ಇಂಡೋ-ಇಂಗ್ಲೆಂಡ್​ ಕದನಕ್ಕೆ ಓವಲ್​ ವೇದಿಕೆ -ಮೂವರ ಬ್ಯಾಟಲ್​​ಗೆ ಸಾಕ್ಷಿಯಾಗುತ್ತೆ ಪಂದ್ಯ

ಇಂಡೋ-ಇಂಗ್ಲೆಂಡ್​ ಕದನಕ್ಕೆ ಓವಲ್​ ವೇದಿಕೆ -ಮೂವರ ಬ್ಯಾಟಲ್​​ಗೆ ಸಾಕ್ಷಿಯಾಗುತ್ತೆ ಪಂದ್ಯ

ತಲಾ ಒಂದು ಪಂದ್ಯವನ್ನ ಗೆದ್ದಿರುವ ಉಭಯ ತಂಡಗಳು, ಸರಣಿಯಲ್ಲಿ ಹಿಡಿತ ಸಾಧಿಸಲು ಮಹಾಸಮರಕ್ಕೆ ಸಿದ್ಧವಾಗಿವೆ. ಅದರಲ್ಲೂ ಮೂವರು ಬೌಲರ್​​ ಮತ್ತು ಬ್ಯಾಟ್ಸ್​​ಮನ್​ಗಳ ನಡುವಿನ ರೋಚಕ ಹೋರಾಟಕ್ಕೆ, ಕೆನ್ನಿಂಗ್ಟನ್ ಓವಲ್ ಸಾಕ್ಷಿಯಾಗಲಿದೆ.

ಕೆನ್ನಿಂಗ್ಟನ್​​​​​​ ಓವೆಲ್​ನಲ್ಲಿ ನಡೆಯುವ 4ನೇ ಟೆಸ್ಟ್​ ಪಂದ್ಯ, ರೋಚಕತೆ ಹೆಚ್ಚಿಸಿದೆ. ಅತ್ತ ಇಂಗ್ಲೆಂಡ್​ ಗೆಲುವಿನ ಲಯ ಮುಂದುವರಿಸುವ ತವಕದಲ್ಲಿದ್ದರೆ, ಇತ್ತ ಸೋಲಿನಿಂದ ಗೆಲುವಿನ ಹಳಿಗೆ ಮರಳಲು ಭಾರತ ಸಜ್ಜಾಗಿದೆ. ಅದಕ್ಕಾಗಿ ತಂಡದಲ್ಲಿ ಬದಲಾವಣೆ ಸೇರಿದಂತೆ, ಹಲವು ಗೇಮ್​​ ಪ್ಲಾನ್​ಗಳೊಂದಿಗೆ ಕಣಕ್ಕಿಳಿಯುತ್ತಿವೆ. ಹೀಗಾಗಿ ಉಭಯ ತಂಡಗಳ ಕಾಳಗ ಕಣ್ತುಂಬಿಕೊಳ್ಳಲು, ವಿಶ್ವ ಕ್ರಿಕೆಟ್​​ ಕಾತರದಿಂದ ಕಾಯ್ತಿದೆ.

ರೋಹಿತ್​ ಶರ್ಮಾ V/S ಓಲ್ಲೀ ರಾಬಿನ್​​ಸನ್​
ರೋಹಿತ್​​​ ಶರ್ಮಾ ಮತ್ತು ಓಲ್ಲೀ ರಾಬಿನ್​ಸನ್​ ನಡುವಿನ ಸೂಪರ್​​ ಫೈಟ್,​ ಈ ಪಂದ್ಯಕ್ಕೂ ಸಾಕ್ಷಿಯಾಗುವ ಸಾಧ್ಯತೆ ಇದೆ. ಸರಣಿಯಲ್ಲಿ ರೋಹಿತ್​​ಗೆ ಎರಡು ಸಲ ಪೆವಿಲಿಯನ್ ದಾರಿ ತೋರಿಸಿರುವ ರಾಬಿನ್​​​ಸನ್​, ಇದೀಗ ಮತ್ತೆ ಕೈಚಳಕ ತೋರಿಸಲು ಸಿದ್ಧತೆ ನಡೆಸಿದ್ದಾರೆ. ಸರಣಿಯಲ್ಲಿ ರಾಬಿನ್​​​​ಸನ್​ 16 ವಿಕೆಟ್​ ಪಡೆದು ಲೀಡಿಂಗ್​ ವಿಕೆಟ್​ ಟೇಕರ್​ ಆಗಿದ್ದಾರೆ. ಇವರ ಸವಾಲನ್ನ ರೋಹಿತ್ ಶರ್ಮಾ ಹೇಗೆ ಎದುರಿಸುತ್ತಾರೆ ಅನ್ನೋದನ್ನ ನೋಡಬೇಕಿದೆ.

blank

ಜೋ ರೂಟ್​ V/S ಜಸ್​ಪ್ರಿತ್​ ಬೂಮ್ರಾ
ಈ ಇಬ್ಬರ ಬ್ಯಾಟಲ್​​ ಪ್ರಸ್ತುತ ಸರಣಿಯಲ್ಲಿ ರೋಚಕತೆಗೆ ಸಾಕ್ಷಿಯಾಗಿದೆ. 64, 109, 180*33, 121.. ಇದು ಸರಣಿಯಲ್ಲಿ ಇಂಗ್ಲೆಂಡ್​ ನಾಯಕ ಜೋ ರೂಟ್​ ಸಿಡಿಸಿದ ರನ್​ ಮಳೆ. ಆಡಿದ 5 ಇನ್ನಿಂಗ್ಸ್​​ಗಳಲ್ಲಿ 507 ರನ್​​ ಗಳಿಸಿರುವ ರೂಟ್​​ಗೆ, ಪೆವಿಲಿಯನ್​​ ರೂಟ್​​ ತೋರಿಸೋದು ಅಂದರೆ ಅದು ಬೂಮ್ರಾ ಮಾತ್ರ. ಈ ಸರಣಿಯಲ್ಲಿ 14 ವಿಕೆಟ್ ಕಬಳಿಸಿರುವ ಬೂಮ್ರಾ, ಉತ್ತಮ ಫಾರ್ಮ್​ನಲ್ಲಿರುವ ರೂಟ್​​​ರನ್ನೇ ಮೂರು ಬಾರಿ ಖೆಡ್ಡಾಕೆ ಕೆಡವಿದ್ದಾರೆ. ಈವರೆಗೆ ಒಟ್ಟು 6 ಸಲ ರೂಟ್ ವಿಕೆಟ್​ ಪಡೆಯುವಲ್ಲಿ ಬೂಮ್ರಾ ಯಶಸ್ಸು ಕಂಡಿದ್ದಾರೆ. ಹಾಗಾಗಿ ಈ ಬ್ಯಾಟಿಂಗ್​ ಪಿಚ್​​​ನಲ್ಲೂ ರೂಟ್​​ ವಿಕೆಟ್​ ಬಲೆಗೆ ಬೀಸಲು, ಯಾರ್ಕರ್​ ಕಿಂಗ್​ ರೆಡಿಯಾಗಿದ್ದಾರೆ.

blank

ವಿರಾಟ್​​ ಕೊಹ್ಲಿ VS ಜೇಮ್ಸ್​ ಆ್ಯಂಡರ್​ಸನ್
ಇಂಡೋ-ಇಂಗ್ಲೆಂಡ್​ ಸರಣಿಯಲ್ಲಿ ಬಿಗ್ ಫೈಟ್ ಅಂದರೆ, ವಿರಾಟ್​ ಕೊಹ್ಲಿ ವರ್ಸಸ್ ಜೇಮ್ಸ್​ ಆ್ಯಂಡರ್​ಸನ್​ರದ್ದು. ರನ್​​​ಗಾಗಿ ಪರದಾಡ್ತಿರುವ ಕೊಹ್ಲಿಯನ್ನ, ಆ್ಯಂಡರ್​​ಸನ್​ ಸುಲಭವಾಗಿ ಔಟ್​ ಮಾಡುವ ಕೆಲಸ ಮಾಡ್ತಿದ್ದಾರೆ. ಆ್ಯಂಡರ್​ಸನ್​​ಗೆ ಒಟ್ಟು 7 ಬಾರಿ ವಿಕೆಟ್​ ಒಪ್ಪಿಸಿರುವ ರನ್​ ಮಷೀನ್​, ಪ್ರಸ್ತುತ ಸರಣಿಯಲ್ಲೂ 2 ಸಲ ಔಟಾಗಿದ್ದಾರೆ. ಒಂದೇ ತರನಾದ ಎಸೆತಗಳಿಗೆ ವಿಕೆಟ್​ ಒಪ್ಪಿಸುತ್ತಿರುವ ಕೊಹ್ಲಿ ವೀಕ್ನೆಸ್​, ಇಂಗ್ಲೀಷ್ ಬೌಲರ್​ಗಳು ಎಕ್ಸ್​ಪ್ರೇಸ್ ಮಾಡಿದ್ದಾರೆ.

blank

ಇವರು ಮಾತ್ರವಲ್ಲ, ಆ್ಯಂಡರ್​ಸನ್​ ವರ್ಸಸ್ ಅಜಿಂಕ್ಯಾ ರಹಾನೆ ಕೂಡ ಇದ್ದಾರೆ. ರಹಾನೆ, ಌಂಡರ್​ಸನ್​​ಗೆ 8 ಬಾರಿ ವಿಕೆಟ್ ಒಪ್ಪಿಸಿದ್ದು, ಈ ಪಂದ್ಯದಲ್ಲೂ ಕಂಟಕವಾಗಿದ್ದಾರೆ. ಒಟ್ನಲ್ಲಿ ಬೌಲರ್ಸ್​​ ವರ್ಸಸ್​ ಬ್ಯಾಟ್ಸ್​ಮನ್​ ನಡುವಿನ ಫೈಟ್​​ನಲ್ಲಿ, ಯಾರ ಕೈ ಮೇಲಾಗುತ್ತೆ ಅನ್ನೋದನ್ನ ಕಾದು ನೋಡೋಣ.

 

Source: newsfirstlive.com Source link