ತಂದೆ ಸಮಾಧಿ ಬಳಿ ಬಾಲಕಿ ಹುಟ್ಟುಹಬ್ಬ ಆಚರಣೆ

ಕೊಪ್ಪಳ: ತಂದೆಯ ಸಮಾಧಿ ಬಳಿ ಬಾಲಕಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ವೀಡೀಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಸ್ಪಂದನ ತನ್ನ ಎಂಟನೇ ವರ್ಷದ ಹುಟ್ಟುಹಬ್ಬವನ್ನು ತಂದೆ ಮಹೇಶ್ ಕೋನಸಾಗರ ಅವರ ಸಮಾಧಿ ಬಳಿ ಕೇಕ್ ಕಟ್ ಮಾಡಿ ಸಮಾಧಿಗೆ ಕೇಕ್ ಅರ್ಪಿಸಿರುವ ಮೂಲಕ ಆಚರಿಸಿಕೊಂಡಿದ್ದಾಳೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೋ ನೋಡಿದವರೆಲ್ಲ ಸ್ಪಂದನ ಮೇಲೆ ಅನುಕಂಪ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ : ಜಿ.ಟಿ.ದೇವೇಗೌಡ ಪಕ್ಷ ತೊರೆದರೆ ಜೆಡಿಎಸ್‍ಗೆ ನಷ್ಟ : ವೈ.ಎಸ್.ವಿ.ದತ್ತ

ಕೊರೊನಾದಿಂದ ತಂದೆ ಸಾವು!
ಮಹೇಶ್ ಕೋನಸಾಗರ ಅವರಿಗೆ ಕಳೆದ ಮೇ ತಿಂಗಳಲ್ಲಿ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಈ ಕಾರಣ ತಂದೆಯ ನೆನಪಲ್ಲಿ ಸಮಾಧಿ ಬಳಿ ಸ್ಪಂದನ ಮತ್ತೆ ಅವರ ಕುಟುಂಬದವರು ಮಹೇಶ್ ಅವರ ಸಮಾಧಿ ಬಳಿ ಹುಟ್ಟುಹಬ್ಬ ಮಾಡಿದ್ದಾರೆ.ಇದನ್ನೂ ಓದಿ :ಅತ್ಯಾಚಾರಕ್ಕೆ ಯತ್ನ – ಚೆನ್ನಾಗಿ ಹೊಡೆದು ಕಾಮುಕನಿಗೆ ಬುದ್ದಿ ಕಲಿಸಿದ ಮಹಿಳೆ

Source: publictv.in Source link