ಹೊಸ ಎಟಿಎಂ ಕಾರ್ಡ್​​ ನೀಡ್ತೀವಿ ಅಂತೇಳಿ ಓಟಿಪಿ ಪಡೆದು ₹1 ಲಕ್ಷ ವಂಚನೆ

ಹೊಸ ಎಟಿಎಂ ಕಾರ್ಡ್​​ ನೀಡ್ತೀವಿ ಅಂತೇಳಿ ಓಟಿಪಿ ಪಡೆದು ₹1 ಲಕ್ಷ ವಂಚನೆ

ಚಿಕ್ಕಮಗಳೂರು: ಹೊಸ ಎಟಿಎಂ ಕಾರ್ಡ್ ನೀಡುವುದಾಗಿ ಹೇಳಿ 1 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೃಷ್ಣೇಗೌಡ ವಂಚನೆಗೊಳಗಾಗಿರುವ ವ್ಯಕ್ತಿಯಾಗಿದ್ದು, ಕೃಷ್ಣೇಗೌಡರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳಲಾಗಿದೆ. ಕೃಷ್ಣೇಗೌಡರಿಗೆ ಕರೆ ಮಾಡಿದ್ದ ವಂಚಕ, ತನ್ನನ್ನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದ. ಆ ಬಳಿಕ ಹೊಸ ಎಟಿಎಂ ಕಾರ್ಡ್​​ ಕೊಡೋದಾಗಿ ಹೇಳಿ, ಮೊಬೈಲ್​ಗೆ ಬಂದಿರೋ ಓಟಿಪಿ ಪಡೆದುಕೊಂಡಿದ್ದ. ಓಟಿಪಿ ನೀಡುತ್ತಿದಂತೆ ಕೆಲವೇ ಸೆಕೆಂಡ್​​ಗಳಲ್ಲಿ ಕೃಷ್ಣೇಗೌಡರ ಖಾತೆಯಿಂದ 1 ಲಕ್ಷ ರೂಪಾಯಿ ಡ್ರಾ ಆಗಿದೆ. ತಾವು ಮೋಸ ಹೋಗಿರುವುದು ಅರಿವಾದ ಬಳಿಕ ಚಿಕ್ಕಮಗಳೂರು ಸೈಬರ್ ಕ್ರೈಮ್ ಠಾಣೆಗೆ ದೂರು ದಾಖಲಿಸಿದ್ದಾರೆ.

Source: newsfirstlive.com Source link