ನೀನು ಹುಟ್ಟಿದ್ಮೇಲೆ ಸೌಂದರ್ಯ ಹಾಳಾಯ್ತು – ಚಪ್ಪಲಿಯಿಂದ ಮಗುವಿನ ಮೇಲೆ ತಾಯಿ ಹಲ್ಲೆ

ಚೆನ್ನೈ: ಮಗು ಜನಿಸಿದ ನಂತರ ತನ್ನ ಸೌಂದರ್ಯ ಹಾಳಾಯಿತು ಎಂದು ಹೆತ್ತ ಮಗುವಿನ ಮೇಲೆ ತಾಯಿಯೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದನ್ನೂ ಓದಿ: ಮೋದಿ ಸರ್ಕಾರ ಮಾಡಿದ ತಪ್ಪನ್ನ ರಾಜ್ಯ ಸರ್ಕಾರವೂ ಮಾಡುತ್ತಿದೆ: ಕಿಮ್ಮನೆ ರತ್ನಾಕರ್

ಆರೋಪಿ ಆಂಧ್ರ ಪ್ರದೇಶದ ಚಿತ್ತೂರಿನ ಮೂಲದ ತುಳಸಿ(22) ಎಂದು ಗುರುತಿಸಲಾಗಿದ್ದು, ಮಹಿಳೆ ಏಕಾಏಕಿ 2 ವರ್ಷದ ಮಗುವಿನ ಮೇಲೆ ಹಲ್ಲೆ ನಡೆಸಿರುವ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

ಮಗು ಹುಟ್ಟಿದ ಮೇಲೆ ತನ್ನ ಸೌಂದರ್ಯ ಹಾಳಾಯಿತು. ಹುಟ್ಟಿದ ಮಗು ನೋಡಲು ಚೆನ್ನಾಗಿಲ್ಲ. ಮಗು ತನ್ನ ಗಂಡನಂತೆ ಕೊಳಕು. ಮಗು ಏಳು ತಿಂಗಳಲ್ಲಿ ಅಕಾಕಲಿಕವಾಗಿ ಜನಿಸಿತ್ತು. ಕೈಗೆ ಹಾಕಿಕೊಂಡಿರುವ ಬಳೆಯಿಂದ ಹೊಡೆದು ಹೀಗೆ ವಿಕೃತವಾಗಿ ಹಿಂಸಿಸುವುದರ ಜೊತೆಗೆ ಮಗುವಿಗೆ ಚಪ್ಪಲಿಯಲ್ಲಿ ಮನಬಂದಂತೆ ಹೆತ್ತ ತಾಯಿಯೇ ಹಿಂಸಿಸಿ ಹೊಡೆದಿದ್ದಾಳೆ.

ತುಳಸಿಯನ್ನು ವಡಿವಾಜಗನ್ ಐದು ವರ್ಷದ ಹಿಂದೆ ವಿವಾಹವಾಗಿದ್ದರು. ಈ ದಂಪತಿ ತಮಿಳುನಾಡಿನ ಮೋತ್ತೂರು ಗ್ರಾಮದಲ್ಲಿ ವಾಸವಾಗಿದ್ದರು. ಇವರಿಗೆ ಗೋಕುಲ್(4) ಮತ್ತು ಪ್ರದೀಪ್(2) ಎಂಬ ಇಬ್ಬರು ಮಕ್ಕಳಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಸದನದ ಹೊರಗೆ, ಒಳಗೆ ಹೋರಾಟಕ್ಕೆ ಕಾಂಗ್ರೆಸ್ ಸಿದ್ದತೆ: ಡಿಕೆಶಿ

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಲ್ಲೆಡೆ ಆಕ್ರೋಶವ್ಯಕ್ತವಾಗುತ್ತಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ತಮಿಳುನಾಡು ಪೊಲೀಸರು ಮಗವಿಗೆ ಚಿತ್ರ ಹಿಂಸಿಸುತ್ತಿದ್ದ ಮಹಿಳೆಯನ್ನು ಬಂಧಿಸಿದ್ದಾರೆ.

Source: publictv.in Source link