ಮಾನಸಿಕ ಒತ್ತಡಕ್ಕೆ ಒಳಗಾಗುವ ಮೊದಲೇ ಶಮಿ, ಬೂಮ್ರಾಗೆ ರೆಸ್ಟ್ ಪ್ಲಾನ್​ -ಬಹುದಿನಗಳ ಬಳಿಕ ಉಮೇಶ್​​​ ಕಣಕ್ಕೆ

ಮಾನಸಿಕ ಒತ್ತಡಕ್ಕೆ ಒಳಗಾಗುವ ಮೊದಲೇ ಶಮಿ, ಬೂಮ್ರಾಗೆ ರೆಸ್ಟ್ ಪ್ಲಾನ್​ -ಬಹುದಿನಗಳ ಬಳಿಕ ಉಮೇಶ್​​​ ಕಣಕ್ಕೆ

ಲೀಡ್ಸ್​​​​ನಲ್ಲಿ ಸೋತ ಭಾರತ, ಓವಲ್​​​ನಲ್ಲಿ ಗೆದ್ದು ಇತಿಹಾಸ ಬರೆಯುವ ತವಕದಲ್ಲಿದೆ. ಅದಕ್ಕಾಗಿ ಟೀಮ್​ ಇಂಡಿಯಾ ಹಲವು ಗೇಮ್​ ಪ್ಲಾನ್,​ ಸ್ಟ್ರಾಟಜಿಗಳೊಂದಿಗೆ ಇಂದು ಕಣಕ್ಕಿಳಿತಿದೆ. ಮತ್ತೊಂದೆಡೆ ಈ ಇಬ್ಬರಿಗಂತೂ ರೆಸ್ಟ್​ ನೀಡಲೇಬೇಕು ಎಂದು ಬಿಸಿಸಿಐ ನಿರ್ಧರಿಸಿದೆ. ಅದ್ಯಾಕೆ ಗೊತ್ತಾ..? ನೀವೇ ನೋಡಿ..

ಮೊಹಮ್ಮದ್​ ಶಮಿ, ಜಸ್​​ಪ್ರಿತ್​ ಬೂಮ್ರಾ.. ಟೀಮ್ ಇಂಡಿಯಾದ ಗೆಲುವಿನ ವೆಪನ್ಸ್​​​.!! ಜೊತೆಗೆ ವಿರಾಟ್​ ಕೊಹ್ಲಿಯ ನಂಬಿಕಸ್ಥ ಬೌಲರ್​ಗಳು. ಆದರೆ ಇಂದಿನ ಪಂದ್ಯಕ್ಕೆ ಈ ಇಬ್ಬರಿಗೂ ವಿಶ್ರಾಂತಿ ನೀಡಲು, ಮ್ಯಾನೇಜ್​ಮೆಂಟ್​ ಚಿಂತನೆ ನಡೆಸುತ್ತಿದೆ. ಬದಲಿಗೆ ಬೆಂಚ್​ ಕಾದಿರುವ ಉಮೇಶ್​ ಯಾದವ್ ಮತ್ತು ಗಾಯದಿಂದ ಚೇತರಿಸಿಕೊಂಡಿರುವ ಶಾರ್ದೂಲ್​ ಠಾಕೂರ್​ಗೆ, ಚಾನ್ಸ್​ ನೀಡುವ ಸಾಧ್ಯತೆ ಇದೆ.

blank

T20 ವಿಶ್ವಕಪ್​ ದೃಷ್ಟಿಯಿಂದ ಬೂಮ್ರಾ-ಶಮಿಗೆ ವಿಶ್ರಾಂತಿ.?
ಶಮಿ ಮತ್ತು​ ಬೂಮ್ರಾ, ವಿಶ್ರಾಂತಿ ಇಲ್ಲದೆ ಸರಣಿ ಮೇಲೆ ಸರಣಿ ಆಡ್ತಿದ್ದಾರೆ. ಬುಮ್ರಾ ಮದುವೆಗಾಗಿ ಕೆಲ ದಿನಗಳ ರೆಸ್ಟ್​ ಪಡೆದಿದ್ರು. ಆದ್ರೆ ಶಮಿ ಮಾತ್ರ, ಬಿಡುವಿಲ್ಲದೆ ತಂಡಕ್ಕೆ ಸೇವೆ ಸಲ್ಲಿಸ್ತಿದ್ದಾರೆ. ಹೀಗಾಗಿ ಬಿಡುವಿಲ್ಲದೆ ಸುದೀರ್ಘವಾಗಿ ಕ್ರಿಕೆಟ್ ಆಡ್ತಿರುವ ಕಾರಣ, ಅವರಲ್ಲಿನ ಒತ್ತಡ ನಿವಾರಿಸುವ ಸಲುವಾಗಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ.

ಒತ್ತಡದ ಜೊತೆಗೆ ಟಿ20 ವಿಶ್ವಕಪ್​ ದೃಷ್ಟಿಯಿಂದಲೂ ಬುಮ್ರಾ-ಶಮಿಗೆ ವಿಶ್ರಾಂತಿ ಅನಿವಾರ್ಯ. ಏಕೆಂದರೆ ಸೆಪ್ಟೆಂಬರ್​ 14ಕ್ಕೆ ಟೆಸ್ಟ್​ ಸರಣಿ ಮುಕ್ತಾಯವಾಗುತ್ತದೆ. ಬಳಿಕ IPL, ಅದರ ನಂತರ ಟಿ20 ವಿಶ್ವಕಪ್​​​.!! ಹೀಗಾಗಿ ಅವರಿಗೆ ವಿಶ್ರಾಂತಿ ನೀಡದಿದ್ದರೆ, ಕ್ರಿಕೆಟ್​​​ನಲ್ಲೇ ಮುಳುಗಿಹೋಗಬೇಕಾಗುತ್ತೆ. ಅದರಿಂದ ಮತ್ತಷ್ಟು ಒತ್ತಡವೂ ಹೆಚ್ಚಾಗುತ್ತೆ. ಅದರಲ್ಲೂ ಶಮಿ-ಬೂಮ್ರಾ ಮ್ಯಾಚ್​​​ವಿನ್ನಿಂಗ್​ ಮತ್ತು ಗೇಮ್​ ಚೇಂಜರ್ಸ್​ ಆಗಿರುವ​​ ಕಾರಣ, ರೆಸ್ಟ್​ ನೀಡಲೇಬೇಕೆಂದು ತೀರ್ಮಾನಿಸಿದೆ. ಹಾಗೇ ಉಳಿದ ಆಟಗಾರರಿಗೂ ಅವಕಾಶ​ ಸಿಗಲಿ ಅನ್ನೋದು ಬಿಸಿಸಿಐ ವಾದವಾಗಿದೆ.

blank

ಮಹತ್ವದ ಪಂದ್ಯಕ್ಕೆ ಉಮೇಶ್​​​​​-ಶಾರ್ದೂಲ್​​ಗ್ಯಾಕೆ ಅವಕಾಶ.?
ಕೆನ್ನಿಂಗ್ಟನ್​ ಓವರ್​ ಮೈದಾನದಲ್ಲಿ ರಿವರ್ಸ್​​ ಸ್ವಿಂಗ್​​ ಹೆಚ್ಚು ಕೆಲಸ ಮಾಡುತ್ತೆ. ಹಾಗಾಗಿ ಇದರಲ್ಲಿ ಎಕ್ಸ್​ಪರ್ಟ್​ ಆಗಿರೋ ಹಿನ್ನೆಲೆ ಉಮೇಶ್​ ಯಾದವ್​ಗೆ, ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.ಶಾರ್ದೂಲ್​ ಠಾಕೂರ್​ ಕೂಡ ಎಫೆಕ್ಟಿವ್ ಬೌಲಿಂಗ್​​ ಜೊತೆಗೆ ಭರ್ಜರಿ ಬ್ಯಾಟಿಂಗ್​ ಕೂಡ ಮಾಡ್ತಾರೆ. ಇದರಿಂದಾಗಿ ಇಬ್ಬರಿಗೂ ಚಾನ್ಸ್​ ನೀಡುವ ಬಗ್ಗೆ, ಚರ್ಚೆ ಕೂಡ ನಡೆಯುತ್ತಿದೆ.

ಸದ್ಯ ಬೂಮ್ರಾ-ಶಮಿಗೆ ರೆಸ್ಟ್​ ನೀಡಲೇನೋ ಬಿಸಿಸಿಐ ನಿರ್ಧರಿಸಿದೆ. ಆದರೆ ಗೆಲ್ಲಲೇಬೇಕಾದ ಮಹತ್ವದ ಪಂದ್ಯಕ್ಕೆ, ವಿಶ್ರಾಂತಿ ನೀಡಬೇಕೆಂಬ ನಿರ್ಧಾರ ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ, ಹುಟ್ಟುಹಾಕಿದೆ.

Source: newsfirstlive.com Source link