ಉಡುಪಿಯ ಸಾಸ್ತಾನದಲ್ಲಿ ಇಮ್ಮಡಿ ದೇವರಾಯನಿಗೆ ಸಂಬಂಧಿಸಿದ ಪುರಾತನ ಶಾಸನ ಪತ್ತೆ

ಉಡುಪಿಯ ಸಾಸ್ತಾನದಲ್ಲಿ ಇಮ್ಮಡಿ ದೇವರಾಯನಿಗೆ ಸಂಬಂಧಿಸಿದ ಪುರಾತನ ಶಾಸನ ಪತ್ತೆ

ಉಡುಪಿ : ಜಿಲ್ಲೆಯ ಸಾಸ್ತಾನದಲ್ಲಿ ವಿಜಯನಗರ ದೊರೆ ಇಮ್ಮಡಿ ದೇವರಾಯನಿಗೆ ಸಂಬಂಧಿಸಿದ ಎನ್ನಲಾದ ಪುರಾತನ ಶಾಸನ ಪತ್ತೆಯಾಗಿದೆ. ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಂಕಬೆಟ್ಟು ಎಂಬಲ್ಲಿಯ ಶ್ರೀನಿವಾಸ ಭಟ್ ಅವರ ಮನೆಯ ಹಿಂಭಾಗದ ಬಾವಿಯ ಸಮೀಪದಲ್ಲಿ ಶಾಸನ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಸುಮಾರು 14 ನೇ ಶತಮಾನದ ಶಾಸನವನ್ನು ಇತಿಹಾಸ‌ ಮತ್ತು ಪುರಾತತ್ವ ವಿದ್ವಾಂಸರಾದ ಡಾ| ಎಸ್.ಜಿ. ಸಾಮಕ್ ಅವರು ಪತ್ತೆ ಮಾಡಿದ್ದು, ಇದನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ.
ಗ್ರಾನೈಟ್ ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು 180 ಸೆಂ.ಮೀ ಎತ್ತರ 60 ಸೆಂ.ಮೀ ಅಗಲವಿದೆ.

ಇದನ್ನೂ ಓದಿ:  ಭತ್ತದ ಗದ್ದೆಯಲ್ಲಿ ಕಳೆ ಕಿತ್ತ ನಟ, ನಿರ್ದೇಶಕ ರಿಷಬ್ ಶೆಟ್ಟಿ..

ಶಾಸನದ ಮೇಲ್ಭಾಗದಲ್ಲಿ ಬ್ರಾಹ್ಮಣ ವಟು ಹಾಗೂ ಇಕ್ಕೆಲಗಳಲ್ಲಿ ಸೂರ್ಯ-ಚಂದ್ರ ಮತ್ತು ಶಂಖ ಚಕ್ರದ ಉಬ್ಬು ಕೆತ್ತನೆಯಿದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನವನ್ನು ಬಾವಿಯ ಹಾಸುಗಲ್ಲಾಗಿ ಬಳಸಿಕೊಂಡಿರುವುದರಿಂದ ಹೆಚ್ಚಿನ ಅಕ್ಷರಗಳು ಸವೆದಿದ್ದು, ಶಾಸನದಲ್ಲಿ ಶಕ ವರುಷ 1355 (ಕ್ರಿ.ಶ 1433) ನೇ ಪ್ರಮಾದಿ ನಾಮ ಸಂವತ್ಸರದ ಉಲ್ಲೇಖವಿದೆ. ವಿಜಯನಗರವನ್ನು ಶ್ರೀ ವೀರ ಪ್ರತಾಪ ದೇವರಾಯ ಆಳ್ವಿಕೆ ಮಾಡುತ್ತಿರುವ ಕಾಲದಲ್ಲಿ ಬಾರಕೂರನ್ನು ಅಂಣಪ್ಪ ಒಡೆಯ ಪ್ರತಿಪಾಲಿಸುತ್ತಿರುವಾಗ ಬ್ರಾಹ್ಮಣರಿಗೆ ದಾನವನ್ನು ನೀಡಿರುವ ಮಾಹಿತಿಯನ್ನು ‌ಈ ಶಾಸನವು ತಿಳಿಸುತ್ತದೆ.

ಇದನ್ನೂ ಓದಿ: ಉಳಿದವರು ಕಂಡಂತೆ ನಾನಲ್ಲ, ನಟನೆಗೂ ಸೈ, ಕೃಷಿಗೂ ಜೈ ಎಂದ ರಕ್ಷಿತ್ ಶೆಟ್ಟಿ

ಇದನ್ನೂ ಓದಿ: ತಲೆಗೆ ಹಾಳೆ ಟೋಪಿ ತೊಟ್ಟು, ಮುಖಕ್ಕೆ ಮಾಸ್ಕ್​ ಹಾಕಿ ಮತ್ತೆ ಗದ್ದೆಗೆ ಇಳಿದ ಕೇಂದ್ರ ಸಚಿವೆ

Source: newsfirstlive.com Source link