ಟೋಯಿಂಗ್​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕಾರು ಜಖಂ -ಚಪ್ಪಾಳೆ ತಟ್ಟಿ, ವಿಷಲ್ ಹಾಕಿ ಸಾರ್ವಜನಿಕರಿಂದ ವ್ಯಂಗ್ಯ

ಟೋಯಿಂಗ್​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕಾರು ಜಖಂ -ಚಪ್ಪಾಳೆ ತಟ್ಟಿ, ವಿಷಲ್ ಹಾಕಿ ಸಾರ್ವಜನಿಕರಿಂದ ವ್ಯಂಗ್ಯ

ಬೆಂಗಳೂರು: ನಗರದಲ್ಲಿ ವಾಹನಗಳ ಟೋಯಿಂಗ್​​ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ನಡೆಯುವ ಜಟಾಪಟಿ ಮುಂದುವರಿದಿದ್ದು, ಟೋಯಿಂಗ್​ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಕಿಯಾ ಕಾರು ಜಖಂ ಆಗಿರೋ ಘಟನೆ ಇಂದಿರಾ ನಗರದಲ್ಲಿ ನಡೆದಿದೆ.

blank

ನಡೆದಿದ್ದೇನು?
ಇಂದಿರಾನಗರ ಬಳಿ ನೋ ಪಾರ್ಕಿಂಗ್​ನಲ್ಲಿ ಕಿಯಾ ಕಾರು ನಿಲ್ಲಿಸಿದ್ದ ಆರೋಪ ಮೇರೆಗೆ ಟೋಯಿಂಗ್​ ಸಿಬ್ಬಂದಿ ಕಾರು ತೆರವು ಮಾಡಲು ಮುಂದಾಗಿದ್ದರು. ಆದರೆ ಕಾರನ್ನು ತೆರವುಗೊಳಿಸುವ ವೇಳೆ ನಿರ್ಲಕ್ಷ್ಯದಿಂದ ನಡೆದುಕೊಂಡ ಕಾರಣ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿತ್ತು. ಅಲ್ಲದೇ ಯಾವುದೇ ಸೂಚನೆ ನೀಡದೆ ಮಾಡದೆ ಸಿಬ್ಬಂದಿ ಕಾರನ್ನು ತೆರವು ಮಾಡಲು ಮುಂದಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದೇ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಕಾರನ್ನು ತೆರವು ಮಾಡಲು ಮುಂದಾಗಿದ್ದ ವೇಳೆ ಕಾರು ಜಖಂಗೊಂಡಿದನ್ನು ಗಮನಿಸುತ್ತಿದ್ದ ಸ್ಥಳದಲ್ಲಿದ್ದ ಸಾರ್ವಜನಿಕರು ಚಪ್ಪಾಳೆ ತಟ್ಟಿ, ಕೇಕೆ, ವಿಷಲ್​ ಹಾಕುತ್ತಾ ವ್ಯಂಗ್ಯವಾಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

blank

ಟೋಲ್​ ಸಿಬ್ಬಂದಿಯ ಅವಾಂತರ ಇದೇ ಮೊದಲಲ್ಲ
ಬೆಂಗಳೂರಿನಲ್ಲಿ ಟೋಯಿಂಗ್ ಸಿಬ್ಬಂದಿಯ ಅವಾಂತರ ಇದೇ ಮೊದಲಲ್ಲ. ಟೋಯಿಂಗ್​ ಮಾಡಲು ಹೋದವರಿಗೆ ಜನರಿಂದ ಹಲ್ಲೆ ಮಾಡಿದ್ದ ಘಟನೆಯೂ ಇತ್ತೀಚೆಗೆ ನಡೆದಿತ್ತು. ಸಿಬ್ಬಂದಿ ಮೇಲೆ ಹಲ್ಲೆ ನಡೆದಾಗ ಕಠಿಣ ಕ್ರಮಕ್ಕೆ ಮುಂದಾದ ಇಲಾಖೆ, ಟೋಯಿಂಗ್​​ ಸಿಬ್ಬಂದಿಗೆ ಹಲ್ಲೆ ಮಾಡಿದ್ರೆ ಕೇಸ್​ ಹಾಕೋ ಎಚ್ಚರಿಕೆ ನೀಡಿತ್ತು. ಆದರೆ ಈಗ ವೈರಲ್​ ವಿಡಿಯೋವನ್ನು ವೀಕ್ಷಣೆ ಮಾಡಿರುವ ಸಾರ್ವಜನಿಕರು ಟೋಯಿಂಗ್​ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

blank

Source: newsfirstlive.com Source link