ಈ ಬಾರಿ ಕನ್ನಡಿಗರಿಗೇ ಕಮಿಷನರ್ ಪಟ್ಟ.. ಬೆಂಗಳೂರಿಗೆ ನೂತನ ಸಾರಥಿಯಾಗೋದು ಇವರೇನಾ..?

ಈ ಬಾರಿ ಕನ್ನಡಿಗರಿಗೇ ಕಮಿಷನರ್ ಪಟ್ಟ.. ಬೆಂಗಳೂರಿಗೆ ನೂತನ ಸಾರಥಿಯಾಗೋದು ಇವರೇನಾ..?

ಬೆಂಗಳೂರು: ಸಿಎಂ ಬದಲಾವಣೆ ಬಿಸಿಯಲ್ಲಿ ಕೈಬಿಟ್ಟಿದ್ದ ಕಮಿಷನರ್ ಬದಲಾವಣೆ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ ಕನ್ನಡಿಗರಿಗೇ ಕಮಿಷನರ್ ಪಟ್ಟ ಕೊಡಬೇಕಂತ ಸಿಎಂ ಬಸವರಾಜ್ ಬೊಮ್ಮಾಯ ನಿರ್ಧಾರ ಮಾಡಿದ್ದಾರಂತೆ. ಹೀಗಾಗಿ ಡಿಜಿ ಮತ್ತು ಐಜಿಪಿ ಬಳಿ ರ್ಯಾಂಕಿಂಗ್ ಪಟ್ಟಿ ಕೇಳಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಗೃಹ ಸಚಿವರಾಗಿದ್ದಾಗ ಡಿಪಾರ್ಟ್​​ಮೆಂಟ್ ಬಗ್ಗೆ ಅರಿತಿದ್ದ ಸಿಎಂ ಬೊಮ್ಮಾಯಿ.. ಈ ಬಾರಿ ಕರ್ನಾಟಕದ ಕನ್ನಡಿಗರಿಗೆ ಕಮಿಷನರ್ ಪಟ್ಟ ಕೊಡಲು ತಯಾರಿ ನಡೆಸಿದ್ದಾರಂತೆ. ಆ ಲೆಕ್ಕದಲ್ಲಿ ಬಹುತೇಕ ಬಳ್ಳಾರಿ ಮೂಲದವರಾದ ಬಿ ದಯಾನಂದ್​ಗೆ ಕಮಿಷನರ್ ಪಟ್ಟ ಒಲಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರು ಕಮಿಷನರ್ ಆಯ್ಕೆ ವಿಚಾರ: ಜೋಡೆತ್ತು vs RSS​..!

ಭಾಷೆ ಮೇಲಿನ ಹಿಡಿತ, ಜನ ಸಾಮಾನ್ಯರನ್ನ ಸಂಭಾಳಿಸುವುದು, ನಗರವನ್ನ ನಿಭಾಯಿಸುವ ಶಕ್ತಿ ಈ ಮೂರು ಆಧಾರದ ಮೇಲೆ ಬೆಂಗಳೂರಿಗೆ ನೂತನ ಸಾರಥಿ ಆಯ್ಕೆಯಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಕಮಿಷನರ್ ಕಮಲ್​ಪಂತ್ ಖುದ್ದಾಗಿ ಕೋರ್ಟ್​ ಮುಂದೆ ಹಾಜರಾಗ್ಬೇಕು- ಹೈಕೋರ್ಟ್ ಹೀಗಂದಿದ್ದೇಕೆ..?

ಇತ್ತ ದಯಾನಂದ್ ಈಗಾಗಲೇ ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ನಲ್ಲಿ ಪ್ರಮುಖ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಖಡಕ್ ನಿರ್ಧಾರ ಕೈಗೊಳ್ಳುವಲ್ಲಿ ದಯಾನಂದ್ ನಿಸ್ಸೀಮರು. ಮಿಗಿಲಾಗಿ ಅವರು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗುಪ್ತಚರ ಇಲಾಖೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸ್ ಆಯುಕ್ತರ ಹುದ್ದೆಗೆ ಅವರನ್ನೇ ನಿಯೋಜಿಸಲು ಸಿಎಂ ಚಿಂತನೆ ನಡೆಸಿದ್ದಾರಂತೆ. ಈ ಬಗ್ಗೆ ನ್ಯೂಸ್ ಫಸ್ಟ್​​ಗೆ ಪೊಲೀಸ್ ಇಲಾಖೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link