ಸಿಲಿಕಾನ್​ ಸಿಟಿಯಲ್ಲಿ ನಕಲಿ ವೀಸಾ ಹಾವಳಿ.. ಕೇರಳ ಮೂಲಕ ಆರೋಪಿ ಅರೆಸ್ಟ್​

ಸಿಲಿಕಾನ್​ ಸಿಟಿಯಲ್ಲಿ ನಕಲಿ ವೀಸಾ ಹಾವಳಿ.. ಕೇರಳ ಮೂಲಕ ಆರೋಪಿ ಅರೆಸ್ಟ್​

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ನಕಲಿ RTPCR ವರದಿ ಪ್ರಕರಣ ಬೆನ್ನಲ್ಲೇ, ನಕಲಿ ವೀಸಾ ತಯಾರಿಸಿ ಜನರಿಗೆ ವಂಚಸುತ್ತಿದ್ದ ಆರೋಪ ಕೇಳಿ ಬಂದಿದ್ದು, ಪ್ರಕರಣ ಸಂಬಂಧಿಸಿ ಕೇರಳ ಮೂಲದ ಓರ್ವ ಆರೋಪಿಯನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

ನಿಪುಣ್ ಬಂಧಿತ ಆರೋಪಿ. ಕೇವಲ ಪಿಯುಸಿ ಓದಿರೋ ಆರೋಪಿ ನಿಪುಣ್, ಕಳೆದ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು, ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ನಗರದ ಕಾಲೇಜುಗಳಲ್ಲಿ ಸೀಟು ಕೊಡಿಸುವ ಬ್ರೊಕರ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಫೇಸ್​​ಬುಕ್​ ಮೂಲಕ ಜನರನ್ನ ಸಂಪರ್ಕ ಮಾಡ್ತಿದ್ದ ಆರೋಪಿ ವೀಸಾ ತಯಾರಿಸಿ ಕೊಡುವುದಾಗಿ, ವಾಟ್ಸಾಪ್​ನಲ್ಲಿ ಡಿಟೇಲ್ಸ್ ಕಲೆಕ್ಟ್ ಮಾಡುತ್ತಿದ್ದ. ನಂತರ ಹುಳಿಮಾವಿನ ಬಳಿಯ ತನ್ನ ರೂಂ ನಲ್ಲಿ ನಕಲಿ ವೀಸಾ ತಯಾರಿಸಿ ವಾಟ್ಸಾಪ್​ನಲ್ಲಿ ನಕಲಿ ಪಿಡಿಎಫ್ ಕಳಿಸಿ ಯಾಮಾರಿಸ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಸೇನೆಯಿಂದ ನಿವೃತ್ತಿಯಾದ ಯೋಧರಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಒಬ್ಬರಿಗೆ ವೀಸಾ ಮಾಡಿಕೊಡಲಿಕ್ಕೆ ಐವತ್ತು ಸಾವಿರದಿಂದ ಎರಡು ಲಕ್ಷದವರೆಗೂ ಹಣ ಪಡಿತಿದ್ದ ಎನ್ನಲಾಗಿದ್ದು, ಇದುವರೆಗೆ ಇದನ್ನೆ ಅಸಲಿ ವೀಸಾ ಎಂದು ನಂಬಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಮೋಸ ಹೋಗಿದ್ದಾರೆ ಎನ್ನಲಾಗಿದೆ. ಸದ್ಯ ಮೋಸ ಹೋದವರಿಂದ ಪೊಲೀಸರಿಗೆ ದೂರು ನೀಡಲಾಗಿದ್ದು, ಮಾಹಿತಿ ಕಲೆ ಹಾಕಿದ ಪೊಲೀಸ್ರು ಖಚಿತ ಮಾಹಿತಿ ಮೇರೆಗೆ ಹುಳಿಮಾವಿನ ಬಳಿಯ ಆರೋಪಿ ಮನೆ ಮೇಲೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಈ ವೇಳೆ ನಕಲಿ ವೀಸಾ ತಯಾರಿಸಲು ಬಳಸುತ್ತಿದ್ದ ಲ್ಯಾಪ್ ಟಾಪ್, ಪ್ರಿಂಟಿಂಗ್ ಮಷಿನ್, ಒಂದು ಸೀಲಿಂಗ್ ಪ್ಯಾಡ್ ಹಾಗೂ ಕೆಲ ನಕಲಿ ವೀಸಾ ಪ್ರತಿಗಳು ಪತ್ತೆಯಾಗಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link