ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ:ಮನಮೋಹನ್ ಸಿಂಗ್ ನೇತೃತ್ವದ ಸಮಿತಿಯಲ್ಲಿ ರಮೇಶ್​ ಕುಮಾರ್​ಗೆ ಸ್ಥಾನ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ:ಮನಮೋಹನ್ ಸಿಂಗ್ ನೇತೃತ್ವದ ಸಮಿತಿಯಲ್ಲಿ ರಮೇಶ್​ ಕುಮಾರ್​ಗೆ ಸ್ಥಾನ

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸವಿನೆನಪಿಗಾಗಿ, ವರ್ಷಪೂರ್ತಿ ಸಂಭ್ರಮಾಚರಣೆಗೆ ಮುಂದಾದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ 11 ಸದಸ್ಯರ ಸಮಿತಿಯನ್ನು ರಚಿಸಿದೆ.

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ವರ್ಷಪೂರ್ತಿ ಆಚರಣೆಗೆ ಕಾರ್ಯಕ್ರಮ ರೂಪಿಸಲು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದಲ್ಲಿ 11 ಜನ ಸದಸ್ಯರುಳ್ಳ ಸಮಿತಿಯನ್ನು ಕಾಂಗ್ರೆಸ್​ ರಚಿಸಿದೆ.

ಈ ಸಮಿತಿಯಲ್ಲಿ ಕರ್ನಾಟಕ ಕಾಂಗ್ರೆಸ್ ನ ಹಿರಿಯ ಮುಖಂಡ ಮತ್ತು ವಿಧಾನಸಭೆಯ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಗೆ ಸ್ಥಾನ ಲಭ್ಯವಾಗಿದೆ. ಸಮಿತಿಯಲ್ಲಿ ಎ.ಕೆ. ಆಂಟನಿ, ಗುಲಾಂ ನಬೀ ಆಜಾದ್, ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರ ಸಮಿತಿಯಲ್ಲಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ಜಿಟಿಡಿ ಬೆನ್ನಲ್ಲೇ ‘ತೆನೆ’ ಇಳಿಸಲು ಸಿದ್ಧವಾದ್ರಾ ಮಾಜಿ ಶಾಸಕ?

blank

Source: newsfirstlive.com Source link