ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ – ಅಲಹಾಬಾದ್ ಹೈಕೋರ್ಟ್

ಅಲಹಾಬಾದ್: ಗೋವುಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಗೋಹತ್ಯೆ ತಡೆ ಕಾಯ್ದೆಯ ಅಡಿ ಬಂಧನಕ್ಕೆ ಒಳಗಾಗಿದ್ದ ಜಾವೇದ್ ಎಂಬಾತನ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾ. ಶೇಖರ್ ಯಾದವ್ ಅವರಿದ್ದ ಏಕಸದಸ್ಯ ಪೀಠ, ಗೋವಿನ ರಕ್ಷಣೆಯನ್ನು ಹಿಂದೂಗಳ ಮೂಲಭೂತ ಹಕ್ಕುಗಳ ಪೈಕಿ ಒಂದು ಎಂದು ಪರಿಗಣಿಸಬೇಕು. ಒಂದು ದೇಶದ ಸಂಸ್ಕೃತಿ ಮತ್ತು ನಂಬಿಕೆಗೆ ಧಕ್ಕೆ ಉಂಟಾದರೆ ದೇಶ ದುರ್ಬಲವಾಗುತ್ತದೆ ಎನ್ನುವುದು ನಮಗೆ ತಿಳಿದಿದೆ ಎಂದು ಅಭಿಪ್ರಾಯಪಟ್ಟಿದೆ.

ಆದೇಶದಲ್ಲಿ ಏನಿದೆ?
ಹಸುಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಪ್ರಾಚೀನ ಗ್ರಂಥಗಳಾದ ವೇದ ಮತ್ತು ಮಹಾಭಾರತಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ವಿವರಿಸುವ ಪ್ರಮುಖ ಭಾಗವಾಗಿ ಗೋವನ್ನು ತೋರಿಸಲಾಗಿದೆ ಎಂದು 12 ಪುಟಗಳ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ : 157 ಘೋಲ್ ಮೀನು ಹಿಡಿದು ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಮೀನುಗಾರ

ಗೋಮಾಂಸ ತಿನ್ನುವವರಿಗೆ ಮಾತ್ರ ಮೂಲಭೂತ ಹಕ್ಕು ಅನ್ವಯಿಸುವುದಿಲ್ಲ. ಗೋವನ್ನು ಪೂಜಿಸುವವರು, ಆರ್ಥಿಕವಾಗಿ ಹಸುಗಳ ಮೇಲೆ ಅವಲಂಬಿತರಾಗಿರುವವರು ಸಹ ಅರ್ಥಪೂರ್ಣವಾದ ಜೀವನವನ್ನು ನಡೆಸುವರೂ ಹಕ್ಕನ್ನು ಹೊಂದಿದ್ದಾರೆ.

ಗೋವುಗಳು ಕಲ್ಯಾಣವಾದಾಗ ಮಾತ್ರ ದೇಶವು ಸುರಕ್ಷಿತವಾಗಿರುತ್ತದೆ ಮತ್ತು ಆಗ ದೇಶವು ಏಳಿಗೆಯಾಗುತ್ತದೆ. ಜೀವಿಸುವ ಹಕ್ಕು, ಹತ್ಯೆಗೈಯುವ ಹಕ್ಕಿಗಿಂತಲೂ ದೊಡ್ಡದು. ಗೋಮಾಂಸ ಸೇವನೆಯನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ. ಗೋಶಾಲೆಗಳ ಹೆಸರಿನಲ್ಲಿ ಮೋಸ ಮಾಡುತ್ತಿರುವವರ ವಿರುದ್ಧ ಕಾನೂನು ಜಾರಿ ಮಾಡಬೇಕು. ಇದನ್ನೂ ಓದಿ : ಲೀಕ್ ಆಯ್ತು ಜೋ ಬೈಡನ್- ಅಶ್ರಫ್ ಘನಿ ಫೋನ್ ಸಂಭಾಷಣೆ

ಜಾವೇದ್ (59) ಮಾಂಸಕ್ಕಾಗಿ ಹಸುವನ್ನು ಕದ್ದು ಹತ್ಯೆ ಮಾಡಿದ್ದ. ಇದು ಅರ್ಜಿದಾರರ ಮೊದಲ ಅಪರಾಧವಲ್ಲ. ಈ ಹಿಂದೆಯೂ ಈತ ಗೋಹತ್ಯೆಯನ್ನು ಎಸಗಿ ಸಮಾಜದ ಸಾಮರಸ್ಯವನ್ನು ಕದಡಿದ್ದ ಎಂದು ನ್ಯಾಯಮೂರ್ತಿ ಯಾದವ್ ಅಭಿಪ್ರಾಯಪಟ್ಟಿದ್ದಾರೆ.

Source: publictv.in Source link