ಐಪಿಎಲ್​ ಕ್ರಿಕೆಟಿಗರಿಗೆ ಇಂಜುರಿ ಪ್ರಾಬ್ಲಂ -ರಾಜಸ್ಥಾನ, ಸಿಎಸ್​ಕೆ, ಡೆಲ್ಲಿಗೆ ಇಂಜುರಿ ಶಾಕ್​

ಐಪಿಎಲ್​ ಕ್ರಿಕೆಟಿಗರಿಗೆ ಇಂಜುರಿ ಪ್ರಾಬ್ಲಂ -ರಾಜಸ್ಥಾನ, ಸಿಎಸ್​ಕೆ, ಡೆಲ್ಲಿಗೆ ಇಂಜುರಿ ಶಾಕ್​

ಎರಡನೇ ಹಂತದ​ ಐಪಿಎಲ್​​​​​ ಆರಂಭಕ್ಕೆ, ಕೆಲವೇ ದಿನಗಳಷ್ಟೆ ಬಾಕಿ ಉಳಿದಿದೆ. ಆದರೆ ಅದಕ್ಕೂ ಮುನ್ನವೇ ಸಾಲು ಸಾಲು ಗಾಯಗಳು, ಕ್ರಿಕೆಟಿಗರನ್ನ ಬಿಡದೆ ಕಾಡ್ತಿದೆ. ಹಾಗಾದರೆ ಯಾವೆಲ್ಲ ಕ್ರಿಕೆಟಿಗರು ಇಂಜುರಿಗೆ ಸಿಲುಕಿದ್ದಾರೆ? ಈ ಬಗ್ಗೆ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ ನೋಡಿ.

ಎರಡನೇ ಹಂತದ 14ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್ ಆರಂಭಕ್ಕೆ, ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು, ತಂಡದ ಆಟಗಾರರೊಂದಿಗೆ UAEಗೆ ಹಾರಿದ್ದಲ್ಲದೆ, ಕೆಲ ತಂಡಗಳು ಕ್ವಾರಂಟೀನ್​ ಪೂರ್ಣಗೊಳಿಸಿ ಅಭ್ಯಾಸದಲ್ಲಿ ತೊಡಗಿವೆ. ಆದರೆ ಟೂರ್ನಿ ಆರಂಭಕ್ಕೆ 19 ದಿನಗಳಷ್ಟೆ ಬಾಕಿ ಉಳಿದಿರುವಾಗ, ಇಂಜುರಿ ಕಾಟ ಶುರುವಾಗಿದೆ. ಅದರಲ್ಲೂ ಗಾಯಾಳು ಭಾರತ ಆಟಗಾರರ ಪಟ್ಟಿ ಉದ್ದದ್ದೇ ಇರೋದು, ಫ್ರಾಂಚೈಸಿಗಳನ್ನ ಚಿಂತೆಗೀಡು ಮಾಡಿದೆ.

blank

ಸದ್ಯ RCB ತಂಡದ ಸ್ಟಾರ್ ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್ ಗಾಯದ ಸಮಸ್ಯೆಯಿಂದಾಗಿ​, IPL​ನಿಂದಲೇ ಹೊರಬಿದ್ದಿದ್ದಾರೆ. ಕೈ ಬೆರಳಿಗೆ ಗಾಯವಾದ ಕಾರಣ, ಐಪಿಎಲ್ ಟೂರ್ನಿಗೆ ಲಭ್ಯರಿಲ್ಲ. ಹಾಗೇ ಸುಂದರ್​​ ಸಾಲಿನಲ್ಲಿ ಹಲವು ಆಟಗಾರರು ಇರೋದು ಅಚ್ಚರಿ ಮೂಡಿಸಿದೆ. CSK ಸ್ಟಾರ್​ ಓಪನರ್​​ ಫಾಫ್​ ಡು ಪ್ಲೆಸಿಸ್​ ಇಂಜುರಿಯಿಂದ PSLನಿಂದ ಹೊರಗುಳಿದಿದ್ರು. ಆದರೆ CPLಗೆ ಆಗಮಿಸಿದ್ರು. ಆದರೂ ಅವರ ಫಿಟ್​​​ನೆಸ್, ಒಂದು ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿದೆ.

ಇನ್ನೂ ಫಿಟ್​ ಆಗಿಲ್ಲ ಶುಭ್​ಮನ್​ ಗಿಲ್​ – ಕೆಕೆಆರ್​​ಗೆ ಆಘಾತ.!

ಕೆಕೆಆರ್ ಆರಂಭಿಕ ಬ್ಯಾಟ್ಸ್‌ಮನ್ ಎಡಗೈ ಇಂಜುರಿಯಾಗಿದ್ದು, ಐಪಿಎಲ್​ ಆಡೋದು ಅನುಮಾನ ಎನ್ನಲಾಗ್ತಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​ ನಂತರ, ಇಂಗ್ಲೆಂಡ್‌ ಸರಣಿಗೂ ಮುನ್ನವೇ ಗಾಯಗೊಂಡಿದ್ದ ಗಿಲ್​, ಇನ್ನೂ ಹಂಡ್ರೆಡ್ ಪರ್ಸಂಟ್​ ಫಿಟ್​ ಆಗಿಲ್ಲ. ಸದ್ಯ ಕೆಕೆಆರ್ ಕ್ಯಾಂಪ್​​ ಸೇರಿದ್ರೂ ಸಂಪೂರ್ಣವಾಗಿ ಫಿಟ್​​ ಆಗೋಕೆ ಹೋರಾಡುತ್ತಿದ್ದಾರೆ. ಕೆಕೆಆರ್​​ನ ಮತ್ತೊಬ್ಬ ಆಟಗಾರ​ ವರುಣ್​​ ಚಕ್ರವರ್ತಿ ಕೂಡ, ಫಿಟ್‌ನೆಸ್ ಸಮಸ್ಯೆಗೆ ಸಿಲುಕಿದ್ದಾರೆ. ಲಂಕಾ ಪ್ರವಾಸದ ಬಳಿಕ ಎನ್​ಸಿಎನಲ್ಲಿ ಪುನರ್ವಸತಿಗೆ ಒಳಗಾದರೂ, ಫಿಟ್​ನೆಸ್​​ ಮೇಲೆ ದೊಡ್ಡ ಪ್ರಶ್ನೆ ಹುಟ್ಟಿಕೊಂಡಿದೆ.

blank

ಮುಂಬೈ ಇಂಡಿಯನ್ಸ್ ಆಲ್​​ರೌಂಡರ್ ಹಾರ್ದಿಕ್​ ಪಾಂಡ್ಯ ಫಿಟ್​​ನೆಸ್​ ಜೊತೆಗೆ ಫಾರ್ಮ್​ ಸಮಸ್ಯೆಗೂ ಸಿಲುಕಿಕೊಂಡಿದ್ದಾರೆ. ಇದು ಶ್ರೀಲಂಕಾ ಪ್ರವಾಸದಲ್ಲಿ ಕಂಡುಬಂದಿತ್ತು. NCAನಲ್ಲಿ ಒಂದು ತಿಂಗಳು ಕಳೆದಿದ್ದ ಹಾರ್ದಿಕ್​, ವಿಶ್ವಕಪ್​ ತಂಡದ ಮೇನ್​ ಪ್ಲೇಯರ್ ಆಗಿದ್ದಾರೆ​​. ಹಾಗಾಗಿ ಅವರನ್ನ ಮುಂಬೈ ತಂಡ, ಬಹಳ ಎಚ್ಚರಿಕೆಯಿಂದ ಬಳಸಿಕೊಳ್ಳುವ ಸಾಧ್ಯತೆ ಇದೆ. ಇನ್ನ ಡೆಲ್ಲಿ ಕ್ಯಾಪಿಟಲ್ಸ್​​ಗೂ ಇಂಜುರಿ ಶಾಕ್​ ತಗುಲಿದೆ. ವೇಗಿ ಆವೇಶ್​ ಖಾನ್​ ಕೂಡ ಗಾಯಗೊಂಡಿದ್ದು, ಸಂಪೂರ್ಣ ಚೇತರಿಸಿಕೊಂಡಿಲ್ಲ. ಇಂಗ್ಲೆಂಡ್​ ಕೌಂಟಿ ತಂಡದ ವಿರುದ್ಧ ಆಡ್ತಿದ್ದಾಗ, ಆವೇಶ್​ ಕೈಬೆರಳು ಮುರಿದಿತ್ತು.

ಕೇವಲ ಇವರಷ್ಟೆ ಅಲ್ಲ, ರಾಜಸ್ಥಾನ್​ ರಾಯಲ್ಸ್​ ತಂಡದ ಆಲ್​ರೌಂಡರ್​​ ಲಿಯಾಮ್​ ಲಿವಿಂಗ್​ಸ್ಟೋನ್​, ಡೆಲ್ಲಿ ಕ್ಯಾಪಿಟಲ್ಸ್​​ನ ಸ್ಟೀವ್ ಸ್ಮಿತ್, ಇಶಾಂತ್ ಶರ್ಮಾ, ಚೆನ್ನೈನ ರವೀಂದ್ರ ಜಡೇಜಾ, ಮುಂಬೈ ತಂಡದ ಕ್ವಿಂಟನ್ ಡಿ ಕಾಕ್, ಕೀರನ್ ಪೊಲಾರ್ಡ್ ಸೇರಿದಂತೆ ಹಲವರಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಯಾರೆಲ್ಲಾ ಕಣಕ್ಕಿಳಿಯುತ್ತಾರೋ ಅನ್ನೋದು ಕುತೂಹಲ ಮೂಡಿಸಿದೆ.

Source: newsfirstlive.com Source link