ಮಾಜಿ ಸಚಿವ ಜಿಟಿಡಿ ಬೆನ್ನಲ್ಲೇ ‘ತೆನೆ’ ಇಳಿಸಲು ಸಿದ್ಧವಾದ್ರಾ ಮಾಜಿ ಶಾಸಕ?

ಮಾಜಿ ಸಚಿವ ಜಿಟಿಡಿ ಬೆನ್ನಲ್ಲೇ ‘ತೆನೆ’ ಇಳಿಸಲು ಸಿದ್ಧವಾದ್ರಾ ಮಾಜಿ ಶಾಸಕ?

ಕೋಲಾರ: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್​ ಶಾಸಕ ಜಿ.ಟಿ ದೇವೇಗೌಡ ಅವರು ತಾವು ಕಾಂಗ್ರೆಸ್​​ಗೆ ಸೇರ್ಪಡೆಯಾಗುತ್ತಿರುವ ಕುರಿತು ಬಹಿರಂಗ ಹೇಳಿಕೆ ನೀಡಿ ಸ್ಪಷ್ಟಪಡಿಸಿದ್ದರು. ಈ ನಡುವೆಯೇ ಜೆಡಿಎಸ್​ನಲ್ಲಿ ಮತ್ತೊಂದು ವಿಕೆಟ್ ಪತನವಾಗೋ ಅನುಮಾನ ಹುಟ್ಟುಕೊಂಡಿದೆ.

ಹೌದು, ಜೆಡಿಎಸ್ ಮಾಜಿ ಶಾಸಕ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದು, ಇಂಥಾದೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೋಲಾರದ ಶ್ರೀನಿವಾಸಪುರ ತಾಲೂಕಿನ ಬೈರಗಾನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಲಾರದ ಜೆಡಿಎಸ್ ಜಿಲ್ಲಾ ಅಧ್ಯಕ್ಷ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಆಗಮಿಸಿದ್ರು. ಈ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ವೆಂಕಟಶಿವಾರೆಡ್ಡಿಯರವನ್ನ ಕೇಸರಿ ಶಾಲು ಹೊದಿಸೋ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ರು.

ನಗುತ್ತಲೆ ಸ್ವಾಗತ ಸ್ವೀಕರಿಸಿದ ವೆಂಕಟಶಿವಾರೆಡ್ಡಿ, ಇಡೀ ದಿನ ಬಿಜೆಪಿ ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡಿದ್ರು. ಈ ಹಿನ್ನೆಲೆ, ಸದ್ಯ ರಾಜಕೀಯ ಪಡಸಾಲೆಯಲ್ಲಿ ವೆಂಕಟಶಿವಾರೆಡ್ಡಿ ಜೆಡಿಎಸ್​ ತೊರೆದು ಬಿಜೆಪಿ ಸೇರ್ಪಡೆಯಾಗ್ತಾರೆ ಅನ್ನೋ ಚರ್ಚೆ ಶುರುವಾಗಿದೆ.

blank

Source: newsfirstlive.com Source link