ಕ್ಯಾಪ್ಟನ್ ಕೊಹ್ಲಿ ಮುಂದಿದೆ ಟಫ್ ಟಾಸ್ಕ್​​ -ಸೋಲಿನಿಂದ ಪುಟಿದೇಳಲು ಕೊಹ್ಲಿ ಪಡೆ ತಯಾರು ಹೇಗಿದೆ?

ಕ್ಯಾಪ್ಟನ್ ಕೊಹ್ಲಿ ಮುಂದಿದೆ ಟಫ್ ಟಾಸ್ಕ್​​ -ಸೋಲಿನಿಂದ ಪುಟಿದೇಳಲು ಕೊಹ್ಲಿ ಪಡೆ ತಯಾರು ಹೇಗಿದೆ?

ಹೆಡಿಂಗ್ಲಿ ಟೆಸ್ಟ್​ ಪಂದ್ಯದ ಹೀನಾಯ ಸೋಲಿನ ಬಳಿಕ, ಇದೀಗ ಟೀಮ್ ಇಂಡಿಯಾ 4ನೇ ಟೆಸ್ಟ್​ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿದೆ. ಕಳೆದ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ, ಸಾಕಷ್ಟು ತಪ್ಪುಗಳನ್ನ ಮಾಡಿತ್ತು. ಆದ್ರೀಗ ಆ ತಪ್ಪುಗಳನ್ನ ತಿದ್ದಿಕೊಳ್ಳಲು ಹೊರಟಿರುವ ವಿರಾಟ್ ಌಂಡ್ ಟೀಮ್, ಗೆಲುವಿನ ಹಾದಿ ಹುಡುಕುತ್ತಿದೆ.

ಕೆನ್ನಿಂಗ್ಟನ್ ಓವಲ್ ಟೆಸ್ಟ್ ಪಂದ್ಯವನ್ನ ಗೆಲ್ಲಲು, ಟೀಮ್ ಇಂಡಿಯಾ ಸಜ್ಜಾಗಿದೆ. ಕಳೆದ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕೊಹ್ಲಿ ಪಡೆ, ಇದೀಗ ಸ್ಟ್ರಾಂಗ್​​ ಕಮ್​ಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ. ಸದ್ಯ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿರುವ ಕೊಹ್ಲಿ ಬಾಯ್ಸ್​, ಈ ಪಂದ್ಯವನ್ನ ಗೆಲ್ಲಲೇಬೇಕಿದೆ.

ನಾಯಕ-ಉಪನಾಯಕ ಆಡಬೇಕು ಜವಾಬ್ದಾರಿಯುತ ಆಟ!

ಪ್ರಸಕ್ತ ಟೆಸ್ಟ್ ಸರಣಿಯಲ್ಲಿ, ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯಾ ರಹಾನೆ, ಹೇಳಿಕೊಳ್ಳುವಂತಹ ಪರ್ಫಾಮೆನ್ಸ್ ನೀಡಿಲ್ಲ. ಹೀಗಾಗಿ ಈ ಇಬ್ಬರೂ ಅನುಭವಿ ಆಟಗಾರರು, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಬೇಕಿದೆ.

blank

ಟೀಕಕಾರರಿಗೆ ಆರ್. ಅಶ್ವಿನ್ ತಕ್ಕ ಉತ್ತರ ನೀಡಬೇಕು!

ಇಂದಿನ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಆರ್.ಅಶ್ವಿನ್, ಪ್ಲೇಯಿಂಗ್ ಇಲೆವೆನ್​ನಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಗೇಮ್​ಚೇಂಜರ್ ಅಶ್ವಿನ್ ಒಂದೇ ಒಂದು ಸೂಪರ್​ ಸ್ಪೆಲ್​, ಪಂದ್ಯದ ಫಲಿತಾಂಶವನ್ನೇ ಬದಲಿಸುತ್ತದೆ. ಇದೇ ಪ್ರದರ್ಶನವನ್ನ ಅಶ್ವಿನ್​​​ರಿಂದ ನಿರೀಕ್ಷಿಸಲಾಗುತ್ತಿದೆ.

ಓವಲ್​ನಲ್ಲಿ ಪಂತ್ ಪರಾಕ್ರಮ ನಡೆಸಿದ್ರೆ ತಂಡಕ್ಕೆ ಲಾಭ!

ಆಸಿಸ್ ಟೆಸ್ಟ್ ಸರಣಿ, ತವರಿನಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿ ಬಿಟ್ರೆ, ಪಂತ್ ಪರಾಕ್ರಮ ಎಲ್ಲೂ ನಡೆದಿಲ್ಲ. ಸದ್ಯ ಇಂಗ್ಲೆಂಡ್​​ ಪ್ರವಾಸದಲ್ಲೂ ಸೈಲೆಂಟ್ ಆಗಿರುವ ಪಂತ್​, ಇಂಗ್ಲೀಷ್ ಬೌಲರ್​ಗಳ ವಿರುದ್ಧ ಸಿಡದೇಳಬೇಕಿದೆ.

blank

ಟೀಮ್ ಇಂಡಿಯಾ ಪೇಸರ್ಸ್,​​ ರೂಟ್ ಆಟಕ್ಕೆ ಬ್ರೇಕ್ ಹಾಕಬೇಕಿದೆ

ಮೂರೂ ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನ ವಿಲನ್ ಆಗಿ ಕಾಡಿದ್ದೇ, ಜೋ ರೂಟ್. ಹೀಗಾಗಿ ಓವಲ್ ಪಂದ್ಯದಲ್ಲಿ, ರೂಟ್​​​​​ ಆಟಕ್ಕೆ ಟೀಮ್ ಇಂಡಿಯಾ ಬೌಲರ್​ಗಳು, ಫುಲ್​ಸ್ಟಾಪ್ ಹಾಕಬೇಕಿದೆ.

ಆತ್ಮವಿಶ್ವಾಸದಿಂದಲೇ ಇಂಗ್ಲೆಂಡ್​​ ವಿರುದ್ಧ ಹೋರಾಡಬೇಕು

ಹೆಡ್ಡಿಂಗ್ಲಿ ಟೆಸ್ಟ್​ ಸೋಲುನಿಂದ ಸ್ವಲ್ಪ ಡಲ್ ಆಗಿರುವ ಕೊಹ್ಲಿ ಬಾಯ್ಸ್​, ಓವಲ್​ನಲ್ಲಿ ಆತ್ಮವಿಶ್ವಾಶದಿಂದಲೇ ಇಂಗ್ಲೆಂಡ್​​ ತಂಡವನ್ನ ಎದುರಿಸಬೇಕಿದೆ. ಆಗ ಮಾತ್ರ ಗೆಲುವನ್ನ ನಿರೀಕ್ಷಿಸಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಪಂದ್ಯದಲ್ಲಿ ಸೋಲು ಗೆಲುವು ಮಾಮೂಲಿ. ಆದ್ರೆ ಸೋಲಿನಿಂದ ಹೊರಬಂದರೇನೆ, ಚಾಂಪಿಯನ್ಸ್​ ಎನಿಸಿಕೊಳ್ಳೋದು.

Source: newsfirstlive.com Source link