಸಂಘರ್ಷದ ಚಿನ್ಹೆಗಳು ಈಗಾಗಲೇ ಬರಲು ಆರಂಭಿಸಿವೆ.. ಜೊತೆಗೆ ಪಾಕಿಸ್ತಾನದ ಆಂತರಿಕ ಭದ್ರತೆ ಕೂಡ ದೊಡ್ಡ ಮಟ್ಟದಲ್ಲಿ ಪರೀಕ್ಷೆಗೆ ಒಳಪಡುವುದರಬಗ್ಗೆ ಸೂಚನೆ ಸಿಕ್ಕಿದೆ..

ನಸುಗುನ್ನಿ ಆಟವಾಡೋ ಚೀನಾಕ್ಯೆಕೆ ಢವ ಢವ?
ಸಾಲದ ಕೂಪದಲ್ಲಿ ಸಿಲುಕಿಸೋ ಡ್ರಾಗನ್​​​ಗೇಕೆ ಭಯ?
ಅಫ್ಘಾನ್ ನೆಲದಲ್ಲಿದೆ ಚೀನಾ ತುಂಡು ತುಂಡು ಮಾಡೋ ಶಕ್ತಿ..!

ಇವತ್ತು ಹಣವನ್ನೇ ಅಸ್ತ್ರವನ್ನಾಗಿ ಹೊಸ ವಸಾಹತುಶಾಹಿಯಾಗಿ ಬದಲಾಗಿರೋ ಚೀನಾದ ಕಣ್ಣು ಅಫ್ಘಾನಿಸ್ತಾನದ ಮೇಲೆ ಬಿದ್ದಿರೋದು ಹೊಸದೇನು ಅಲ್ಲ.. ಬರೋಬ್ಬರಿ 70 ಲಕ್ಷ ಕೋಟಿ ರೂಪಾಯಿಗೂ ಅಧಿಕ ಖನಿಜ ಸಂಪತ್ತನ್ನು ಹೊಂದಿರೋ ಅಫ್ಘಾನಿಸ್ತಾನ, ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್ ಕನಸಲ್ಲಿ, ವಜ್ರದ ಮೊಟ್ಟೆ ಇಡೋ ರತ್ನಖಚಿತ ಕೋಳಿಯಾಗಿ ಕಾಣಿಸ್ತಿರೋದು ಸುಳ್ಳಲ್ಲ.. ಆದ್ರೆ ಆ ರತ್ನಖಚಿತ ಕೋಳಿಯ ಹೊಟ್ಟೆಯಲ್ಲಿ ಚೀನಾವನ್ನೇ ಛಿದ್ರ ಮಾಡಬಲ್ಲ ಟೈಂ ಬಾಂಬ್​ ಒಂದು ನಿಧಾನವಾಗಿ ಕಾವು ಪಡೆದುಕೊಳ್ಳುತ್ತಿರೋದು ಚೀನಾದ ಬುದ್ಧಿ ಇರೋ ಜಾಗಕ್ಕೆ ಸುತ್ತಿಗೆಯಲ್ಲಿ ಹೊಡೆದ ಹಾಗೆ ಆಗಿದೆ..

blank ಅಲ್ಲಾರೀ.. ಇಡೀ ವಿಶ್ವವನ್ನೇ ಸಾಲದ ಕೂಪದಲ್ಲಿ ಸಿಲುಕಿಸಿ ವಿಲ ವಿಲ ಅನ್ನಿಸಲು ಪ್ರಾರಂಭಿಸಿರುವ ಡ್ರಾಗನ್​​ಗೆ ಏಕೆ ಭಯ? ಅಫ್ಘಾನಿಸ್ತಾನದಲ್ಲಿ ತಾಲಿಬಾನ್​​ ಬಂದಿರೋದಕ್ಕೂ, ಚೀನಾಕ್ಕೂ ಏನು ಸಂಬಂಧ? ಇದ್ರಿಂದ ಚೀನಾ ಹೇಗೆ ಛಿದ್ರ ಛಿದ್ರವಾದೀತು? ಅನ್ನೋ ಪ್ರಶ್ನೆಗಳು ಸಹಜವಾಗಿ ಮೂಡುತ್ತೆ.. ಆದ್ರೆ ಒಂದು ವಿಷಯ ನೆನಪಿರಲಿ.. ಆನೆಗೂ ಅಂಕುಶ ಮದ್ದು.. ಹೌದು.. ಮದ್ದಾನಂತೆಯಾಗಿರೋ ಚೀನಾದ ಅಂಕುಶವೊಂದು ತಾಲಿಬಾನ್ ಆಳ್ವಿಕೆ ಇರೋ ಅಫ್ಘಾನಿಸ್ತಾನದಲ್ಲಿ ಮತ್ತಷ್ಟು ಸಾಮರ್ಥ್ಯ ಪಡೆದುಕೊಳ್ಳುವ ಸಾಧ್ಯತೆ ತೆರೆದುಕೊಂಡಿದೆ..

ತನ್ನದೇ ಜನರನ್ನ ಪ್ರಾಣಿಗಿಂತ ಕೀಳಾಗಿ ಕಾಣುವ ಚೀನಾ
ಉಯಿಖರ್​​ ಮುಸ್ಲಿಮರ ಮೇಲಿನ ದಬ್ಬಾಳಿಕೆ ತಿರುಗುಬಾಣ
ಏನದು ಈಸ್ಟ್ ಟರ್ಕಿಸ್ತಾನ್ ಇಸ್ಲಾಮಿಕ್ ಮೂವ್​ಮೆಂಟ್?

East Turkestan Islamic Movement ಅನ್ನೋ ಹೆಸರು ಕೇಳಿದ್ರೆ ಸಾಕು ಚೀನಾ ಬೆಚ್ಚಿ ಬೀಳುತ್ತೆ. ಕರಗುವಷ್ಟು ಕಾದಿರುವ ಕಬ್ಬಿಣವನ್ನ ಹಿಡಿದಂತೆ ಹೌಹಾರುತ್ತೆ.. ಹೌದು.. ಚೀನಾದಲ್ಲೂ East Turkestan Islamic Movement ಅನ್ನೋ ಹೆಸರಿನ ಸೆಪರೆಟಿಸ್ಟ್ ಮೂಮೆಂಟ್ ಇದೆ.. ಚೀನಾದ ಶಿಂಜಿಯಾಂಗ್ ಪ್ರಾಂತ್ಯದಲ್ಲಿರೋ ಉಯಿಘರ್ ಮುಸ್ಲಿಂರ ಕಟ್ಟರ್​ಪಂಥಿ ಸಂಘಟನೆ ಇದಾಗಿದೆ. ಇದರ ಉದ್ದೇಶ ಅಂದ್ರೆ ತಮ್ಮ ಪ್ರದೇಶವನ್ನ ಚೀನಾದಿಂದ ಬೇರ್ಪಡಿಸಿ ಪ್ರತ್ಯೇಕ ದೇಶ ಸ್ಥಾಪನೆ ಮಾಡಬೇಕು ಅನ್ನೋದು.. ಈಗಾಗಲೇ ಚೀನಾದಲ್ಲಿ ಹಲವಾರು ಬಾರಿ ಈ ಸಂಘಟನೆಯ ಉಗ್ರರು, ಭಯೋತ್ಪಾದಕ ದಾಳಿ ಕೂಡ ನಡೆಸಿದ್ದಾರೆ. ಚೀನಾದಲ್ಲಿ ಇವರ ಮೇಲೆ ಕ್ರಮ ಬಿಗಿಯಾಗುತ್ತಿದ್ದಂತೆಯೇ ಅಲ್ಲಿಂದ ಎಸ್ಕೇಪ್ ಆಗಿ ಅಫ್ಘಾನಿಸ್ತಾನಕ್ಕೆ ತೆರಳಿದ್ರು.. ಸದ್ಯ ಅಫ್ಘಾನಿಸ್ತಾನದಲ್ಲಿ ಲಕ್ಷಾಂತರ ಉಯಿಘರ್​ಮುಸ್ಲಿಮರು ಆಶ್ರಯ ಪಡೆದಿದ್ದು, ಇವರಲ್ಲಿ ಸಾವಿರಾರು ಸಂಖ್ಯೆಯಲ್ಲಿ East Turkestan Islamic Movement ಸಂಘಟನೆ ಸದಸ್ಯರೂ ಇದ್ದಾರೆ ಎನ್ನಲಾಗಿದೆ.. ತಾಲಿಬಾನ್​ ಬೆನ್ನಲ್ಲೇ ಈ ಸಂಘಟನೆ ಕೂಡ ಬಲಯುತವಾದರೆ, ತನ್ನ ದೇಶದಲ್ಲಿ ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಕಾರಣವಾಗಬಲ್ಲದು.. ಪ್ರತ್ಯೇಕ ದೇಶ ಸ್ಥಾಪಿಸಬೇಕಾದ ಸಂದರ್ಭವೂ ಬರಬಹುದು ಅನ್ನೋದೇ ಚೀನಾದ ಭಯಕ್ಕೆ ಕಾರಣವಾಗಿದೆ.

blank

ಕಳ್ಳನ ಮಸ್ಸು ಹುಳ್ಳಳ್ಳಗೆ ಅನ್ನೋಹಾಗೆ, ಚೀನಾ ಮಾನವತೆಯ ಎಲ್ಲೆ ಮೀರಿ ಉಯಿಘರ್ ಮುಸ್ಲಿಮರ ಮೇಲೆ ದಬ್ಬಾಳಿಕೆ ಮೆರೆದಿದೆ. 10 ಲಕ್ಷಕ್ಕೂ ಅಧಿಕ ಜನರನ್ನು ಹಿಟ್ಲರ್ ರೀತಿಯ ಕಾನ್ಸಂಟ್ರೇಷನ್​ ಕ್ಯಾಂಪ್​ಗೆ ಸೇರಿಸಿದೆ. ಉಯಿಘರ್​​ ಮಹಿಳೆಯರ ಮೇಲೆ ಅತ್ಯಾಚಾರ, ಅನಾಚಾರಗಳಿಗಂತೂ ಕೊನೆಯೇ ಇಲ್ಲದಂತಾಗಿದೆ. ಅಷ್ಟೇ ಅಲ್ಲ ಅವರನ್ನ ಲೈವ ಆರ್ಗನ್ ಡೊನೇಷನ್ ಮಷೀನ್​ಗಳಂತೆ ಚೀನಾ ಬಳಸುತ್ತೆ ಅನ್ನೋ ಆರೋಪ ಕೂಡ ಇದೆ.. ಹೀಗಾಗಿ, ಸಹಜವಾಗಿ ಉಯಿಘರ್​ ಮುಸ್ಲಿಂರಲ್ಲಿ ಆಕ್ರೋಶ ಮಡುಗಟ್ಟಿದೆ. ಅಫ್ಘಾನಿಸ್ತಾನದಲ್ಲಿ East Turkestan Islamic Movement ಬಲಯುತಗೊಂಡರೆ, ಚೀನಾದಲ್ಲಿರೋ ಉಯಿಘರ್​ ಮುಸ್ಲಿಮರೂ ಸಿಡಿದೇಳಬಹುದು.. ಇನ್ನೊಂದೆಡೆ ನೂರಾರು ಬಿಲಿಯನ್​ ಡಾಲರ್​ ಹೂಡಿಕೆ ಮಾಡಿರು ಚೀನಾದ ಬೆಲ್ಟ್​ ಅಂಡ್ ರೋಡ್ ಇನಿಷಿಯೇಟಿವ್, ಪಾಕಿಸ್ತಾನದ ಮೂಲಕ ಹಾದು ಹೋಗುವ ಚೀನಾ-ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್​​ಗೂ ದೊಡ್ಡ ಮಟ್ಟದ ಹಾನಿಯಾಗಬಹುದು ಅನ್ನೋದು ಚೀನಾದ ಭಯಕ್ಕೆ ಮತ್ತೊಂದು ಕಾರಣ.

blank

ಹೀಗಾಗಿಯೇ ಅಫ್ಘಾನಿಸ್ತಾನದ ಮರು ನಿರ್ಮಾಣಕ್ಕೆ ನಾವು ಬೆಂಬಲ ಕೊಡ್ತೇವೆ.. ನೂರಾರು ಬಿಲಿಯನ್​ ಡಾಲರ್ ಹೂಡಿಕೆ ಮಾಡ್ತೀವಿ.. ಅಂತಾ ಹೇಳಿರೋ ಚೀನಾ, ತಾಲಿಬಾನ್​ಗೆ ಒಂದು ಕಂಡೀಷನ್ ಕೂಡ ಹಾಕಿದೆ. ಅದೆಂದರೆ ತನ್ನ ನೆಲದಲ್ಲಿರೋ ಎಲ್ಲ ಉಯಿಘರ್​ ಮುಸ್ಲಿಮರನ್ನ ಚೀನಾಕ್ಕೆ ರವಾನೆ ಮಾಡಬೇಕು ಮತ್ತು East Turkestan Islamic Movement ಅನ್ನ ಸಂಪೂರ್ಣ ನಿರ್ನಾಮ ಮಾಡಬೇಕು ಅಂತಾ.. ಈ ವಿಷಯ ತಿಳಿಯುತ್ತಲೇ East Turkestan Islamic Movement ಕೂಡ ಐಸಿಸ್​-ಕೆ ಉಗ್ರರೊಂದಿಗೆ ಸಂಪರ್ಕ ಸಾಧಿಸಿದ್ದು, ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು ಎನ್ನಲಾಗ್ತಿದೆ..

ಭಾರತಕ್ಕೂ ಇದೆ ಹಲವು ಸವಾಲುಗಳು
ಒಂದಾಗ್ತಾವಾ ಉಗ್ರ ಸಂಘಟನೆಗಳು?

blank

ಚೀನಾ, ಪಾಕಿಸ್ತಾನಕ್ಕೆ ತಾಲಿಬಾನಿಗಳಿಂದ ನೇರ ತೊಂದರೆ ಇಲ್ಲವಾದರೂ ಭಾರತಕ್ಕೆ ಹಾಗೆ ಹೇಳೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಅಫ್ಘಾನಿಸ್ತಾನದಲ್ಲಿ ಸುಮಾರು 24 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿ ಶಾಲೆ, ಆಸ್ಪತ್ರೆ, ಡ್ಯಾಂಗಳು, ರಸ್ತೆ, ಯೂನಿವರ್ಸಿಟಿ, ಲೈಬ್ರರಿ ಮುಂತಾದ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿತ್ತು ಭಾರತ. ಆದ್ರೆ ಭಾರತ ಎಂದಿಗೂ ಕಾನೂನು ಬದ್ಧವಾದ ಮತ್ತು ಜನರಿಂದ ಆರಿಸಿ ಬಂದಿದ್ದ ಅಫ್ಘಾನಿಸ್ತಾನದ ಸರ್ಕಾರದ ಪರವಾಗಿತ್ತು. ಆದ್ರೆ, ತಾಲಿಬಾನ್​ ಈಗ ಅಲ್ಲಿ ಬಲವಂತವಾಗಿ ಅಧಿಕಾರ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಪಾಕಿಸ್ತಾನದ ಸೆರಗಲ್ಲಿ ಬೆಳೆದಿರೋ ಲಷ್ಕರ್ ಏ ತೋಯ್ಬಾ, ಅಲ್​ಖೈದಾ, ಇಂಡಿಯನ್​ ಮುಜಾಹಿದ್​ ಮುಂತಾದ ಸಂಘಟನೆಗಳು ತಾಲಿಬಾನ್​ ಬೆಂಬಲದೊಂದಿಗೆ ಕಾಶ್ಮೀರಕ್ಕೆ ನುಸುಳೋ ಪ್ಲಾನ್​ ರೂಪಿಸಿಕೊಂಡಿವೆ. ಈ ಸಂಘಟನೆಗಳಿಗೆ ನೇರವಾಗಿ ಪಾಕಿಸ್ತಾನದ ಸರ್ಕಾರ, ಪಾಕಿಸ್ತಾನದ ಬೆಂಬಲ ಕೂಡ ಇರೋದು ಸುಳ್ಳಲ್ಲ.. ಇತ್ತೀಚೆಗಷ್ಟೇ ಇಮ್ರಾನ್​ ಖಾನ್​​​ ಸಂಪುಟದ ಸಚಿವೆಯೊಬ್ಬರು ಲೈವ್ ಟಿವಿಯಲ್ಲೇ ಈ ಬಗ್ಗೆ ಘೋಷಣೆ ಮಾಡಿದ್ರು.. ಅಷ್ಟೇ ಅಲ್ಲ ಈಗಾಗಲೇ ಜೈಶ್ ಏ ಮೊಹಮ್ಮದ್ ಸಂಘಟನೆ ಕಾರ್ಯಕರ್ತರು ತಾಲಿಬಾನ್​ ನಾಯಕರನ್ನ ಭೇಟಿ ಮಾಡಿ ಭಾರತದಲ್ಲಿ ದಾಳಿ ಮಾಡಲು ಸಹಾಯವನ್ನ ಕೂಡ ಕೋರಿದ್ದಾರೆ. ಈ ಸಂಘಟನೆಗಳಿಗೆ ನಿಸ್ಸಂಶಯವಾಗಿ ಪಾಕಿಸ್ತಾನದೊಂದಿಗೆ ಚೀನಾ ಕೂಡ ಬೆಂಬಲ ಸೂಚಿಸೋದರಲ್ಲಿ ಸಂಶಯವೇ ಇಲ್ಲ..

ಇರಾನ್, ಉಜ್ಬೇಕಿಸ್ತಾನ್​​​​ಗಳಿಗೂ ಚಾಲೆಂಜ್​
ರಷ್ಯಾಕ್ಕೂ ತಪ್ಪಿಲ್ಲ ತಾಲಿಬಾನಿಗಳಿಂದ ಹೆಡ್ಯಾಕ್

ಇದಿಷ್ಟೇ ದೇಶಗಳಲ್ಲ ತಲೆನೋವಿನ ಮಾತ್ರೆಗೂ ತಲೆನೋವು ಕೊಡಬಲ್ಲ ರಷ್ಯಾಕ್ಕೆ ಸದ್ಯಾ ತಾಲಿಬಾನಿಗಳು ತಲೆನೋವು ತಂದಿಟ್ಟಿದ್ದಾರೆ. ಯಾಕಂದ್ರೆ ತಾಲಿಬಾನ್​ ಮಾತೃ ಸಂಸ್ಥೆಯಾಗಿದ್ದ ಮುಜಾಹಿದ್​​ಗಳು ಹುಟ್ಟಿಕೊಂಡಿದ್ದೇ ರಷ್ಯಾ ವಿರುದ್ಧ ಹೋರಾಟ ಮಾಡಲು.. ಅದು 80ರ ದಶಕದ ಅಂತ್ಯದಲ್ಲಿ ಅಂದಿನ ಸೂಪರ್ ಪವರ್ ಯುನೈಡೆಟ್​ ರಷ್ಯಾವನ್ನೇ ಅಮೆರಿಕಾ ಮತ್ತು ಪಾಕಿಸ್ತಾನ ಬೆಂಬಲಿತ ಮುಜಾಹೀದ್​ಗಳು ಸೋಲುಣಿಸಿದ್ದರು.. ಈಗಲೂ ರಷ್ಯಾಕ್ಕೆ ಆ ಕರಾಳ ನೆನಪು ಕಾಡುತ್ತಿದೆ.. ಹೀಗಾಗಿಯೇ ನಮ್ಮ ದೇಶಕ್ಕೆ ಅಫ್ಘಾನಿಸ್ತಾನದ ಯಾವೊಬ್ಬ ನಿರಾಶ್ರಿತರನ್ನೂ ನಾವು ತೆಗೆದುಕೊಳ್ಳಲ್ಲ.. ನಿರಾಶ್ರಿತರ ರೂಪದಲ್ಲಿ ಬರೋ ಉಗ್ರರಿಗೆ ನಮ್ಮಲ್ಲಿ ಪ್ರವೇಶ ಇಲ್ಲ ಅಂತಾ ರಷ್ಯಾ ಘೋಷಿಸಿತ್ತು.. ಅಷ್ಟೇ ಅಲ್ಲ ತಾಲಿಬಾನ್​​ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಇತರೇ ಉಗ್ರ ಸಂಘಟನೆಗಳು, ರಷ್ಯಾದಲ್ಲಿರೋ ಪ್ರತ್ಯೇಕತಾವಾದಿಗಳು ಮತ್ತೆ ರೆಕ್ಕೆ ಪುಕ್ಕ ಪಡೆದುಕೊಂಡಾರು ಅನ್ನೋ ಭಯವೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ರನ್ನ ಕಾಡಲು ಆರಂಭಿಸಿದೆ.

blank

ಇನ್ನೊಂದೆಡೆ ಶಿಯಾ ಬಾಹುಳ್ಯದ ಇರಾನ್​​​​ಗೆ ಸುನ್ನಿ ಸಂಘಟನೆ ತಾಲಿಬಾನ್​ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬರೋದು ಇಷ್ಟವೇ ಇರಲಿಲ್ಲ.. ಯಾಕಂದ್ರೆ ತಾಲಿಬಾನ್​​ ಅಧಿಕಾರಕ್ಕೆ ಬಂದಾಗಲೆಲ್ಲ ಇರಾನ್​​ನಲ್ಲಿ ಸಾಕಷ್ಟು ಹಿಂಸಾಚಾರ ನಡೆದು ಉದಾಹರಣೆಗಳು ಇವೆ. ಜೊತೆಗೆ, ಅಫ್ಘಾನಿಸ್ತಾನದಲ್ಲಿರೋ ಶಿಯಾಗಳೂ ಪ್ರಾಣ ಭಯದಲ್ಲಿ ಬದುಕಬೇಕಾಗುತ್ತೆ.. ಇನ್ನೊಂದೆಡೆ ಅಪಾರ ಪ್ರಮಾಣದ ನಿರಾಶ್ರಿತರು ಈಗಾಗಲೇ ಇರಾನ್​ ಪ್ರವೇಶ ಮಾಡುತ್ತಿದ್ದಾರೆ.. ಇವರ ಫಿಲ್ಟರೇಷನ್ ಮಾಡೋದೇ ಇರಾನ್​ಗೆ ದೊಡ್ಡ ಸವಾಲು..

ಅಫ್ಘಾನಿಸ್ತಾನದಲ್ಲಿ ಉಜ್ಬೇಕ್​ಗಳು ತಕ್ಕ ಮಟ್ಟಿಗೆ ಜನಸಂಖ್ಯೆ ಹೊಂದಿದ್ದಾರೆ. ಆದ್ರೆ ಪಶ್ತೂನಿಗಳಾಗಿರೋ ತಾಲಿಬಾನಿಗಳು ಅಧಿಕಾರ ಹಿಡಿಯುತ್ತಲೇ ಅಫ್ಘಾನಿಸ್ತಾನದಲ್ಲಿರೋ ಉಜ್ಬೇಕಿಗಳಿಗೆ ಪ್ರಾಣ ಭಯ ಕಾಡಲು ಆರಂಭಿಸಿದೆ.. ಇನ್ನೊಂದೆಡೆ ಉಜ್ಬೇಕಿಸ್ತಾನ ಕೂಡ ಮುಂದಿನ ಸವಾಲು ಎದುರಿಸೋದು ಹೇಗೆ ಅನ್ನೋ ಟೆನ್ಶನ್​ಗೆ ಒಳಗಾಗಿದೆ.. ಒಟ್ಟಿನಲ್ಲಿ ತಾಲಿಬಾನ್​ ಅಧಿಕಾರಕ್ಕೇರಿದಾಗಿನಿಂದ ಎಲ್ಲ ಅಯೋಮಯ ಅನ್ನೊವಂಥ ಘಟನೆಗಳು ನಡೆಯಲಂತೂ ಆರಂಬವಾಗಿವೆ. ಈ ತಮಾಷಾ ನೋಡಿ ಅಮೆರಿಕಾ ಏನಾದ್ರೂ ನಗುವಂಥ ತಪ್ಪನ್ನ ಮಾಡಿದ್ರೆ.. ಆ ದೇಶವೂ ದೊಡ್ಡ ಬೆಲೆ ತೆರಬೇಕಾಗಿದ್ದರಲ್ಲಿ ಯಾವುದೇ ಸಂಶಯ ಬೇಡ.. ಯಾಕಂದ್ರೆ ಇಂದಿಗೂ ಎಲ್ಲರಿಗೂ ಸೆಪ್ಟಂಬರ್​ 26, 2001ರಲ್ಲಿ ಅಮೆರಿಕಾದ ಟ್ವಿನ್​ ಟವರ್ ಮೇಲೆ ನಡೆದ ದಾಳಿ ನೆನಪಿದೆ.. ಈ ಬಗ್ಗೆ ಈಗಾಗಲೇ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್​ ಅಮೆರಿಕಾಕ್ಕೆ ವಾರ್ನಿಂಗ್ ನೀಡಿದ್ದಾರೆ.

blank

ನೋಡಿದ್ರಲ್ಲ ಹೇಗೆ ಒಂದು ದೇಶದಲ್ಲಿ ಉಗ್ರಸಂಘಟನೆ ಅಧಿಕಾರ ಹಿಡಿಯುತ್ತಲೇ ಅದೆಷ್ಟು ಶಾಂತಿ ಭಂಗ ಮಾಡಬಹುದು ಅಂತಾ.. ಅದೆಷ್ಟು ದೇಶಗಳ ಭದ್ರತೆಗೆ ಧಕ್ಕೆ ತರಬಹುದಂಥ.. ಇಂಥ ಒಂದು ದೇಶ ಈಗ ಭಾರತದ ನೆರೆಯಲ್ಲೇ ಇರೋದು ಹೊಸ ಹೊಸ ಚಾಲೆಂಜ್ ಹೊತ್ತು ತರೋದ್ರಲ್ಲಿ ಸಂಶಯವೇ ಇಲ್ಲ..

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಮೀಡಿಯಾ

Source: newsfirstlive.com Source link