ಸೇನೆಯಿಂದ ನಿವೃತ್ತಿಯಾದ ಯೋಧರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಸೇನೆಯಿಂದ ನಿವೃತ್ತಿಯಾದ ಯೋಧರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಚಿಕ್ಕಮಗಳೂರು: ಸಿನಿಮಾ ನಟರು ಅಥವಾ ರಾಜಕಾರಣಿಗಳಿಗೆ ಅದ್ದೂರಿ ಸ್ವಾಗತ ಕೋರೋದು ಸಾಮಾನ್ಯ. ತಮ್ಮೂರಿಗೆ ತಮ್ಮ ನೆಚ್ಚಿನ ಸೆಲೆಬ್ರೆಟಿಗಳು ಬಂದ್ರೆ, ಅಭಿಮಾನಿಗಳು ಅವ್ರನ್ನ ಅದ್ದೂರಿಯಾಗಿ ಸ್ವಾಗತಿಸ್ತಾರೆ. ಅದೇ ರೀತಿ ಚಿಕ್ಕಮಗಳೂರಿನ ಜನ ಇಬ್ಬರನ್ನ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.. ಪಟಾಕಿ ಹೊಡೆದು ಬರಮಾಡಿಕೊಂಡಿದ್ದಾರೆ. ಆದ್ರೆ ಇವ್ರು ಯಾವ ಸಿನಿಮಾ ನಟರಲ್ಲ.. ರಾಜಕಾರಣಿಗಳೂ ಅಲ್ಲ.. ದೇಶ ಕಾಯೋ ಯೋಧರು.. ನಮ್ಮ ನಾಳೆಗಾಗಿ ಇವರ ಇಡೀ ಜೀವನವನ್ನ ಮುಡಿಪಾಗಿಟ್ಟಿದ್ದ ದಿ ರಿಯಲ್​ ಹೀರೋಸ್​. ದಿ ರಿಯಲ್​ ಸೆಲೆಬ್ರೆಟೀಸ್​.

ಹೀಗೆ ಚಿಕ್ಕಮಗಳೂರಿನಲ್ಲಿ ಇಷ್ಟೊಂದು ಸಂತಸ, ಸಡಗರ ಮನೆ ಮಾಡೋಕೆ ಕಾರಣ, ಈ ಇಬ್ಬರು ಯೋಧರು.. ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಂಕ್ರಪ್ಪ ಮತ್ತು ಶಿವಕುಮಾರ್ ಎಂಬ ಯೋಧರು ತಮ್ಮ ತವರೂರಿಗೆ ಹಿಂತಿರುಗಿದ್ದಾರೆ. ಭಾರತೀಯ ಸೇನೆಯಲ್ಲಿ ಬರೋಬ್ಬರಿ 18 ವರ್ಷ ಸೇವೆ ಸಲ್ಲಿಸಿ, ಇದೀಗ ನಿವೃತ್ತರಾಗಿ ತವರಿಗೆ ವಾಪಾಸ್ಸಾಗಿದ್ದಾರೆ.

blank

ತವರೂರಿಗೆ ವಾಪಾಸ್ಸಾದ ಈ ಇಬ್ಬರು ಯೋಧರನ್ನ ಕಾಫೀ ನಾಡಿನ ಜನ ಬರಮಾಡಿಕೊಂಡ ಪರಿ ಇದು. ಅಜ್ಜಂಪುರದಿಂದ 8 ಕಿಲೋ ಮೀಟರ್​ ವರೆಗೂ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ್ದಾರೆ. ನೂರಾರು ವಾಹನಗಳು ಇವರೊಟ್ಟಿಗೆ ಸಾಗಿ ಬಂದಿವೆ. ದಾರಿಯುದ್ದಕ್ಕೂ ಜೈಕಾರ, ಭಾರತ್ ಮಾತಾಕಿ ಜೈ ಅಂತಾ ಘೋಷಣೆ ಕೂಗ್ತಾ ಯೋಧರ ಮೆರವಣಿಗೆ ಮಾಡಿದ್ದಾರೆ.

ಸದ್ಯ ತವರೂರಿಗೆ ವಾಪಾಸ್ಸಾಗಿರುವ ಯೋಧರ ಸಂತಸಕ್ಕೆ ಪರಾವೇ ಇಲ್ಲ.. ಇಂಥದ್ದೊಂದು ಭರ್ಜರಿ ಸ್ವಾಗತವನ್ನ ನೋಡಿ ಯೋಧರು ಮೂಕ ವಿಸ್ಮಿತರಾಗಿದ್ದಾರೆ.. ಗ್ರಾಮಸ್ಥರು ತೋರಿದ ಪ್ರೀತಿಗೆ ಮನಸೋತಿದ್ದಾರೆ.

blank

ಗ್ರಾಮಸ್ಥರು ಇಬ್ಬರು ಯೋಧರಿಗೆ ತೋರಿದ ಪ್ರೀತಿ ಭಾರತ ಮಾತೆಯ ಸೇವೆಗೆ ಸಿಗುವ ಗೌರವಕ್ಕೆ ಸಾಕ್ಷಿಯಾಗಿದ್ರೆ ಯೋಧರ ಉತ್ಸಾಹಿ ಭಾಷಣ ಯುವಕರನ್ನು ಸೇನೆಗೆ ಪ್ರೇರೇಪಿಸುವಂತಿತ್ತು. ಒಟ್ನಲ್ಲಿ ದೇಶ ಕಾಯೋ ಯೋಧರಿಗೆ ಅವರು ನಿವೃತ್ತಿಯಾಗಿ ಬಂದಾಗ ಗ್ರಾಮದ ಜನ ಕೊಟ್ಟ ಇಂತಹ ಗೌರವ ನಿಜಕ್ಕೂ ಶ್ಲಾಘನೀಯ.

Source: newsfirstlive.com Source link