ಇದು ವರ್ಕ್​ಫ್ರಂ ಹೋಂ ತಂದ ಅವಾಂತರ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

ಇದು ವರ್ಕ್​ಫ್ರಂ ಹೋಂ ತಂದ ಅವಾಂತರ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

01. ‘ಕಾಂಗ್ರೆಸ್​ಗೆ ನಾಯಕತ್ವದ ಕೊರತೆ ಇದೆ’

blank

ಕಾಂಗ್ರೆಸ್​ಗೆ ನಾಯಕತ್ವದ ಕೊರತೆ ಇದೆ ಹೀಗಾಗಿ ದೇಶದೆಲ್ಲೆಡೆ ಕಾಂಗ್ರೆಸ್ ಕುಸಿಯುತ್ತಿದೆ ಅಂತ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ರಾಹಲ್ ಗಾಂಧಿ ಮಾತನಾಡಿದ್ರೆ ಓಟು ಕಮ್ಮಿಯಾಗುತ್ತೆ, ಆದ್ರೆ ನಮ್ಮ ಪ್ರಧಾನಿ ಮೈಕ್ ಹಿಡಿದು ಮಾತನಾಡಿದ್ರೆ ಓಟು ಹೆಚ್ಚಾಗುತ್ತೆ. ಸದ್ಯ ದೇಶದ ಕೆಲವೇ ಭಾಗದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಇನ್ನು ಮುಂದೆ ಅಲ್ಲಿಯೂ ಕಾಂಗ್ರೆಸ್ ಅಧಿಕಾರವನ್ನ ಕಳೆದುಕೊಳ್ಳುತ್ತೆ ಅಂತ ಅರುಣ್ ಸಿಂಗ್ ತಿಳಿಸಿದ್ದಾರೆ.

02. ಶಾಸಕಾಂಗ ಪಕ್ಷದ ಸಭೆ ಕರೆದ ಸಿದ್ದರಾಮಯ್ಯ

blank

ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸೆಪ್ಟೆಂಬರ್ 7 ರಂದು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸೆಪ್ಟೆಂಬರ್ 13 ರಿಂದ ವಿಧಾನಮಂಡಲದ ಅಧಿವೇಶನ ನಡೆಯಲಿರುವ ಹಿನ್ನೆಲೆ, ಪೂರ್ವಭಾವಿಯಾಗಿ ಸಿಎಲ್​ಪಿ ಸಭೆಯನ್ನ ನಡೆಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ.

03. ಆರ್ಥಿಕ ದಿವಾಳಿಯೇ ‘ಡಬಲ್ ಇಂಜಿನ್’ ಸರ್ಕಾರದ ಸಾಧನೆ

ದೇಶದ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ ‘ಡಬಲ್ ಇಂಜಿನ್’ ಸರ್ಕಾರದ ದೊಡ್ಡ ಸಾಧನೆ ಅಂತ, ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಬೆಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ ಡಬಲ್ ಇಂಜಿನ್ ಸರ್ಕಾರ ರಕ್ತ ಹೀರುವ ತಿಗಣೆಯಂತೆ ತೆರಿಗೆ ಹೀರುತ್ತಿದೆ. ದೇಶದ ಜನರಿಗೆ ದರಿದ್ರಭಾಗ್ಯ ಕಲ್ಪಿಸಿದ ಈ ಸರ್ಕಾರ ಸ್ಮಶಾನದ ಹೆಣವಿದ್ದಂತೆ. ಕೇಂದ್ರ ಸರ್ಕಾರದ ತೆರಿಗೆ ದರೋಡೆ ಕಂಡು ಜನರು ಅಚ್ಚೇದಿನ್ ಎಂದರೆ ಕನಸಿನಲ್ಲೂ ಬೆಚ್ಚುವಂತಾಗಿದೆ ಅಂತಾ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

04. ರಾಜ್ಯ ಸರ್ಕಾರಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

blank

ಪಂಚಮಸಾಲಿ ಲಿಂಗಾಯಿತ ಸಮುದಾಯಕ್ಕೆ ಮೀಸಲಾತಿ ಕೊಡುವುದು ತಡವಾದರೆ ಮತ್ತೆ ಧರಣಿ ಆರಂಭವಾಗುತ್ತೆ ಅಂತ ಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿಂದೆ ನಮ್ಮ ಪಾದಯಾತ್ರೆಗೆ ಬೆಂಬಲ ಕೊಟ್ಟ ಅಂದಿನ ಸಚಿವರಲ್ಲಿ ಬೊಮ್ಮಾಯಿ ಕೂಡ ಒಬ್ರು. ಈಗ ಅವರು ಸಿಎಂ ಆಗಿದ್ದಾರೆ. ಸದ್ಯ ನಮ್ಮ ಮೀಸಲಾತಿ ಅಭಿಯಾನ 1ನೇ ತಾರೀಖು ಬೆಂಗಳೂರು ತಲುಪುತ್ತೆ. ಅಂದು ಮೀಸಲಾತಿ ಸಿಕ್ಕರೆ ಅಭಿನಂದನಾ ಸಮಾರಂಭ, ಸಿಗದಿದ್ರೆ ಧರಣಿ ಮುಂದುವರಿಕೆ ಅನಿವಾರ್ಯ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

05. ವಿವೇಕ್ ಕುಟುಂಬಕ್ಕೆ ಸಾಂತ್ವನ ಹೇಳಿದ ಗುರು ದೇಶಪಾಂಡೆ

blank

ಲವ್ ಯೂ ರಚ್ಚು ಶೂಟಿಂಗ್ ವೇಳೆ ಫೈಟರ್ ಸಾವು ಪ್ರಕರಣ ಸಂಬಂಧ, ಘಟನೆ ನಡೆದು 24 ದಿನಗಳ ಬಳಿಕ ಮೃತ ಫೈಟರ್ ಮನೆಗೆ ನಿರ್ಮಾಪಕ ಗುರು ದೇಶಪಾಂಡೆ ಭೇಟಿ ನೀಡಿದ್ದಾರೆ. ಫೈಟರ್ ವಿವೇಕ್ ಕುಟುಂಬಕ್ಕೆ ಸಾಂತ್ವನ ಹೇಳಿ 5 ಲಕ್ಷದ ಚೆಕ್ ನೀಡಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಗುರು ದೇಶಪಾಂಡೆ, ಅಚನಾಕ್ ಆಗಿ ಈ ಘಟನೆ ನಡೆದು ಹೋಗಿದೆ, ಆ ವೇಳೆ ನಾನು ಸಹ ಸ್ಥಳದಲ್ಲಿ ಇರಲಿಲ್ಲ. ಆದ್ರೆ ಅವರ ಕುಟುಂಬದ ಜೊತೆ ನಾನಿರ್ತೀನಿ ಅಂತ ಹೇಳಿದ್ದಾರೆ.

06. ರಾಷ್ಟ್ರ ರಾಜಧಾನಿಯಲ್ಲಿ ವರುಣನ ಅಬ್ಬರ

ವರುಣನ ಆರ್ಭಟಕ್ಕೆ ರಾಜಧಾನಿ ದೆಹಲಿಯ ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಮನೆ, ಅಂಗಡಿಗಳಿಗೆ ನೀರು ನುಗ್ಗಿದ್ದು, ತುಂಬಿರುವ ನೀರನ್ನು ಹೊರಹಾಕಲು ಜನ ಪರದಾಡಿದ್ದಾರೆ. ಇನ್ನು ಹೊಳೆಯಂತಾಗಿರುವ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸಪಟ್ಟಿದ್ದಾರೆ. ದೆಹಲಿಯಲ್ಲಿ ಕಳೆದ 12 ವರ್ಷಗಳಲ್ಲಿ ಮೊದಲ ಬಾರಿಗೆ ಈ ರೀತಿಯ ದಾಖಲೆಯ ಮಳೆ ಸುರಿದಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ವರುಣನ ಆರ್ಭಟ ಮುಂದುವರೆಯಲಿದೆ ಅಂತ ಎಚ್ಚರಿಸಿದೆ.

07. ಸೇನೆ ಹೆಲಿಕಾಫ್ಟರ್ ದ್ವಂಸಗೊಳಿಸಿ ಅಮೆರಿಕಾ ವಾಪಾಸ್

ಅಫ್ಘಾನಿಸ್ತಾನದಿಂದ ಅಮೆರಿಕಾ ಸೇನೆ ಈಗಾಗಲೇ ತನ್ನ ತವರಿಗೆ ವಾಪಾಸಾಗಿದೆ. ಆದ್ರೆ ಅಮೆರಿಕಾ ಸೇನೆ ವಾಪಾಸ್ಸಾಗುವ ಮುನ್ನ, ಕಾಬೂಲ್​ ವಿಮಾನ ನಿಲ್ದಾಣದಲ್ಲಿದ್ದ ಸೇನೆಯ ಹೆಲಿಕಾಫ್ಟ್ರ್​ಗಳನ್ನ ದ್ವಂಸಗೊಳಿಸಿದೆ. ಕೇವಲ ಹೆಲಿಕಾಫ್ಟರ್​ಗಳಲ್ಲದೆ ಇತರೆ ಯುದ್ಧ ಸಾಮಾಗ್ರಿಗಳನ್ನು ತಾಲಿಬಾನ್​ ಉಗ್ರರು ಬಳಸದಂತೆ ಧ್ವಂಸಗೊಳಿಸಿದೆ. ಈ ಬಗ್ಗೆ ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

08. ಮೈಕ್ರೋಸಾಫ್ಟ್‌ ವಿಂಡೋಸ್ 11 ಅಪ್ಡೇಟ್‌ ಲಭ್ಯ!

ಮೈಕ್ರೋಸಾಫ್ಟ್‌ ತನ್ನ ಬಹು ನಿರೀಕ್ಷಿತ ವಿಂಡೋಸ್ 11 ಆಪರೇಟಿಂಗ್‌ ಸಿಸ್ಟಂ ಅನ್ನು ಮೂರು ತಿಂಗಳ ಹಿಂದೆಯಷ್ಟೇ ಅನಾವರಣಗೊಳಿಸಿತ್ತು. ಇದೀಗ ಮೈಕ್ರೋಸಾಫ್ಟ್‌ ವಿಂಡೋಸ್‌ 11 ಅಕ್ಟೋಬರ್ 5 ರಿಂದ ಬಳಕೆದಾರರಿಗೆ ಲಭ್ಯವಾಗಲಿದೆ. ಹಂತ ಹಂತವಾಗಿ ವಿಂಡೋಸ್ 10 ಬಳಕೆದಾರರಿಗೆ ಉಚಿತವಾಗಿ ಲಭ್ಯವಾಗಲಿದೆ ಅಂತ ಮೈಕ್ರೋಸಾಫ್ಟ್ ಕಂಪನಿ ತಿಳಿಸಿದೆ. ಇನ್ನು ಈ ಹೊಸ ಅಪ್ಡೇಟ್‌ ಮೂಲಕ ಹೊಸ ಫೀಚರ್ಸ್​​ಗಳನ್ನು ಕಾಣಬಹುದಾಗಿದೆ.

09. ಇಂದು ಭಾರತ-ಇಂಗ್ಲೆಂಡ್ ಮುಖಾಮುಖಿ

blank

ಇಂದಿನಿಂದ ಭಾರತ – ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಆರಂಭವಾಗಲಿದೆ. ಲಂಡನ್​​ನ ಕನ್ನಿಂಗ್​ಟನ್​​​​ ಕ್ರೀಡಾಂಗಣದಲ್ಲಿ 4ನೇ ಟೆಸ್ಟ್ ಪಂದ್ಯ ನಡೆಯಲಿದೆ. ಈಗಾಗಲೇ 5 ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿವೆ. ಇನ್ನು ಇವತ್ತಿನ ಟೆಸ್ಟ್ ಪಂದ್ಯದಲ್ಲಿ ಭಾರತ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ. ಸದ್ಯ ಟೀಂ ಇಂಡಿಯಾ ಇವತ್ತಿನ ಮ್ಯಾಚ್ ಗೆದ್ದು, ಮೂರನೇ ಮ್ಯಾಚ್​ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಅಂತಾ ಕಾದುನೋಡಬೇಕಿದೆ.

10. ಇದು ವರ್ಕ್​ಫ್ರಂ ಹೋಂ ತಂದ ಅವಾಂತರ!

ಕೆನಡಾದ ಹವಾಮಾನ ತಜ್ಞ ಹಾಗೂ ನ್ಯೂಸ್ ಆ್ಯಂಕರ್ ಆ್ಯಂಟೋನಿ, ಹವಾಮಾನ ವರದಿ ಓದುತ್ತಿದ್ದಾಗ ನಾಯಿ ಮರಿಯೊಂದು ಸ್ಕ್ರೀನ್ ಮೇಲೆ ಬಂದಿರುವ ದೃಶ್ಯ ಈಗ ಸಖತ್ ಸದ್ದು ಮಾಡುತ್ತಿದೆ. ವರ್ಕ್ ಫ್ರಂ ಹೋಮ್​​​ನಲ್ಲಿದ್ದ ಆ್ಯಂಟನಿ, ಹವಾಮಾನ ವರದಿಯನ್ನು ನೀಡುತ್ತಿದ್ದಾಗ, ನಾಯಿ ಮದ್ಯ ಪ್ರವೇಶಿಸಿದೆ. ಆದ್ರೆ ಯಾವುದೇ ರೀತಿ ತೊಂದರೆ ನೀಡದೆ ಅದರ ಪಾಡಿಗೆ ಅದು ವಾಕಿಂಗ್ ಮಾಡಿದೆ. ಇನ್ನು ನಾಯಿ ಕಂಡು ಆ್ಯಂಕರ್​ ವಿಚಲಿತರಾಗದೆ, ನಾಯಿ ಓಡಿಸುವ ಪ್ರಯತ್ನವನ್ನು ಮಾಡದೆ, ತನ್ನಷ್ಟಕ್ಕೆ ತಾನು ವರದಿ ನೀಡುವ ಕೆಲಸ ಮುಂದುವರಿಸಿದ್ದಾರೆ.

Source: newsfirstlive.com Source link