ಹಿಂದಿ ಬಿಗ್​​ಬಾಸ್​​ 13ರ ವಿನ್ನರ್ ಸಿದ್ದಾರ್ಥ್​ ಶುಕ್ಲಾ ಹೃದಯಾಘಾತದಿಂದ ನಿಧನ

ಹಿಂದಿ ಬಿಗ್​​ಬಾಸ್​​ 13ರ ವಿನ್ನರ್ ಸಿದ್ದಾರ್ಥ್​ ಶುಕ್ಲಾ ಹೃದಯಾಘಾತದಿಂದ ನಿಧನ

ಬಾಲಿವುಡ್​ ನಟ, ಹಿಂದಿ ಬಿಗ್​​ಬಾಸ್​​ 13ನೇ ಆವೃತ್ತಿಯ ವಿಜೇತ ಸಿದ್ದಾರ್ಥ್​ ಶುಕ್ಲಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 40 ವರ್ಷದ ಸಿದ್ದಾರ್ಥ್​ ಅವರು ಇತ್ತೀಚೆಗೆ ಬಿಗ್​ಬಾಸ್​ ಒಟಿಟಿ ಹಾಗೂ ಡ್ಯಾನ್ಸ್​​ ಡಿವೈನ್​​​ 3 ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು.

ಕೊನೆಯದಾಗಿ ಏಕ್ತಾ ಕಪೂರ್ ಅವರ ಬ್ರೋಕನ್​​​ ಬಟ್​​ ಬ್ಯೂಟಿಫುಲ್​​ 3 ರಿಯಾಲಿಟಿ ಶೋನಲ್ಲಿ ಸಿದ್ದಾರ್ಥ್ ಶುಕ್ಲಾ ಕಾಣಿಸಿಕೊಂಡಿದ್ದರು. 1980 ಡಿ.12 ರಂದು ಜನಿಸಿದ್ದ ಸಿದ್ದಾರ್ಥ್​​, ಹಲವು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಸಿದ್ದಾರ್ಥ್​ ಅವರ ಸಾವಿನ ಸುದ್ದಿ ವರದಿಯಾಗುತ್ತಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

 

Source: newsfirstlive.com Source link